Get Updates
Get notified of breaking news, exclusive insights, and must-see stories!

ಯುಆರ್ ರಾವ್ ಗೆ ಕೃಷ್ಣದೇವರಾಯ ವಿವಿ ಗೌರವ ಡಾಕ್ಟರೇಟ್

ಇಸ್ರೋ ಮಾಜಿ ಅಧ್ಯಕ್ಷರಾದ ಪ್ರೊ.ಯು.ಆರ್.ರಾವ್ ಅವರಿಗೆ ಕೃಷ್ಣದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿದೆ. ಯು.ಆರ್.ರಾವ್ ಅವರ ಪೂರ್ಣ ಹೆಸರು ಪ್ರೊ.ಉಡುಪಿ ರಾಮಚಂದ್ರ ರಾವ್‌. ಉಡುಪಿಯಲ್ಲಿ 1932ರಲ್ಲಿ ಅವರು ಜನಿಸಿದರು.

ಬಳ್ಳಾರಿಯ ವೀರಶೈವ ಮಹಾವಿದ್ಯಾಲಯದಿಂದ ರಾವ್ ಅವರು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಮತ್ತು ಸಂಶೋಧನಾ ಪದವಿಯನ್ನು ಗುಜರಾತ್ ವಿಶ್ವವಿದ್ಯಾಲಯದಿಂದ ರಾವ್ ಪಡೆದಿದ್ದಾರೆ.

ಅಹಮದಾಬಾದ್‌ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯ ಆಡಳಿತ ಮಂಡಳಿ ಅಧ್ಯಕ್ಷ,ಕರ್ನಾಟಕ ವಿಜ್ಞಾನ ಮತ್ತು ತಾಂತ್ರಿಕ ಅಕಾಡಮಿಯ ಅಧ್ಯಕ್ಷರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿರೊಲಜಿಯ ಆಡಳಿತ ಮಂಡಳಿ ಅಧ್ಯಕ್ಷ, ಅಡ್‌ವೈಜರಿ ಕಮಿಟಿ ಫಾರ್ ಸ್ಪೇಸ್ ಸೈನ್ಸ್ ಮತ್ತು ಇಸ್ರೋದ ಅಧ್ಯಕ್ಷ ಸ್ಥಾನದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿದ ಅನುಭವ ಯು.ಆರ್.ರಾವ್ ಅವರಿಗಿದೆ.

Dr. U.R Rao

ಬಾಹ್ಯಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿರುವ ಅಪಾರವಾದ ಕೊಡುಗೆ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಉಪಯುಕ್ತ ಸುಧಾರಣೆಗಳಿಗೆ ವಿಶ್ವದೆಲ್ಲೆಡೆಯಿಂದ ರಾವ್ ಪ್ರಶಂಸೆಗಳಿಸಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತವನ್ನು ಅಭಿವೃದ್ಧಿ ಮಾಡಬಹುದೆಂಬುದು ಪ್ರೊ.ಯು.ಆರ್.ರಾವ್‌ ಅವರ ನಿಲುವಾಗಿತ್ತು. ಭಾರತೀಯ ಉಪಗ್ರಹ ತಂತ್ರಜ್ಞಾನದ ವ್ಯಾಕರಣವನ್ನು ರಚಿಸಿ 1975ರಲ್ಲಿ ನಿರ್ಮಿತಿಗೊಂಡ ಆರ್ಯಭಟ ಉಪಗ್ರಹದ ಹಾಗೂ ಇನ್ನಿತರ ಮೊದಲನೆ ತಲೆಮಾರಿನ ಉಪಗ್ರಹಗಳ ನಿರ್ಮಾಣದಲ್ಲಿ ರಾವ್ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಅಂತರರಾಷ್ಟ್ರೀಯ ಬಾಹ್ಯಾಕಾಶ ಫೆಡರೇಶನ್ ತಿಳಿಸಿರುವಂತೆ ಯು.ಆರ್.ರಾವ್‌ ಅವರು, ಬಾಹ್ಯಕಾಶ ತಂತ್ರಜ್ಞಾನವನ್ನು ಬಳಸಿಕೊಂಡು ಬರ ನಿವಾರಣೆ, ಜಲ ನಿರ್ವಹಣೆ, ಬಡತನ ನಿರ್ಮೂಲನೆ, ಶಿಕ್ಷಣ, ಪರಿಸರ, ವ್ಯವಸಾಯ, ಅರಣ್ಯ, ಗ್ರಾಮೀಣಾ ಅಭಿವೃದ್ಧಿ, ಆರೋಗ್ಯ ನಿರ್ವಹಣೆ ಮತ್ತು ಇನ್ನಿತರೆ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಲು ಚಿಂತನೆ ನಡೆಸಿ ಯಶಸ್ವಿಯಾಗಿದ್ದಾರೆ ಈ ಕುರಿತು ಅವರು 360 ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ.

ಭಾರತ ಸರ್ಕಾರ 1976ರಲ್ಲಿ ಪ್ರೊ.ಯು.ಆರ್.ರಾವ್ ಅವರ ಸಾಧನೆಯನ್ನು ಗುರುತಿಸಿ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಅಮೆರಿಕ ಸರ್ಕಾರ ನೀಡುವ ಅತ್ಯುನ್ನತ ಸಟೆಲೈಟ್ ಹಾಲ್ ಆಫ್ ಫೇಮ್ ಗೌರವ ಪಡೆದ ಮೊದಲ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಎಂಬ ಕೀರ್ತಿಗೆ ರಾವ್ ಪಾತ್ರರಾಗಿದ್ದಾರೆ. ರಾವ್ ಅವರ ಎಲ್ಲಾ ಸಾಧನೆ ಪರಗಣಿಸಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+