Tungabhadra: ರೈತರೇ ಗಮನಿಸಿ: ಕೃಷಿಗೆ ತುಂಗಾಭದ್ರಾ ಡ್ಯಾಂ ನೀರು, ತುರ್ತು ಸಭೆ

ಬಳ್ಳಾರಿ, ಮಾರ್ಚ್‌ 19: ಬೇಸಿಗೆ ಆರಂಭವಾಗಿದೆ ಕುಡಿಯುವ ನೀರಿನ ಜೊತೆಗೆ ಕೃಷಿ ಚಟುವಟಿಕೆಗೆ ಸಹ ನೀರನ್ನು ಪೂರೈಕೆ ಮಾಡಬೇಕಿದೆ. ತುಂಗಾಭದ್ರಾ ಜಲಾಶಯದಿಂದ ಕೃಷಿ ಚಟುವಟಿಕೆಗೆ ನೀರನ್ನು ಒದಗಿಸುವ ಕುರಿತು ಚರ್ಚಿಸಿ, ನಿರ್ಣಯಿಸಲು ತುಂಗಾಭದ್ರಾ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯನ್ನು ಮಾರ್ಚ್ 21ರಂದು ಕರೆಯಲಾಗಿದೆ. ರೈತರು ಬೇಸಿಗೆ ಹಂಗಾಮಿನಲ್ಲೂ ಡ್ಯಾಂನಿಂದ ನೀರು ಪೂರೈಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ತುಂಗಾಭದ್ರಾ ಯೋಜನೆಯ ಎಡದಂಡೆ ಕಾಲುವೆ ಹಾಗೂ ಬಲದಂಡೆ ಕೆಳ ಮಟ್ಟದ ಕಾಲುವೆಯಡಿ ಹಿಂಗಾರು ಹಂಗಾಮಿಗೆ ಬೆಳೆದು ನಿಂತ ಬೆಳೆಗಳಿಗೆ ಕೊರತೆಯಾಗುವ ನೀರನ್ನು ಒದಗಿಸಲು ಮತ್ತು ಹಿಂಗಾರು ಹಂಗಾಮಿನಲ್ಲಿ ಲಭ್ಯವಾದ, ಬಳಕೆಯಾದ ಮತ್ತು ಉಳಿತಾಯವಾಗುವ ನೀರನ್ನು ನಿಂತ ಬೆಳೆಗಳಿಗೆ ಒದಗಿಸುವ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಸಭೆಯನ್ನು ಕರೆಯಲಾಗಿದೆ.

Tungabhadra Dam Water For Agricultural Needs Meeting On March 21st

ಮಾರ್ಚ್‌ 21ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ವಿಧಾನಸೌಧದ 3ನೇ ಮಹಡಿಯ ಕೊಠಡಿ ಸಂಖ್ಯೆ 334ರ ಸಮ್ಮೇಳನ ಸಭಾಂಗಣದಲ್ಲಿ 123ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಇಲಾಖೆ ಸಚಿವ ಡಿ. ಕೆ. ಶಿವಕುಮಾರ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಡ್ಯಾಂನಲ್ಲಿ ಎಷ್ಟು ನೀರಿದೆ?; 2024ರಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ತುಂಗಾಭದ್ರಾ ಡ್ಯಾಂ ಭರ್ತಯಾಗಿತ್ತು. ಗೇಟ್‌ ನಂಬರ್ 19ಕ್ಕೆ ಹಾನಿಯಾಗಿ ಡ್ಯಾಂನಿಂದ ನೀರು ಪೋಲಾಗಿ ಹೋದರೂ ಸಹ ಬಳಿಕ ಸುರಿದ ಮಳೆಯ ಕಾರಣ ಮತ್ತೆ ಡ್ಯಾಂ ಭರ್ತಿಯಾಗಿತ್ತು.

ಮಾರ್ಚ್‌ 18ರ ಮಾಹಿತಿಯಂತೆ 1633 ಅಡಿ ಎತ್ತರದ ಡ್ಯಾಂನಲ್ಲಿ 1598.53 ಅಡಿ ನೀರಿನ ಸಂಗ್ರಹವಿದೆ. ಆದ್ದರಿಂದ ಬೇಸಿಗೆ ಬೆಳೆಗೆ ಅನುಕೂಲವಾಗುವಂತೆ ನೀರು ಹರಿಸುವ ನಿರೀಕ್ಷೆ ಇದ್ದು, ಸಭೆಯಲ್ಲಿ ನೀರು ಹರಿಸುವ ದಿನಾಂಕ ತೀರ್ಮಾನವಾಗಲಿದೆ.

ಡಿಸೆಂಬರ್‌ನಲ್ಲಿ ನೀರಾವರಿ ಸಲಹಾ ಸಮಿತಿಯ 122ನೇ ಸಭೆ ನಡೆದಿತ್ತು. ಆಗ ಮಾರ್ಚ್‌ 31ರ ತನಕ ಕಾಲುವೆಗಳಿಗೆ ನೀರು ಹರಿಸುವ ಕುರಿತು ಚರ್ಚಿಸಿ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ವಿಜಯನಗರ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ಜಲಾಶಯದಲ್ಲಿ ಲಭ್ಯವಾಗುವ ನೀರಿನ ಪ್ರಮಾಣವನ್ನು ಅಂದಾಜಿಸಿ ನೀರು ಹರಿಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು.

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಫೆಬ್ರವರಿ 1 ರಿಂದ 28 ರವರೆಗೆ 3800 ಕ್ಯೂಸೆಕ್‌ನಂತೆ, ಮಾರ್ಚ್ 1 ರಿಂದ 31 ರವರೆಗೆ 3800 ಕ್ಯೂಸೆಕ್‌ನಂತೆ ಮತ್ತು ಕುಡಿಯುವ ನೀರಿಗಾಗಿ ಏಪ್ರಿಲ್ 1 ರಿಂದ 10 ರವರೆಗೆ 1650 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+