ಬೆಂಗಳೂರು: ಪುಟ್ಟೇನಹಳ್ಳಿ ಕೆರೆ ಹಬ್ಬದಲ್ಲಿ ಪಾಲ್ಗೊಳ್ಳಿ
ಬೆಂಗಳೂರು, ಫೆ. 19 : ಫೆಬ್ರವರಿ 21, ಶನಿವಾರ ಜೆಪಿ ನಗರದ ಪುಟ್ಟೇನಹಳ್ಳಿ ಕೆರೆ ಸಂರಕ್ಷಣೆ ಜಾಗೃತಿ ಹಿನ್ನಲೆಯಲ್ಲಿ 'ಕೆರೆ ಹಬ್ಬ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶನಿವಾರ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮಗಳು ಆರಂಭವಾಗಲಿದ್ದು ರಾತ್ರಿವರೆಗೆ ನಡೆಯಲಿದೆ. ಬಿಬಿಎಂಪಿ ನೆರವಿನಲ್ಲಿ ಕೆರೆ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿದ್ದು ಜನರಲ್ಲಿ ಇನ್ನು ಹೆಚ್ಚಿನ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ.[ಯಡಿಯೂರು ಕೆರೆ, ಉದ್ಯಾನದ ಮೇಲೊಂದು ಪಕ್ಷಿ ನೋಟ]

ಪ್ರವೇಶ ಉಚಿತವಾಗಿದ್ದು, ಕ್ರಾಫ್ಟ್ ಮೇಕಿಂಗ್, ಸಂಗೀತ, ವ್ಯಂಗ್ಯಚಿತ್ರಕಾರ ಅನಂತ ಅವರಿಂದ ವಿನೂತನ ಕಾರ್ಯಕ್ರಮ, ಸಸ್ಯಗಳ ಪ್ರದರ್ಶನ ಮತ್ತು ಮಾರಾಟ, ಪಕ್ಷಿ ವೀಕ್ಷಣೆ, ಫೋಟೋಗ್ರಫಿ ಮತ್ತು ನೇಚರ್ ವಾಕ್ ನಂಥ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗೆ http://www.puttenahallilake.in/ ವೆಬ್ ತಾಣಕ್ಕೆ ಭೇಟಿ ನೀಡಬಹುದು.













Click it and Unblock the Notifications