Get Updates
Get notified of breaking news, exclusive insights, and must-see stories!

ಉಕ್ಕಿನ ಸೇತುವೆ ನಿರ್ಮಾಣ ಸದ್ಯಕ್ಕಿಲ್ಲ: ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರದ ಉದ್ದೇಶಿತ ಬಹುಕೋಟಿ ಉಕ್ಕಿನ ಸೇತುವೆ(Steel Flyover) ನಿರ್ಮಾಣ ಸದ್ಯಕ್ಕೆ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ವಕೀಲರು ಗುರುವಾರ ಬೆಳಗ್ಗೆ ಹೈಕೋರ್ಟಿನಲ್ಲಿ ಹೇಳಿದ್ದಾರೆ.

ಬೆಂಗಳೂರು, ನವೆಂಬರ್ 03: ಕರ್ನಾಟಕ ಸರ್ಕಾರದ ಉದ್ದೇಶಿತ ಬಹುಕೋಟಿ ಉಕ್ಕಿನ ಸೇತುವೆ(Steel Flyover) ನಿರ್ಮಾಣ ಸದ್ಯಕ್ಕೆ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ವಕೀಲರು ಗುರುವಾರ ಬೆಳಗ್ಗೆ ಹೈಕೋರ್ಟಿನಲ್ಲಿ ಹೇಳಿದ್ದಾರೆ.

ಬಸವೇಶ್ವರ ವೃತ್ತದಿಂದ ಹೆಬ್ಬಾಳದ ಎಸ್ಟೀಮ್ ಮಾಲ್ ವರೆಗಿನ ಉದ್ದೇಶಿತ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಸಾಧ್ಯತೆ ಬಾಧ್ಯತೆ, ಕಾನೂನಿನ ತೊಡಕು, ಸಂವಿಧಾನಿಕ ವಿಷಯಗಳನ್ನು ಪರಿಗಣಿಸಿ ಈ ಬಗ್ಗೆ ತೀರ್ಪು ನೀಡುವುದಾಗಿ ಹೈಕೋರ್ಟ್ ಹೇಳಿದೆ.

ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ದ ಆದೇಶ(injunction order) ವನ್ನು ಪರಿಗಣಿಸಿರುವ ಹೈಕೋರ್ಟ್, ಉಕ್ಕಿನ ಸೇತುವೆ ನಿರ್ಮಾಣಕ್ಕೆ ತಡೆ ಕೋರಿ ಸಲ್ಲಿಸಲವಿಚಾರಣೆಯನ್ನು ಮುಂದೂಡಿದೆ.

BDA says No Steel Flyover for Now to HC

ಸುಮಾರು 6.7 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ1,761 ಕೋಟಿ ರು ಎಂದು ಅಂದಾಜು ವೆಚ್ಚ ನಿಗದಿ ಮಾಡಲಾಗಿದೆ.ಸ್ಟೀಲ್ ಫ್ಲೈಓವರ್ ಬೇಕು ಹಾಗೂ ಬೇಡ ಎಂದು ನಾಗರಿಕರು ನಡೆಸಿದ ಪ್ರತಿಭಟನೆಗಳು, ಅಹವಾಲುಗಳು, ತಜ್ಞರ ವರದಿಗಳನ್ನು ಕೂಡಾ ಹೈಕೋರ್ಟ್ ಪರಿಶೀಲಿಸಲಿದೆ.

ಉಕ್ಕಿನ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ಈಗಾಗಲೇ ನಾಲ್ಕುವಾರಗಳ ತಡೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಎನ್ ಜಿಟಿ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಜಸ್ಟೀಸ್ ಎನ್ ಎಸ್ ನಂಬಿಯಾರ್ ಅವರಿದ್ದ ಪ್ರಾಧಿಕಾರ ಮೇಲ್ಕಂಡ ಅದೇಶ ನೀಡಿತ್ತು.

ಈ ನಡುವೆ ಸ್ಟೀಲ್ ಫ್ಲೈಓವರ್ ಬೇಡ, ಟೆಂಡರ್ ಕ್ಯಾನ್ಸಲ್ ಮಾಡಿ ಎನ್ನುವ ನಾಗರಿಕ ಸಮಿತಿ(ಸಿಟಿಜನ್ ಫಾರ್ ಬೆಂಗಳೂರು) ಅವರು ನವೆಂಬರ್ 6ರ ಭಾನುವಾರದಂದು ಸತ್ಯಾಗ್ರಹ ನಡೆಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+