ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಆಟೋಗಳು ಹಳೆಯ ಮೀಟರಲ್ಲೇ ಓಡ್ತಿವೆ

By Srinath
|
Google Oneindia Kannada News

ಬೆಂಗಳೂರು, ಮೇ 12: ಬೆಂಗಳೂರು ನಗರದ ಮಹಾಜನತೆಗೆ ಆಟೋ ಡ್ರೈವರುಗಳು ಆಟಾಟೋಪದಿಂದ ಯಾವಾಗ ಮುಕ್ತಿ ಸಿಗುತ್ತದೋ ಗೊತ್ತಿಲ್ಲ. ಸದ್ಯಕ್ಕಂತೂ ಮೌನವಾಗಿ ಅವರ ಅಷ್ಟೂ ಕಿರುಕುಳ ಅಕ್ರಮಗಳನ್ನು ಮೌನವಾಗಿ ಸಹಿಸಿಕೊಂಡು ಆಟೋ ಪ್ರಯಾಣ ಮುಗಿಸಬೇಕಾದ ದುರವಸ್ಥೆಯಿದೆ. ಇದಕ್ಕೆ ಪೊಲೀಸರು ಮೌನಸಾಕ್ಷಿಗಳಾಗಿದ್ದಾರೆ.

ಮುಖ್ಯವಾಗಿ ಆಟೋ ಪ್ರಯಾಣಿಕರಿಗೆ ಕಳೆದ ಮೂರ್ನಾಲ್ಕು ತಿಂಗಳಿಂದ ಕಾಡುತ್ತಿರುವ ತೀವ್ರ ತರದ ಕಾಟವೆಂದರೆ ಆಟೋ ಪ್ರಯಾಣ ದರದ ಮೀಟರುಗಳು. ಸಾರಿಗೆ ಇಲಾಖೆಯೇನೋ ದರ ಏರಿಕೆಗೆ ಅಸ್ತು ಅಂದಿದೆ. 20 ರೂ ಇದ್ದಿದ್ದ ಕನಿಷ್ಠ ದರವನ್ನು 25 ರೂ. ಗೆ ಏರಿಕೆ ಮಾಡಿ 4 ತಿಂಗಳಾಗಿದೆ. ಅದಕ್ಕೆ ತಕ್ಕಂತೆ ಹೊಸ ಮೀಟರುಗಳನ್ನು ಅಳವಡಿಸಿಕೊಳ್ಳಲು ಇಲಾಖೆಯು ಸಾಕಷ್ಟು ಕಾಲಾವಕಾಶವನ್ನೂ ನೀಡಿತ್ತು.

Bangalore more than 50000 autos run with old meters only

ಆದರೆ ಬದಲಾದ ಮೀಟರುಗಳು ಹಾಗಿರಲಿ. ಸಾವಿರಾರು ಆಟೋಗಳು ಇಂದಿಗೂ ಹಳೆಯ ಮೀಟರುಗಳಲ್ಲೇ ಓಡುತ್ತಿವೆ. ಇನ್ನು ಕನಿಷ್ಠ ದರ ಬದಲಾದ ಮತ್ತು ಎಲೆಕ್ಟ್ರಾನಿಕ್ ಮೀಟರುಗಳು ಅಳವಡಿಸಿಕೊಳ್ಳುವುದಕ್ಕೆ ನಮ್ಮ ಆಟೋದಾರರಿಗೆ ಪುರುಸೊತ್ತೂ ಇಲ್ಲ; ಮನಸ್ಸು ಇಲ್ಲ! ಎಂಬಂತಾಗಿದೆ. ಇದರ ಹೊರೆ ಮಾತ್ರ ಪ್ರಯಾಣಿಕರ ಮೇಲೆ.

ಕಳೆದ ವರ್ಷ ಡಿಸೆಂಬರ್ 20ರಂದು ಆಟೋ ಪ್ರಯಾಣ ದರವನ್ನು ಏರಿಸಿದ್ದೇ ಬಂತು, ಈ ನಾಲ್ಕೂವರೆ ತಿಂಗಳಲ್ಲಿ ಕೇವಲ 42,000 ಆಟೋಗಳಷ್ಟೇ ಹೊಸ ಮೀಟರು ಅಳವಡಿಸಿಕೊಂಡಿವೆ. ಮೊದಲು ಈ 42,000 ಆಟೋ ಡ್ರೈವರುಗಳನ್ನು ನಿಜಕ್ಕೂ ಆಭಿನಂದಿಸಬೇಕು. ಸದ್ಯ ಇಷ್ಟು ಮಂದಿಯಾದರೂ ಬದಲಾಗಿದ್ದಾರಲ್ಲಾ!

ಹಗಲು ದರೋಡೆಗೆ ಮುಕ್ತಿಯಿಲ್ಲವೇ?: ಆದರೆ ನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಆಟೋಗಳಿವೆ. ಅಲ್ಲಿಗೆ 50,000 ಕ್ಕೂ ಹೆಚ್ಚು ಆಟೋಗಳು ಇನ್ನೂ ಹಳೆಯ ಮೀಟರುಗಳಲ್ಲೇ ಓಡುತ್ತಿವೆ. ಅಂದರೆ 50,000 ಆಟೋಗಳು ಪ್ರಯಾಣಿಕರಿಗೆ ಮೋಸ ಮಾಡುತ್ತಿವೆ ಎಂದು ಹೇಳಲು ಯಾವುದೇ ಅಡ್ಡಿಯಿಲ್ಲ. ಮೀಟರ್ ದರ ಪರಿಷ್ಕರಣೆಗೆ ಸುತರಾಂ ಒಪ್ಪದ ಆಟೋ ಚಾಲಕರು ಪ್ರಯಾಣಿಕರ ಸುಲಿಗೆಯಲ್ಲೇ ಆನಂದ ಕಾಣುತ್ತಿದ್ದಾರೆ.

ಕಾನೂನು ಮಾಪನ ಶಾಸ್ತ್ರ ಇಲಾಖೆಯು ಪೊಲೀಸ್ ಇಲಾಖೆಯ ನೆರವಿನೊಂದಿಗೆ ತಪಾಸಣೆ ಮಾಡುತ್ತಿದೆಯಾದರೂ ಅದು ನಾಮ್ ಕೆ ವಾಸ್ತೆ ಆಗಿದೆಯಷ್ಟೆ. ಇನ್ನು ಚಾಲಕರನ್ನು ಕೇಳಿದರೆ ಮಾಡಿಸಿದರಾಯ್ತು. ಏನು ಅರ್ಜೆಂಟು? ನಾವೇನು ಹೆಚ್ಚು ಹಣ ವಸೂಲಿ ಮಾಡುತ್ತಿಲ್ಲ ಎಂದು ದಬಾಯಿಸುತ್ತಾರೆ. ಆದರೆ ಮರು ಘಳಿಗೆಯೇ ಜೆರಾಕ್ಸ್ ಕಾಪಿ ತೆಗೆದು ಹೆಚ್ಚು ದರ ವಸೂಲಿಗೆ ಇಳಿಯುತ್ತಾರೆ.

ಜೂ. 19ಕ್ಕೆ ಆಂತಿಮ ಗಡುವು: ಬೆಂಗಳೂರು ಮಹಾಜನತೆಗೆ ಇನ್ನೂ ಒಂದೂವರೆ ತಿಂಗಳು ಈ ಬವಣೆ ತಪ್ಪಿದ್ದಲ್ಲ. ಏಕೆಂದರೆ ಜೂ 19ರ ಒಳಗಾಗಿ ನಗರದಲ್ಲಿ ಸಂಚರಿಸುವ ಎಲ್ಲ ಆಟೋಗಳಿಗೂ ಹೊಸ ಮೀಟರ್ ಕಡ್ಡಾಯ ಎಂದು ಆರ್ ಟಿಒ ಫರ್ಮಾನು ಹೊರಡಿಸಿದೆ. ಈ ಆದೇಶದಿಂದಲಾದರೂ ಪ್ರಯಾಣಿಕರಿಗೆ ಮುಕ್ತಿ ಸಿಗುತ್ತದಾ? ಕಾದುನೋಡಬೇಕು. ಜತೆಗೆ, ಅಲ್ಲಿವರೆಗೂ ಮೌನವಾಗಿ ಸಹಿಸಿಕೊಳ್ಳಬೇಕು.

English summary
Bangalore more than 50000 autos run with old meters only. Since the price hike on Dec 20 from minimum auto price of Rs 20 to Rs 25 more than 50 k autos does have new meters. But RTO has given new dead line of June 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X