ನಮ್ಮ ಮೆಟ್ರೋ ಗ್ರೀನ್ ಲೈನ್ ಜೂನ್ 1 ರಿಂದ ಶುಭಾರಂಭ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 19: ಬೆಂಗಳೂರಿಗರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಮೆಜೆಸ್ಟಿಕ್, ಯಶವಂತಪುರ, ಕೆ.ಆರ್.ಮಾರ್ಕೆಟ್ ಗಳನ್ನು ಬೆಸೆಯುವ ನಮ್ಮ್ ಮೆಟ್ರೋ ಗ್ರೀನ್ ಲೈನ್ ಸೇವೆ ಜೂನ್ 1 ರಿಂದ ಶುಭಾರಂಭಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಮೂಲಗಳು ತಿಳಿಸಿವೆ.

ಈಗಾಗಲೇ ರೈಲ್ವೇ ಭದ್ರತಾ ಆಯುಕ್ತರು ಗ್ರೀನ್ ಲೈನ್ ಗೆ ಗ್ರೀನ್ ಸಿಗ್ನಲ್ ತೋರಿಸಿರುವುದರಿಂದ ಯಾವ ಸಮಯದಲ್ಲಿ ಬೇಕಾದರೂ ಮೆಟ್ರೊ ಕಾರ್ಯಾರಂಭ ಮಾಡಬಹುದು. ಆದರೆ ಗ್ರೀನ್ ಲೈನ್ ಉದ್ಘಾಟನೆಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರನ್ನು ಆಮಂತ್ರಿಸಲಾಗುತ್ತಿದ್ದು, ಅವರ ಭೇಟಿಗೆ ಇನ್ನೂ ಅವಕಾಶ ಸಿಕ್ಕಿಲ್ಲದ ಕಾರಣ ಉದ್ಘಾಟನೆಗೆ ಸಮಯ ಬೇಕಾಗಿದೆ ಎಂದು ಬಿಎಂಆರ್ ಸಿಎಲ್ ಮೂಲಗಳು ತಿಳಿಸಿವೆ.[ಬೆಂಗಳೂರು ನಮ್ಮ ಮೆಟ್ರೋ ಗ್ರೀನ್ ಲೈನ್: ಇನ್ನೂ ವಿಳಂಬ ಯಾಕೆ?]

Bengaluru Namma Metro Green line will be opening on June 1

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Most awaited Bengaluru's Namma Metro Green line will be opening on June 1, BMRCL sources said.
Please Wait while comments are loading...