ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ.3ರಿಂದ ಹಂಪಿ ಉತ್ಸವ, ಈ ಬಾರಿ ವಿಶೇಷತೆ ಏನು?

|
Google Oneindia Kannada News

Recommended Video

ಇಂದಿನಿಂದ ಹಂಪಿ ಉತ್ಸವ , ಈ ಬಾರಿ ವಿಶೇಷತೆ ಏನು ? | Oneindia Kannada

ಬಳ್ಳಾರಿ, ನವೆಂಬರ್ 2 : ಗಡಿನಾಡು ಬಳ್ಳಾರಿ 2017ನೇ ಸಾಲಿನ ಹಂಪಿ ಉತ್ಸವಕ್ಕೆ ಸಜ್ಜಾಗಿದೆ. ನವೆಂಬರ್ 3ರಂದು ಮೂರು ದಿನಗಳ ಉತ್ಸವಕ್ಕೆ ಚಾಲನೆ ಸಿಗಲಿದ್ದು, ಸುಮಾರು 5 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ನವೆಂಬರ್ 3ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದೆ. ಶುಕ್ರವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಉತ್ಸವಕ್ಕಾಗಿ 11 ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದ್ದು, 405 ಕಾರ್ಯಕ್ರಮಗಳು ನಡೆಯಲಿವೆ.

ಹಂಪಿ ಉತ್ಸವಕ್ಕೂ ಮುನ್ನ ತುಂಗಾರತಿ ಉತ್ಸವ ಆಚರಣೆಹಂಪಿ ಉತ್ಸವಕ್ಕೂ ಮುನ್ನ ತುಂಗಾರತಿ ಉತ್ಸವ ಆಚರಣೆ

Siddaramaiah to inaugurate Hampi Utsav on November 3, 2017

ಸ್ಥಳೀಯ ಕಲಾವಿದರು, ಕಲಾ ತಂಡಗಳಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಾಲಿವುಡ್, ಹಾಲಿವುಡ್ ಗಾಯಕರು ಉತ್ಸವದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. 9 ವೇದಿಕೆಗಳಲ್ಲಿ ಸಾಂಸ್ಕೃತಿ ಕಾರ್ಯಕ್ರಮ, ಒಂದು ವೇದಿಕೆಯಲ್ಲಿ ಧ್ವನಿ ಮತ್ತು ಬೆಳಕು, ಇನ್ನೊಂದು ವೇದಿಕೆಯಲ್ಲಿ ರಾಯಲ್ ಶೋ ನಡೆಯಲಿದೆ.

ಎರಡು ವರ್ಷಗಳ ಬಳಿಕ ತುಂಗಭದ್ರಾ ಜಲಾಶಯ ಭರ್ತಿಎರಡು ವರ್ಷಗಳ ಬಳಿಕ ತುಂಗಭದ್ರಾ ಜಲಾಶಯ ಭರ್ತಿ

ಉತ್ಸವಕ್ಕೆ ಜನರನ್ನು ಕರೆತರಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಹೊಸಪೇಟೆ, ಕಂಪ್ಲಿ ಹಾಗೂ ಪಾಪಿನಾಯಕನಹಳ್ಳಿಯಲ್ಲಿ ಮೂರು ಪಿಕಪ್ ಪಾಯಿಂಟ್ ಮಾಡಲಾಗಿದೆ. ಮೂರು ದಿನಗಳ ಕಾಲ ಒಟ್ಟು 80 ಬಸ್ಸುಗಳು ಸಂಚಾರ ನಡೆಸಲಿವೆ. ಈ ಸಾರಿಗೆ ವ್ಯವಸ್ಥೆ ಸಂಪೂರ್ಣ ಉಚಿತವಾಗಿದೆ.

ಮೂರು ದಿನಗಳ ಉತ್ಸವದ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೂವರು ಎಎಸ್‌ಪಿ, 10 ಡಿವೈಎಸ್‌ಪಿ, 27 ಸಿಪಿಐ, 80 ಎಸ್‌.ಐ ಸೇರಿದಂತೆ ಹಲವು ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಪ್ರಮುಖ ಸ್ಥಳಗಳಲ್ಲಿ 50 ಸಿಸಿಟಿವಿಗಳನ್ನು ಅಳವಡಿಕೆ ಮಾಡಲಾಗಿದೆ.

English summary
Karnataka Chief Minister Siddaramaiah will inaugurate Hampi Utsav on November 3, 2017. The three days of utsav will held from November 3 to 5 in Ballari, Hampi heritage city. ನ.3ರಿಂದ ಹಂಪಿ ಉತ್ಸವ, ಈ ಬಾರಿ ವಿಶೇಷತೆ ಏನು?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X