ಸಾರಿಗೆ ಮುಷ್ಕರ: ಆಟೋ ಚಾಲಕರು ಹೇಳುವುದೇನು?
ಬೆಂಗಳೂರು, ಏ. 29: "ಎಲ್ಲಾರೂ ಬಂದ್ ಮಾಡ್ತಾರಂತೆ, ಕೆಎಸ್ ಆರ್ ಟಿಸಿ, ಬಿಎಂಟಿಸಿಯವರೂ ಬೆಂಬಲ ಕೊಟ್ಟಿದ್ದಾರೆ, ನಮ್ಮವರೂ ಮುಷ್ಕರ ಮಾಡಿ ಅಂತ ಹೇಳಿದ್ದಾರೆ. ಹಾಗಾಗಿ ಮಾಡ್ತಾ ಇದ್ದೇವೆ" ಇದು ಸೌತ್ ಎಂಡ್ ಸರ್ಕಲ್ ಬಳಿ ಬಾಡಿಗೆಗಾಗಿ ಕಾಯುತ್ತಿದ್ದ ಸಾಮಾನ್ಯ ಆಟೋ ಚಾಲಕನ ಪ್ರಾಮಾಣಿಕ ಹೇಳಿಕೆ.
ಹೌದು...ಗುರುವಾರ ಯಾಕೆ ಮುಷ್ಕರಕ್ಕೆ ಕರೆ ನೀಡಿದ್ದಾರೆ ಎಂಬುದು ನೂರರಲ್ಲಿ 99 ಆಟೋ ಚಾಲಕರಿಗೆ ಗೊತ್ತಿಲ್ಲ. ಕೇಂದ್ರ ಸರ್ಕಾರದ ಹೊಸ ಕಾನೂನು ಜಾರಿ ವಿರೋಧಿಸಿ ಬಂದ್ ಮಾಡಲಾಗುತ್ತಿದೆ ಎಂದು ಅವರಿಗೆ ತಿಳಿಸುವ ಗೋಜಿಗೆ ಯಾರೂ ಹೋಗಿಲ್ಲ.[ಮುಷ್ಕರಕ್ಕೆ ಬೆಂಬಲ ನೀಡಿದ ಸಂಘಟನೆಗಳು ಯಾವವು?]

ಗುರುವಾರದ ಮುಷ್ಕರ ಇಟ್ಟುಕೊಂಡು ಆಟೋ ಚಾಲಕರನ್ನು ಮಾತನಾಡಿಸಿದ ಒನ್ಇಂಡಿಯಾಕ್ಕೆ ಸಿಕ್ಕಿದ್ದು ಬಗೆಬಗೆಯ ಉತ್ತರ. ಅವುಗಳ ಕೆಲ ಸ್ಯಾಂಪಲ್ ಇಲ್ಲಿದೆ. ಅವರದ್ದೇ ಮಾತಿನಲ್ಲಿ ಹೇಳಿಕೆಗಳನ್ನು ಹಾಗೇ ಇಡಲಾಗಿದೆ.
* ಬಂದ್, ಹೌದು ಸ್ವಾಮಿ ನಮಗೇನೂ ಗೊತ್ತಿಲ್ಲ. ಯುನಿಯನ್ ಅವರು ಗಾಡಿ ಓಡಿಸಬೇಡ ಎಂದು ಹೇಳಿದ್ದಾರೆ. ಹಾಗಾಗಿ ನಾಳೆ ಗಾಡಿ ತೆಗೆಯಲ್ಲ. ನಿಮಗೆ ಗೊತ್ತಲ್ಲ ಎದುರಿನ ಗಾಜು ಪುಡಿಯಾದರೆ ಎಷ್ಟು ದಂಡ ಕಟ್ಟಬೇಕು ಅಂತ!(ನಾಗರಾಜ್)

* ನಮ್ಮಲ್ಲಿ ಎಲ್ಲರೂ ಬಂದ್ ಗೆ ಸಪೋರ್ಟ್ ಇಲ್ಲಾ, ಕೆಎಸ್ ಆರ್ ಟಿಸಿ ಯವರು ಯೂನಿಯನ್ ಗೆ ಆಮಿಷ ತೋರಿಸಿದ್ದಾರೆ. ಅವರು ಹೇಳಿದ್ರೂ ಅಂಥ ಬಂದ್ ಮಾಡಿಕೊಂಡು ಕೂತ್ರೆ ನಮ್ಮ ಹೊಟ್ಟೆ ಪಾಡು ಏನು? (ಇರ್ಫಾನ್)[ಜಾರಿಯಾಗಬೇಕಾದ ಕಾನೂನು ಯಾವುದು]
* ಪೊಲೀಸರು ಹೆಚ್ಚಿಗೆ ದುಡ್ಡು ಕೀಳ್ತಾರೆ, ಹಳೆ ಗಾಡಿ ಗುಜರಿಗೆ ಹಾಕಬೇಕು ಅಂಥ ಹೇಳ್ತಿದ್ದಾರಲ್ಲಾ ಅದಕ್ಕೆ ಮಷ್ಕರ ಮಾಡ್ತಾ ಇರೋದು. ಮುಷ್ಕರ ಆದ್ರೆ ನಮಗೆ ನಷ್ಟವೇ ಆದರೆ ಒಳ್ಳೆದಾತ್ತದಲ್ಲಾ!(ನಿಂಗೇ ಗೌಡ)
* ಇನ್ನು ನಿರ್ಧಾರ ಮಾಡಿಲ್ಲಾ. ಮೊನ್ನೆ ನಮ್ಮವರ ಆಟೋ ಹಿಂಬದಿ ಮೇಲೆ ಬಂದ್ ಎಂದು ಪಾಂಪ್ಲೆಟ್ ಕಂಡಾಗಲೇ ವಿಷಯ ಗೊತ್ತಾಗಿದ್ದು. ನಾಳೆ ಬಂದ್ ಮಾಡಿದ್ರೇ ಮಾಡ್ಕಳ್ಲಿ, ಇವತ್ತೇ ನೈಟ್ ಡಬಲ್ ಡ್ಯೂಟಿ ಮಾಡ್ತೇನೆ (ರಿಯಾಜ್)

* ಬೆಳಗ್ಗೆಯಿಂದ ಒಂದು ಬೋಣಿನೂ ಆಗಿಲ್ಲ. ಬಂದ್ ಬಗ್ಗೆ ಕೇಳೋಕೆ ಬಂದ್ರು, ನಮ್ಮ ಪರಿಸ್ಥಿತಿ ನಮಗಾಗಿದೆ. ಯಾರ್ ಏನಾದ್ರೂ ಮಾಡ್ಲಿರೀ ನಮಗೆ ಒಂದು ದಿನದ ದುಡಿಮೆ ಪುಗ್ಸಟೆ ಕೋಡ್ತಾರಾ?(ದೇವಯ್ಯ)
ಪ್ರತಿಯೊಬ್ಬರ ಬಳಿಯೂ ಯಾಕಾಗಿ ಮುಷ್ಕರ ಮಾಡ್ತಿದ್ದಾರೆ? ಕಾನೂನು ಮಂಡನೆಗೆ ಕಾರಣವೇನು? ಎಂಬ ಹಿನ್ನೆಲೆ-ಮುನ್ನೆಲೆಯನ್ನು ತಿಳಿಹೇಳಿ ಬರುವಾಗ ಉಸ್ಸಪ್ಪಾ ಎಂಬ ಸರದಿ ನಮ್ಮದಾಗಿತ್ತು.
ಆಟೋಗಳ ಹಿಂದಿನ ಬೋರ್ಡ್ ನಲ್ಲಿ ಏನಿದೆ?
ಕೇಂದ್ರ ಸರ್ಕಾರದ ಸಾರಿಗೆ ಮತ್ತು ಸುರಕ್ಷತಾ ಕಾನೂನು ವಿರೋಧಿಸಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಮತ್ತಷ್ಟು ಬೇಡಿಕೆಗಳು ಸೇರಿಕೊಂಡಿವೆ. ಕಾನೂನು ಬಾಹಿರ ವಿದೇಶಿ ಟ್ಯಾಕ್ಸಿ ಕಂಪನಿಗಳನ್ನು ನಿಯಂತ್ರಣ ಮಾಡಬೇಕು, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಆಟೋ ಚಾಲಕರಿಗೆ ಮನೆ ನೀಡಬೇಕು ಎಂದು ಆಗ್ರಹಿಸಲಾಗಿದೆ. ಈ ಬೇಡಿಕೆಗಳುಳ್ಳ ಪಟ್ಟಿಯನ್ನು ಆಟೋರಿಕ್ಷಾ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಬಿಡುಗಡೆ ಮಾಡಿದೆ.
-
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಹುಬ್ಬಳ್ಳಿ-ಗದಗ ಮಧ್ಯೆ ತಡೆರಹಿತ 'ರಾಜಹಂಸ' ಬಸ್ ಸೇವೆ ಆರಂಭ, ಟಿಕೆಟ್ ದರವೆಷ್ಟು-ವೇಳಾಪಟ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications