ರೌಡಿ ಶೀಟರ್ ನಾಗನ ಮತ್ತೊಂದು ಮನೆ ಶೋಧ; ಮಹತ್ವದ ಡೈರಿ ವಶ

Posted By:
Subscribe to Oneindia Kannada

ಬೆಂಗಳೂರು, ಮೇ 18: ರೌಡಿ ಶೀಟರ್ ವಿ. ನಾಗರಾಜ್ ಗೆ ಸೇರಿದ ಮತ್ತೊಂದು ಮನೆಯಲ್ಲಿ ಬೆಂಗಳೂರು ಪೊಲೀಸರು ಶೋಧ ನಡೆಸಿದ್ದು, ಅದರಲ್ಲಿ ಬಾಂಬ್ ಹಾಗೂ ಹಲವಾರು ಮಾರಕಾಸ್ತ್ರಗಳು ಪತ್ತೆಯಾಗಿವೆ. ಇದರ ಜತೆಗೆ ಮಹತ್ವದ ದಾಖಲೆಗಳುಳ್ಳ ಡೈರಿಯೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಶ್ರೀರಾಂಪುರದಲ್ಲಿ ನಾಗರಾಜ್ ಗೆ ಸೇರಿದ ಮನೆಯ ಮೇಲೆ ಏ. 14ರಂದು ಪೊಲೀಸರು ದಾಳಿ ನಡೆಸಿದ್ದರು. ಆಗ, ನಾಗ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಆತ ತಮಿಳುನಾಡಿನಲ್ಲಿ ಸೆರೆ ಸಿಕ್ಕಿದ್ದಾನೆ.[ಮೇ 22ರ ವರೆಗೆ ಬಾಂಬ್ ನಾಗ ಮತ್ತು ಮಕ್ಕಳು ಪೊಲೀಸ್ ಕಸ್ಟಡಿಗೆ]

Bengaluru police raids rowdy sheeter Nagaraja's other residence

ಆತ ಸೆರೆ ಸಿಕ್ಕ ನಂತರ ಆತನಿಗೆ ಸಂಬಂಧಿಸಿದ ಮತ್ತೊಂದು ಮನೆಯ ಮೇಲೆ ಮೇ. 17ರಂದು ದಾಳಿ ನಡೆಸಿರುವ ಪೊಲೀಸರು ಅಲ್ಲಿ ಸಿಕ್ಕ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.[ರೌಡಿ ಶೀಟರ್ ನಾಗನ ಪತ್ತೆಯ ಹಿಂದಿನ ರೋಚಕ ಕಹಾನಿ]

ಇವುಗಳ ಜತೆಗೆ ವಶಪಡಿಸಿಕೊಳ್ಳಲಾಗಿರುವ ಡೈರಿಯಲ್ಲಿ ಕೆಲ ರೌಡಿಗಳು ಹಾಗೂ ಉದ್ದಿಮೆದಾರರ ಫೋನ್ ಸಂಖ್ಯೆಗಳು ಹಾಗೂ ವಿವರಗಳಿವೆ ಎಂದು ಹೇಳಲಾಗಿದೆ.[ಬೆಂಗಳೂರು ಪೊಲೀಸರ ಬಲೆಗೆ ನಾಗ, ಗಾಂಧಿ ಮತ್ತು ಶಾಸ್ತ್ರಿ]

ಏತನ್ಮಧ್ಯೆ, ನಾಗರಾಜ್ ನ ಕಪ್ಪು ಹಣ ಬಿಳಿಯಾಗಿಸುವ ದಂಧೆಗೆ ಸಾಥ್ ನೀಡುತ್ತಿದ್ದ ಆತನ ಪತ್ನಿ ಲಕ್ಷ್ಮಿ ಅವರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚೆಗೆ ನಾಗ ಹಾಗೂ ಆತನ ಪುತ್ರರು ಸೆರೆ ಸಿಕ್ಕ ನಂತರ ತಲೆಮರೆಸಿಕೊಂಡಿರುವ ಲಕ್ಷ್ಮಿ ಪತ್ತೆಗೆ ಪೊಲೀಸರು ಪ್ರಯತ್ನ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru police officials conducted a fresh raid on Rowdy Sheeter V. Nagaraj's other house in Bengaluru and recovered a dairy and some weapon.
Please Wait while comments are loading...