ಬಳ್ಳಾರಿಯಲ್ಲಿ ಕಾಲ್ನಡಿಗೆಯ ಮೂಲಕ ಟೀಂ ದುರ್ಗಾ ಸಿಟಿ ರೌಂಡ್

ಬಳ್ಳಾರಿ, ಮಾರ್ಚ್ 30: ಪ್ರಪಂಚದ ಜನರನ್ನೇ ಭಯ ಭೀತರನ್ನಾಗಿ ಮಾಡಿರುವ ಕೋವಿಡ್-19 ಕಾಯಿಲೆಗೆ ಮುಂಜಾಗ್ರತಾ ಕ್ರಮವಾಗಿ ಸರಕಾರ ಸಾರ್ವಜನಿಕರ ರಜೆಯನ್ನು ಘೋಷಣೆ ಮಾಡಿದೆ.

Recommended Video

      ಒಂದು ವಾರದಿಂದ ಒಬ್ಬರೂ ದೇವರ ದರ್ಶನಕ್ಕೆ ಬಂದಿಲ್ಲ | Veerendra Hedge | Dharmastala

      ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳು ದಿನದ 24 ಗಂಟೆಗಳ ಕಾಲ ಕೆಲಸವನ್ನು ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯ ವಿಶೇಷ ತಂಡ ಟೀಂ ದುರ್ಗಾ ಜೊತೆಗೆ ಬಳ್ಳಾರಿ ಉಪವಿಭಾಗ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ಹಾಗೂ ಡಿವೈಎಸ್ಪಿ ವಿ. ರಘುಕುಮಾರ ಅವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ಅನಗತ್ಯವಾಗಿ ತಿರುಗಾಡುವ ಜನರಿಗೆ ಕೊರೊನಾ ವೈರಸ್ ಕುರಿತು ಜಾಗೃತಿಯನ್ನು ಕಾಲ್ನಡಿಗೆ ಮೂಲಕ ನೀಡುತ್ತಾ ಸಿಟಿ ರೌಂಡ್ಸ್ ಹಾಕಿದರು.

      ಹೊಸಪೇಟೆ ನಗರದಲ್ಲಿ ಇಂದು ರಾತ್ರಿ ಕೊರೊನಾ ವೈರಸ್ ಕುರಿತು ಉಪವಿಭಾಗದ ದಂಡಾಧಿಕಾರಿ ಅವರು ಮೇನ್ ಬಜಾರ್, ವಾಲ್ಮೀಕಿ ವೃತ್ತ ಡ್ಯಾಂ ರಸ್ತೆ, ವಿಜಯನಗರ ಕಾಲೇಜ್ ರಸ್ತೆ, ಅಂಬೇಡ್ಕರ್ ವೃತ್ತ ಸೇರಿದಂತೆ ನಗರದಲ್ಲಿ ಕಾಲ್ನಡಿಗೆಯಲ್ಲಿ ವೀಕ್ಷಣೆಯನ್ನು ಮಾಡಿದರು.

      Police Team Durga City Round In Ballary

      ಕೊರೊನಾ ವೈರಸ್ ಮಾಹಾಮಾರಿ ಕಾಯಿಲೆಗೆ ಎಸಿ ಅವರು ಸಾರ್ವಜನಿಕರ ಆರೋಗ್ಯದ ಕುರಿತು ನಗರದಲ್ಲಿ ಜನರಿಗೆ ತಿಳುವಳಿಕೆಯನ್ನು ನೀಡುತ್ತಿದ್ದಾರೆ. ಸೆಕ್ಷನ್ 144 ಜಾರಿಯಲ್ಲಿದೆ ಯಾರು ತಿರುಗಾಡುವಂತಿಲ್ಲ. ನಿಮ್ಮ ಮನೆಯಲ್ಲಿಯೇ ಇರಬೇಕು. ತರಕಾರಿಗಳು ಹಾಲು ಆಸ್ಪತ್ರೆ ಹಾಗೂ ಔಷಧಿ ಅಂಗಡಿಗಳು ತೆಗೆದಿರುತ್ತವೆ ಎಂದು ತಿಳಿಸಿದರು.

      Police Team Durga City Round In Ballary

      ಅವಶ್ಯಕತೆ ಇದ್ದವರು ಕುಟುಂಬದ ಯಾರಾದರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಸಾಮಾನು ತೆಗೆದುಕೊಂಡು ಬರಬಹುದು ಎಂದು ಎಂದರು. ಅಧಿಕಾರಿಗಳಿಗೆ ಸಾರ್ವಜನಿಕರು ಸಹಕಾರವನ್ನು ನೀಡಿ, ನಾವೆಲ್ಲ ಇರುವುದು‌ ನಿಮಗಾಗಿ, ಸರಕಾರ ಇದರ ಬಗ್ಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳಿದರು. ಪೊಲೀಸ್ ಇಲಾಖೆಯ ಟೀಂ ದುರ್ಗಾ ಎಸಿ ಅವರಿಗೆ ಸಾಥ್ ನೀಡಿತು. ನಗರ ಎಲ್ಲ ಬಡಾವಣೆಗಳಲ್ಲಿ ತಿರುಗಾಡಿ ಜಾಗೃತಿ ಮೂಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+