ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನನ್ನು ರಕ್ಷಿಸಿದ ಪೊಲೀಸ್ ಪೇದೆ

ಹೊಸಪೇಟೆ, ಜನವರಿ 22: ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಕೆಳಗೆ ಬೀಳುತ್ತಿದ್ದ ಪ್ರಯಾಣಿಕರನ್ನು ಸಾವಿನ ದವಡೆಯಿಂದ ರಕ್ಷಿಸಿ ಪೊಲೀಸ್ ಪೇದೆ ಸಿ ಹರೀಶ್ ಮಾನವೀಯತೆ ಮೆರೆದಿದ್ದಾರೆ.

ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಇಳಿಯುವಾಗ ಪ್ರಯಾಣಿಕರೊಬ್ಬರು ಬೀಳುತ್ತಿದುದನ್ನು ನೋಡಿ ತಕ್ಷಣ ಸ್ಥಳೀಯ ಠಾಣೆಯ ಪೊಲೀಸ್ ಪೇದೆ ಸಿ ಹರೀಶ್ ಅವರು ಪಾರುಮಾಡಿದ್ದಾರೆ. ಗೌರವ್(55) ಪ್ರಾಣಾಪಾಯದಿಂದ ಪಾರಾದವರು, ಸ್ಥಳೀಯ ನಿಲ್ದಾಣದಿಂದ ಬೆಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಲು ಮುಂದಾಗುತ್ತಿದ್ದರು, ರೈಲು ಸ್ವಲ್ಪ ಮುಂದೆ ಹೋಗಿದೆ.

ಈ ವೇಳೆ ಅವರು ರೈಲಿನ ಕೆಳಗೆ ಬೀಳುವಂತೆ ಬಾಗಿದ್ದಾರೆ. ಇದನ್ನು ಗಮನಿಸಿದ ಪೇದೆ ಹರೀಶ್ ಪ್ರಯಾಣಿಕನ ಕಡೆಗೆ ಧಾವಿಸಿ, ರೈಲಿನ ಚಕ್ರದಲ್ಲಿ ಸಿಲುಕಿತ್ತಿದ್ದ ಗೌರವ್ ಅವರನ್ನು ಮೇಲೆತ್ತಿ ಪ್ರಾಣಾಪಾಯದಿಂದ ತಕ್ಷಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Quick thinking of constable saves mans life at Hospet

ವಿದೇಶದಿಂದ ಮಗುವನ್ನು ನೋಡಲು ಬಂದಿದ್ದ ಟೆಕ್ಕಿ ರೈಲಿನಡಿ ಸಿಲುಕಿ ಮೃತಪಟ್ಟಿರುವ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಹಾಗೆಯೇ ಪೋಷಕರನ್ನು ಊರಿಗೆ ಕಳುಹಿಸಲೆಂದು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಟೆಕ್ಕಿ ರೈಲು ಇಳಿಯುವಾಗ ಆಯತಪ್ಪಿ ಬಿದ್ದು ಪೋಷಕರೆದುರೇ ಪ್ರಾಣ ಬಿಟ್ಟಿದ್ದ ಘಟನೆಯೂ ಕೂಡ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+