ಕರ್ನಾಟಕದಲ್ಲಿ 24 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು: ಶ್ರೀರಾಮುಲು

ಬಳ್ಳಾರಿ, ಮಾರ್ಚ್ 31: ರಾಜ್ಯದ 24 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಳ್ಳಾರಿಯ ಕಪ್ಪಗಲ್ ಗ್ರಾಮದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ದೇವೇಂದ್ರಪ್ಪ ಅವರ ಪರ ಬಿರುಸಿನ ಪ್ರಚಾರ ನಡೆಸಿದ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯದಲ್ಲಿ ಮೂರೇ ಮೂರು ಕ್ಷೇತ್ರಗಳಷ್ಟೇ ಮುಖ್ಯವಾಗಿದೆ ಎಂದರು.

ರಾಜ್ಯದಲ್ಲಿ ಹಾಗೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ಅಲೆ ಇದೆ. ಈ ಅಲೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಜನರು ದೇವೆಂದ್ರಪ್ಪ ಅವರಿಗೆ ಮತ ನೀಡಲಿದ್ದು, ಮೋದಿ ಅವರ ಕೈ ಬಲಪಡಿಸಲಿದ್ದಾರೆ ಎಂದರು.

ರಾಜ್ಯದ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರಾಜ್ಯದ ಕೇವಲ 3 ಲೋಕಸಭಾ ಕ್ಷೇತ್ರಗಳಷ್ಟೇ ಮುಖ್ಯವಾಗಿವೆ. ತುಮಕೂರು - ಹಾಸನ ಹಾಗೂ ಮಂಡ್ಯ ಕ್ಷೇತ್ರಗಳನ್ನು ಬಿಟ್ಟು ಬೇರೆ ಕಡೆ ಪ್ರಚಾರಕ್ಕೇ ಅವರು ಮನಸ್ಸು ಮಾಡುತ್ತಿಲ್ಲ. ಈ ಮೂರು ಕ್ಷೇತ್ರಗಳಲ್ಲೂ ಜೆಡಿಎಸ್ ಸೋಲಲಿದೆ, ಅಲ್ಲದೆ ರಾಜ್ಯದಲ್ಲಿ ಸಮ್ಮಿಶ್ರ ಪಕ್ಷಗಳ ಅಭ್ಯರ್ಥಿಗಳು ಸೋಲಲ್ಲಿದ್ದಾರೆ ಎಂದರು.

ನಿಖಿಲ್ ನಾಮಪತ್ರ ಗೊಂದಲದ ಬಗ್ಗೆ ಶ್ರೀರಾಮುಲು

ನಿಖಿಲ್ ನಾಮಪತ್ರ ಗೊಂದಲದ ಬಗ್ಗೆ ಶ್ರೀರಾಮುಲು

ಇದೇ ವೇಳೆ, ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಮಪತ್ರ ಸಲ್ಲಿಕೆಯ ವೇಳೆ ಸರಿಯಾದ ದಾಖಲಾತಿಯನ್ನು ನೀಡದೆ ಇರುವ ನಿಖಿಲ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕಾಗಿತ್ತು. ಸರಿಯಾದ ದಾಖಲಾತಿ ನೀಡದೇ ಇರುವ ನಾಮಪತ್ರವನ್ನು ತಿರಸ್ಕರಿಸುವುದು ಸಂಪ್ರದಾಯ ಎಂದರು.

ಉನ್ನತ ಶಿಕ್ಷಣವೇ ಮುಖ್ಯವಲ್ಲ

ಉನ್ನತ ಶಿಕ್ಷಣವೇ ಮುಖ್ಯವಲ್ಲ

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಮಾತನಾಡಿ, ಪ್ರತಿಬಾರಿಯೂ ನನ್ನನ್ನು ಅವಿದ್ಯಾವಂತ ಎಂದು ಟೀಕೆ ಮಾಡುತ್ತಾರೆ. ಅದರೆ, ದೇಶವನ್ನು ಮುನ್ನಡೆಸಿದ ರಾಷ್ಟ್ರಮಟ್ಟದ ಹಲವಾರು ನಾಯಕರುಗಳು ಉನ್ನತ ಶಿಕ್ಷಣವನ್ನು ಪಡೆದವರಲ್ಲ ಎಂಬುದನ್ನು ನೆನಪಿಸಡಬೇಕು.

ರಾಜಕೀಯದಲ್ಲಿ ಅನುಭವ ಮುಖ್ಯ

ರಾಜಕೀಯದಲ್ಲಿ ಅನುಭವ ಮುಖ್ಯ

ಅನುಭವ ಮುಖ್ಯ ನಾನು ಸಹಕಾರ ಕ್ಷೇತ್ರದಲ್ಲಿ ಬಹಳಷ್ಟು ಸೇವೆಯನ್ನು ಸಲ್ಲಿಸಿದ್ದೇನೆ. ಬಳ್ಳಾರಿಯ ಯೂನಿಯನ್ ನಲ್ಲೂ ಸಕ್ರೀಯವಾಗಿದ್ದೆ ಎಂಬುದನ್ನು ನೆನಪಿಸಿಕೊಂಡರು. ದೇಶದ ಅಭಿವೃದ್ದಿಗೆ ಟೊಂಕಕಟ್ಟಿ ನಿಂತಿರುವ ಶ್ರೀಮಾನ್ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಲು ಬಳ್ಳಾರಿ ಜನತೆಯು ಸಹಕಾರ ನೀಡಲಿದೆ ಎಂದರು.

ಬಿರುಸಿನ ಚುನಾವಣಾ ಪ್ರಚಾರ

ಬಿರುಸಿನ ಚುನಾವಣಾ ಪ್ರಚಾರ

ಚುನಾವಣಾ ಪ್ರಚಾರದಲ್ಲಿ ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು, ಹಿರಿಯ ಮುಖಂಡ ರಾಮಲಿಂಗಪ್ಪ, ಭೀಮಾರೆಡ್ಡಿ, ತಿಮ್ಮಾರೆಡ್ಡಿ, ಬಸಪ್ಪನವರು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಕಪ್ಪಗಲ್, ಹಿರೇಹಡ್ಲಗಿ, ಚಾನಾಳ್, ಕೊರ್ಲಗುಂದಿ, ಶ್ರೀಧರಗಡ್ಡೆ, ಸೋಮಸಮುದ್ರ, ಕೋಳೂರು, ಬೈಲೂರು - ಸಿಂಧಿಗೇರಿ, ಮುಷ್ಠಗಟ್ಟೆ, ಕುರುಗೋಡು ಗ್ರಾಮಗಳಲ್ಲಿ ಪ್ರಚಾರ ನಡೆಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+