ವಿವಾಹಕ್ಕೆ ಬಳ್ಳಾರಿಗೆ ಹೋಗುವೆ ಎಂದ ರೆಡ್ಡಿಗೆ ಕೋರ್ಟ್ ಹೇಳಿದ್ದೇನು?

ಬಳ್ಳಾರಿ, ನವೆಂಬರ್ 17 : 'ನೀವು ಹೀಗಿ ಮದುವೆ ಕಾರ್ಯಕ್ರಮಕ್ಕೆ ಹೋಗಲು ಆರಂಭಿಸಿದರೆ ಅದಕ್ಕೆ ಕೊನೆಯೇ ಇರುವುದಿಲ್ಲ' ಎಂದು ಹೇಳಿರುವ ಸುಪ್ರೀಂಕೋರ್ಟ್ ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಗೆ ಮೂರು ದಿನಗಳ ಕಾಲ ಭೇಟಿ ನೀಡಲು ಒಪ್ಪಿಗೆ ನೀಡಿದೆ.

ಮದುವೆಗೆ ಹೋಗಲು ಒಪ್ಪಿಗೆ ನೀಡಿ ಎಂದು ಜನಾರ್ದನ ರೆಡ್ಡಿ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ಒಪ್ಪಿಗೆಯಂತೆ ನವೆಂಬರ್ 23 ರಿಂದ 26ರ ತನಕ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಬಹುದಾಗಿದೆ.

SC allows Janardhana Reddy to attend marriage in Ballari

ಬಳ್ಳಾರಿಯಲ್ಲಿ ಸಂಬಂಧಿಕರ ವಿವಾಹಕ್ಕೆ ಹೋಗಲು ಅನುಮತಿ ನೀಡಬೇಕು ಎಂದು ಜನಾರ್ದನ ರೆಡ್ಡಿ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ಸೂಚನೆ ಬಳಿಕ ಮುಂದಿನ ದಿನದಲ್ಲಿ ಇಂತಹ ಅರ್ಜಿ ಸಲ್ಲಿಸುವುದಿಲ್ಲ ಎಂದು ರೆಡ್ಡಿ ಪರ ವಕೀಲರು ಕೋರ್ಟಿಗೆ ತಿಳಿಸಿದ್ದಾರೆ.

ದೀಪಾವಳಿ ಮತ್ತು ದಸರಾ ಆಚರಣೆ ಮಾಡಲು ಜನಾರ್ದನ ರೆಡ್ಡಿ ಬಳ್ಳಾರಿ ಭೇಟಿ ನೀಡಲು ಅನುಮತಿ ಕೇಳಿದ್ದರು. ಕೋರ್ಟ್ ಅನುಮತಿ ನೀಡಿತ್ತು. ಈಗ ವಿವಾಹಕ್ಕೆ ಹೋಗಲು ಮನವಿ ಮಾಡಿ ಒಪ್ಪಿಗೆ ಪಡೆದಿದ್ದಾರೆ.

2015ರ ಜನವರಿ 1ರಂದು ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡುವಾಗ ನ್ಯಾಯಾಲಯ ಬಳ್ಳಾರಿ, ಅನಂತಪುರ ಮತ್ತು ಕಡಪ ಜಿಲ್ಲೆಗಳಿಗೆ ಭೇಟಿ ನೀಡದಂತೆ ಷರತ್ತು ಹಾಕಿತ್ತು. ಆದ್ದರಿಂದ, ಬಳ್ಳಾರಿಗೆ ಭೇಟಿ ನೀಡಬೇಕಾದ ಸಂದರ್ಭದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+