Ballari Municipal Mayor Election: ಮೇಯರ್ ಆಗಿ ಆಯ್ಕೆಯಾದ 23 ವರ್ಷದ ತ್ರಿವೇಣಿ
ಬಳ್ಳಾರಿ, ಮಾರ್ಚ್, 29: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಆಯ್ಕೆಗೆ ತೆರೆ ಬಿದ್ದಿದೆ. ಇದೇ ಮೊದಲ ಬಾರಿಗೆ ಅತಿ ಕಿರಿಯ ವಯಸ್ಸಿನ ಪಾಲಿಕೆ ಸದಸ್ಯರು, ಮೇಯರ್ ಪಟ್ಟವನ್ನು ಅಲಂಕರಿಸಿದ್ದಾರೆ.
ಇಡೀ ರಾಜ್ಯದಲ್ಲೇ ಕಿರಿಯ ವಯಸ್ಸಿನಲ್ಲಿ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಖ್ಯಾತಿಗೆ ತ್ರಿವೇಣಿ ಭಾಜನರಾಗಿದ್ದಾರೆ. ಬಳ್ಳಾರಿಯ 4ನೇ ವಾರ್ಡ್‌ನ ಸದಸ್ಯೆ ತ್ರಿವೇಣಿ ಮೇಯರ್ ಆಗಿ ಆಯ್ಕೆ ಆಗಿದ್ದಾರೆ. ತ್ರಿವೇಣಿಯು ಕಾಂಗ್ರೆಸ್ ಮುಖಂಡ ಡಿ.ಸೂರಿ ಅವರ ಪುತ್ರಿಯಾಗಿದ್ದಾರೆ. ಇನ್ನು ಉಪಮೇಯರ್ ಆಗಿ 33ನೇ ವಾರ್ಡ್‌ನ ಜಾನಕಮ್ಮ ಆಯ್ಕೆ ಆಗಿದ್ದಾರೆ.
ಮೇಯರ್ ಆಗಿ ಆಯ್ಕೆಯಾದ ತ್ರಿವೇಣಿ
ವಿಶೇಷ ಅಂದರೆ ಇಬ್ಬರು ಮೇಯರ್‌ಗಳನ್ನು ನೀಡಿದ ಒಂದೇ ಕುಟುಂಬ ಎಂಬ ಖ್ಯಾತಿಯೂ ಡಿ. ಸೂರಿಯವರದ್ದಾಗಿದೆ. ಹಾಲಿ ನೂತನ ಮೇಯರ್ ತ್ರಿವೇಣಿ ಅವರ ತಾಯಿ ಈ ಹಿಂದೆ 2019ರಲ್ಲಿ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದರು. ನಾಲ್ಕನೇ ವಾರ್ಡ್‌ನ ಕಾಂಗ್ರೆಸ್ ಪಾಲಿಕೆ ಸದಸ್ಯೆ ಆಗಿರುವ ತ್ರಿವೇಣಿ ಅವರಿಗೆ 23 ವರ್ಷ ವಯಸ್ಸಾಗಿದ್ದು, ಸದರಿ ಪಾಲಿಕೆಯ ಚುನಾವಣೆ ವೇಳೆ ಗೆದ್ದ ಕಿರಿಯ ವಯಸ್ಸಿನ ಸದಸ್ಯೆ ಆಗಿ ಆಯ್ಕೆ ಆಗಿದ್ದರು.

ತ್ರಿವೇಣಿಯವರು ಈಗಾಗಲೇ ಹೆಲ್ತ್ ಇನ್ಸ್‌ಪೆಕ್ಟರ್ ಕೋರ್ಸ್ ಪೂರೈಸಿದ್ದು, ಇದೀಗ ಮೇಯರ್ ಆಗಲು ಸಹಕಾರ ನೀಡಿದ ಎಲ್ಲಾ ಪಾಲಿಕೆ ಸದಸ್ಯರಿಗೆ, ಪಕ್ಷದ ಮುಖಂಡರಿಗೆ ದನ್ಯವಾದಗಳನ್ನ ಅರ್ಪಿಸಿದರು.
ಅತಿ ಕಿರಿಯ ವಯಸ್ಸಿನ ಪಾಲಿಕೆ ಸದಸ್ಯೆಯಾಗಿ ಅಯ್ಕೆ ಆಗಿದ್ದೆ. ಇದೀಗ ಮೇಯರ್ ಅಗಿದ್ದೇನೆ. ನಾನು ಕನಸು, ಮನಸ್ಸಿನಲ್ಲೂ ಊಹಿಸದ್ದನ್ನು ನನ್ನ ತಂದೆ ಸಹಕಾರ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ. ಎಲ್ಲರ ಜೊತೆಗೂಡಿ ಪಾಲಿಕೆಯ ಅಭಿವೃದ್ಧಿ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತೇನೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಕುಬೇರ ಮತ್ತು ಉಮಾದೇವಿ ನಾಮ ಪತ್ರ ಪಡೆದಿದ್ದರಿಂದ ಡಿ.ತ್ರಿವೇಣಿ ಮತ್ತು ನಾಗರತ್ನ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಹಾಜರಿದ್ದ 44 ಜನ ಮತದಾನದ ಹಕ್ಕು ಪಡೆದ ಸದಸ್ಯರು, ಸಂಸದರು, ಶಾಸಕರು ಮತದಾನದಲ್ಲಿ ಪಾಲ್ಗೊಂಡರು. ನಂತರ ತ್ರಿವೇಣಿಗೆ 28 ಮತ್ತು ನಾಗರತ್ನಗೆ ನಿರೀಕ್ಷೆಯಂತೆ 16 ಮತಗಳು ಬಂದವು.
ಬಳಿಕ ತ್ರಿವೇಣಿ ಆಯ್ಕೆಯ ವಿಚಾರವನ್ನು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ರುದ್ರೇಶ್, ಎಡಿಸಿ ಅವರು ಇದ್ದರು.
ಜೆಡಿಎಸ್ ವಿರುದ್ಧ ಸಿ.ಪಿ.ವೈ ಆಕ್ರೋಶ
ಮತ್ತೊಂದೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಆರೋಪ ಪ್ರತ್ಯಾರೋಪ ಮಾಡುವುದು ಸಾಮಾನ್ಯವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಜೆಡಿಎಸ್ ಹಾಗೂ ಬಿಜೆಪಿ ನಡುವೆ ಹೊಂದಾಣಿಕೆ ನಡೆದಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಈ ಬಾರಿಯ ಚುನಾವಣೆಯಲ್ಲಿ ಹೈಕಮಾಂಡ್‌ಗೆ ಕ್ಲ್ಯಾರಿಟಿ ಇದೆ. ಯಾವುದೇ ರೀತಿಯಲ್ಲೂ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ವಿರುದ್ಧ ಸಿ.ಪಿ.ಯೋಗೇಶ್ವರ್ ಆರೋಪ ಚನ್ನಪಟ್ಟಣ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂಕಲ್ವ ಯಾತ್ರೆ ಮೂಲಕ ಹಲವು ಗ್ರಾಮಗಳ ಮತದಾರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕೆಲವು ಕ್ಷೇತ್ರದಲ್ಲಿ ಜೆಡಿಎಸ್‌ನವರಿಗೆ ನಮ್ಮ ಪಕ್ಷದ ನಾಯಕರು ಸಹಕಾರ ನೀಡಿದ್ದು ನಿಜ. ಅದರೆ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಹೈಕಮಾಂಡ್‌ಗೆ ಕ್ಲ್ಯಾರಿಟಿ ಇದೆ. ಜೆಡಿಎಸ್ ಪಕ್ಷದವರನ್ನು ನಂಬುವ ಪರಿಸ್ಥಿತಿಯಿಲ್ಲ. ಅವರೂ ಎರಡೂ ಪಕ್ಷಗಳ ಜೊತೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.












Click it and Unblock the Notifications