• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸರಲ್ಲಿ ಹೆಚ್ಚುತ್ತಿರುವ ಸೋಂಕು; ಬಳ್ಳಾರಿ ಎಸ್ಪಿಯಿಂದ ಪೊಲೀಸರಿಗೊಂದು ಹೊಸ ಆದೇಶ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜುಲೈ 3: ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಯಲ್ಲೂ ಸೋಂಕು ವ್ಯಾಪಿಸುತ್ತಿದೆ. ಪೊಲೀಸ್ ಠಾಣೆಯನ್ನೇ ಸೀಲ್ ಡೌನ್ ಮಾಡಬೇಕಾದ ಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಇದೀಗ ಬಳ್ಳಾರಿ ಎಸ್ ಪಿ ಸಿಕೆ ಬಾಬಾ ಪೊಲೀಸರಿಗೆ ಆದೇಶವೊಂದನ್ನು ಹೊರಡಿಸಿದ್ದಾರೆ.

ಇನ್ನು ಮುಂದೆ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಯಾವುದೇ ರೀತಿಯ ಕಾರ್ಯಕ್ರಮ, ಪಾರ್ಟಿಗಳಿಗೆ ಹಾಜರಾಗುವಂತಿಲ್ಲ. ಮದುವೆ ನಾಮಕರಣ ಸೇರಿದಂತೆ ಯಾವುದೇ ಪಾರ್ಟಿಗಳಿಗೆ ಭಾಗಿಯಾಗುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿದ್ದರೆ ಎಸ್ ಪಿ ಕಚೇರಿಯಿಂದ ಪೂರ್ವಾನುಮತಿ ಕಡ್ಡಾಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಆದೇಶ ಹೊರಡಿಸಿದ್ದಾರೆ.

 ಪಿಎಸ್ ಐ ಮಾಡಿದ ಪಾರ್ಟಿಗೆ ಇಡೀ ಕಂಪ್ಲಿ ಪೊಲೀಸ್ ಠಾಣೆ ಸೀಲ್ ಡೌನ್ ಪಿಎಸ್ ಐ ಮಾಡಿದ ಪಾರ್ಟಿಗೆ ಇಡೀ ಕಂಪ್ಲಿ ಪೊಲೀಸ್ ಠಾಣೆ ಸೀಲ್ ಡೌನ್

ಮೊನ್ನೆಯಷ್ಟೇ ಕಂಪ್ಲಿಯ ಎಸ್ ಐ ಒಬ್ಬರು ಮಾಡಿದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹಾಗಾಗಿ ಇಡೀ ಠಾಣೆಯನ್ನೇ ಸೀಲ್ ಮಾಡಲಾಗಿತ್ತು. ಹೀಗಾಗಿ ಇನ್ನು ಮುಂದೆ ಇಂಥ ಯಾವುದೇ ರೀತಿಯ ಪಾರ್ಟಿ, ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿರ್ಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಮಾಡಿದ್ದಾರೆ.

English summary
As Coronavirus cases increasing in policemen, Ballari SP CK Baba has issued neworder to the police to bring this situation under control
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X