ಮಾರ್ಚ್ 1ರಂದು ಬೆಂಗಳೂರು ರನ್ನರ್ಸ್ ಯೂನಿಟಿ ರನ್
ಬೆಂಗಳೂರು, ಫೆ. 20 : ಬೆಂಗಳೂರು ರನ್ನರ್ಸ್ ಯೂನಿಟಿ ರನ್ (ಬಿಆರ್‌ಯುಆರ್) ಮಾರ್ಚ್ 1ರಂದು ನಡೆಯಲಿದೆ. ನಗರದ ಹಲವು ಓಟದ ತಂಡಗಳು ಜಂಟಿಯಾಗಿ ಇದನ್ನು ಆಯೋಜಿಸಿದ್ದು, ಎಲ್ಲರನ್ನೂ ಒಂದೆಡೆ ಸೇರಿಸಲು ಇದು ವೇದಿಕೆಯಾಗಲಿದೆ.
ಹಲವು ಚಟುವಟಿಕೆಗಳಿಂದ ಕೂಡಿದ ಈ ಬಾರಿಯ ಬೆಂಗಳೂರು ರನ್ನರ್ಸ್ ಯೂನಿಟಿ ರನ್ 2015 ಕನಕಪುರ ರಸ್ತೆಯ Elim Resorts ನಲ್ಲಿ ನಡೆಯಲಿದೆ. ರನ್ನರ್‌ಗಳು ರೆಸಾರ್ಟ್ ಸುತ್ತಲಿನ ಕಿರು ಅರಣ್ಯ ಪ್ರದೇಶದಲ್ಲಿ ಈ ಬಾರಿ ಓಡಬೇಕಾಗಿದೆ.

ಇತರ ಚಟುವಟಿಕೆಗಳು : ರನ್ನರ್‌ಗಳ ತಂಡಕ್ಕೆ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಗಾಯಕರು ಮತ್ತು ಸಂಗೀತಗಾರರು ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಓಟದಲ್ಲಿ ಭಾಗವಹಿಸುವ ಮಕ್ಕಳಿಗಾಗಿ ಹಲವು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. [ಬೆಂಗಳೂರು ಪಿಂಕಥಾನ್ ಗೆ ಹೆಸರು ನೋಂದಾಯಿಸಿದ್ದೀರಾ?]
ಓಟದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವವರು ತಮ್ಮ ಮತ್ತು ಕುಟುಂಬ ಸದಸ್ಯರ ಹೆಸರುಗಳನ್ನು 300 ರೂ. ಶುಲ್ಕವನ್ನು ಪಾವತಿ ಮಾಡಿ ನೋಂದಾಯಿಸಬಹುದಾಗಿದೆ. ಹೆಸರನ್ನು ನೋಂದಾಯಿಸಿಕೊಳ್ಳಲು Click2Race ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಫೇಸ್ ಬುಕ್ ಪುಟ : Jayanagar Jaguars












Click it and Unblock the Notifications