ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಇಸ್ರೇಲ್ ವೀಸಾ ಕಚೇರಿ ಬೆಂಕಿಗೆ ಉಗ್ರರು ಕಾರಣ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು ಮಾರ್ಚ್ 03 : ಬೆಂಗಳೂರಿನ ಇಸ್ರೇಲ್ ವೀಸಾ ಕಚೇರಿ ಮೇಲೆ ನಡೆದದ್ದು ಭಯೋತ್ಪಾದಕ ದಾಳಿಯೇ? ಎಂಬ ಅನುಮಾನ ವ್ಯಕ್ತವಾಗಿದೆ. ಚರ್ಚ್‌ಸ್ಟ್ರೀಟ್ ಬಾಂಚ್ ಸ್ಫೋಟ ಪ್ರಕರಣಕ್ಕೂ ವೀಸಾ ಕಚೇರಿ ಮೇಲಿನ ದಾಳಿಗೂ ಸಂಬಂಧವಿರುವ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ.

2015ರ ನವೆಂಬರ್ 29ರಂದು ಬೆಂಗಳೂರಿನಲ್ಲಿರುವ ಇಸ್ರೇಲ್ ವೀಸಾ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪೊಲೀಸರು ಕಟ್ಟಡಗಳ ಮಾಲೀಕರ ನಡುವಿನ ದ್ವೇಷದಿಂದಾಗಿ ಈ ಘಟನೆ ನಡೆದಿದೆ. ಇದೊಂದು ಚಿಕ್ಕ ಪ್ರಕರಣ ಎಂದು ಹೇಳಿದ್ದರು. [Church Street ಬಾಂಬ್ ಸ್ಫೋಟದ ಆರೋಪಿ ಬಂಧನ]

 nia

ರಾಷ್ಟ್ರೀಯ ತನಿಖಾದಳ ಚರ್ಚ್‌ಸ್ಟ್ರೀಟ್ ಬಾಂಬ್ ಸ್ಫೋಟ ಮತ್ತು ವೀಸಾ ಕಚೇರಿ ಪ್ರಕರಣದ ನಡುವೆ ಸಂಬಂಧವಿರುವ ಬಗ್ಗೆ ತನಿಖೆ ನಡೆಸುತ್ತಿದೆ. ಈ ಎರಡೂ ಪ್ರಕರಣದಲ್ಲಿ ಆಲಂ ಜೇಬ್ ಅಫ್ರಿದಿ ಭಾಗಿಯಾಗಿದ್ದಾನೆ ಎಂದು ಶಂಕಿಸಿದೆ. ಐಎಸ್‌ಐಎಸ್‌ ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿದ್ದ ಆರೋಪದ ಮೇಲೆ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಅಫ್ರಿದಿ ಬಂಧಿಸಲಾಗಿದೆ. [ಕೋಕೋನಟ್ ಗ್ರೋವ್ ಹೋಟೆಲ್ ನಲ್ಲಿ ಬಾಂಬ್ ಇಡಬೇಕಿತ್ತು]

ಹೈದರಾಬಾದ್‌ನಲ್ಲಿಯೂ ಆಲಂ ಜೇಬ್ ಅಫ್ರಿದಿ ವಿರುದ್ಧ ಪ್ರಕರಣಗಳಿದ್ದು, ಸದ್ಯ, ಆತನ ವಿಚಾರಣೆ ಅಲ್ಲಿ ನಡೆಯುತ್ತಿದೆ. ವಿಚಾರಣೆ ವೇಳೆ ಆತ ಪೊಲೀಸರ ಮುಂದೆ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಇಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತನ ವಿಚಾರಣೆ ನಡೆಸಿರುವ ಎನ್‌ಐಎ ಬಾಂಬ್ ಸ್ಫೋಟದಲ್ಲಿ ಆತನ ಕೈವಾಡವಿದೆ ಎಂದು ಖಚಿತಪಡಿಸಿದೆ.

ಸಂಬಂಧ ಹೇಗೆ? : ಚರ್ಚ್‌ಸ್ಟ್ರೀಟ್‌ ಮತ್ತು ಇಸ್ರೇಲ್ ಕಚೇರಿಯಲ್ಲಿ ಲಭ್ಯವಾದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಒಬ್ಬನೇ ವ್ಯಕ್ತಿಯ ದೃಶ್ಯಗಳು ಸೆರೆಯಾಗಿವೆ. ಐಎಸ್‌ಐಎಸ್ ಪರವಾಗಿ ಕೆಲಸ ಮಾಡುತ್ತಿದ್ದ ಅಫ್ರಿದಿ ಇಸ್ರೇಲ್‌ಗಳ ಮೇಲೆ ದ್ವೇಷ ಹೊಂದಿದ್ದರು. ಚರ್ಚ್‌ಸ್ಟ್ರೀಟ್‌ನಲ್ಲಿಯೂ ಇಸ್ರೇಲಿಗಳನ್ನು ಕೊಲ್ಲುವ ಉದ್ದೇಶದಿಂದ ಬಾಂಬ್ ಇಡಲಾಗಿತ್ತು ಎಂಬುದು ಹಿಂದಿನ ವಿಚಾರಣೆ ವೇಳೆ ತಿಳಿದುಬಂದಿತ್ತು.

English summary
Was the attack on the Israeli visa centre at Bengaluru a terror strike? On November 29 2015 there was a fire at the Israeli visa centre in Bengaluru. The local police had dismissed it as a minor incident and even said it was a result of personal rivalry between the owners of the building. However the NIA is attempting to draw a link between this attack and the Church Street blasts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X