ಗಣಿನಾಡಿನಲ್ಲಿ ಧೂಳ್ ಎಬ್ಬಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ!

Recommended Video

      Siddaramaiah : Anand Singh Begged For Election Ticket | Oneindia Kannada

      ಬಳ್ಳಾರಿ, ನವೆಂಬರ್.28: ಸಿದ್ದರಾಮಯ್ಯ ಮಾತು ಅಂದ್ರೆನೇ ಹಾಗೆ. ವಿಧಾನಸಭೆ ಅಖಾಡದಲ್ಲಿ ಟಗರು ಗುಟುರು ಹಾಕುತ್ತಿದ್ದರೆ ಎದುರಾಳಿಗಳು ಪತರ್ ಗುಟ್ಟಿ ಹೋಗುತ್ತವೆ. ಇಂದು ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದಿದ್ದೂ ಕೂಡಾ ಅದೆ.

      ಉಪ ಚುನಾವಣೆ ಕಣದಲ್ಲಿ ಸಿದ್ದರಾಮಯ್ಯ ಬರುವವರೆಗೂ ಮಾತ್ರ ಬೇರೆಯವರ ಹವಾ. ಸಿದ್ದರಾಮಯ್ಯ ಎಂಟ್ರಿ ಕೊಟ್ಟರೇ ಸಿದ್ದರಾಮಯ್ಯನವರದ್ದೇ ಹವಾ. ಇದು ಕಾಂಗ್ರೆಸ್ ನವರು ಹೇಳುವ ಮಾತು ಅಲ್ಲವೇ ಅಲ್ಲ. ಸಿದ್ದು ಪ್ರಚಾರಕ್ಕೆ ನಿಂತು ಭಾಷಣ ಮಾಡುತ್ತಿದ್ದರೆ ಅವರ ಭಾಷಣ ಪರಿಯೇ ಹಾಗಿರುತ್ತದೆ.

      ಬಿಜೆಪಿ ವಿರುದ್ಧ ಗುಟುರು ಹಾಕುತ್ತಿದ್ದ ಸಿದ್ದರಾಮಯ್ಯ ಗಣಿನಾಡಿನಲ್ಲಿ ಧೂಳ್ ಎಬ್ಬಿಸಿದರು. ಅನರ್ಹ ಶಾಸಕರ ಕಥೆಯನ್ನು ತಮ್ಮದೇ ಸ್ಟೈಲ್ ನಲ್ಲಿ ಹೇಳುತ್ತಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ವಿ.ವೈಘೋರ್ಪಡೆ ಪರ ಅಬ್ಬರದ ಪ್ರಚಾರ ಮಾಡಿದರು.

      ಗೊಗರೆದು, ಗೊಗರೆದು ಟಿಕೆಟ್ ಪಡೆದವನಿಗಿಲ್ಲ 'ಆನಂದ್'

      ಗೊಗರೆದು, ಗೊಗರೆದು ಟಿಕೆಟ್ ಪಡೆದವನಿಗಿಲ್ಲ 'ಆನಂದ್'

      ಈ ಹಿಂದೆ ವಿಜಯನಗರದಿಂದ ಸ್ಪರ್ಧಿಸಿದ ಆನಂದ್ ಸಿಂಗ್ ಟಿಕೆಟ್ ಗಾಗಿ ನನ್ನ ಬಳಿ ಬಂದು ಗೊಗರೆದರು. ಕಾಂಗ್ರೆಸ್ ನಿಂದ ಗೊಗರೆದು ಗೊಗರೆದು ಟಿಕೆಟ್ ಪಡೆದುಕೊಂಡರು. ಅವರಿಗೆ ಅವಕಾಶ ನೀಡಿ ನಾವು ತಪ್ಪು ಮಾಡಿದೆವು. ಈಗ ನಮಗೆ ದ್ರೋಹ ಮಾಡಿ ಹೋಗಿದ್ದಾರೆ ಎಂದು ಆನಂದ್ ಸಿಂಗ್ ವಿರುದ್ಧ ಸಿದ್ದರಾಮಯ್ಯ ಗುಡುಗಿದರು.

      ಆನಂದ್ ಸಿಂಗ್ ಅಲ್ಲ ಅನರ್ಹ ಸಿಂಗ್!

      ಆನಂದ್ ಸಿಂಗ್ ಅಲ್ಲ ಅನರ್ಹ ಸಿಂಗ್!

      ವಿಜಯನಗರದಲ್ಲಿ ಸ್ಪರ್ಧಿಸಿರುವ ಆನಂದ್ ಸಿಂಗ್, ಆನಂದ್ ಸಿಂಗ್ ಅಲ್ಲ ಅವರು ಅನರ್ಹ ಸಿಂಗ್ ಎಂದು ಸಿದ್ದರಾಮಯ್ಯ ಗುಡುಗಿದರು. ಅನರ್ಹ ಎಂದರೆ ನಾಲಾಯಕ್ ಎಂದು ಅರ್ಥ ಬರುತ್ತದೆ. ತಾತ್ಕಾಲಿಕವಾಗಿ ಅನರ್ಹ ಎನಿಸಿಕೊಂಡಿರುವ ಅವರನ್ನು ಶಾಶ್ವತವಾಗಿ ಅನರ್ಹರಾಗಿ ಮಾಡಬೇಕಾಗಿದೆ. ಅದಕ್ಕಾಗಿ ಕಾಂಗ್ರೆಸ್ ಗೆ ಬೆಂಬಲಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿಕೊಂಡರು.

      ಮತ ನೀಡಿದ ಮಂದಿಗಿಲ್ಲ ಯಾವುದೇ 'ಆನಂದ್'

      ಮತ ನೀಡಿದ ಮಂದಿಗಿಲ್ಲ ಯಾವುದೇ 'ಆನಂದ್'

      ವಿಜಯನಗರದ ಶಾಸಕರಾಗಿ ಆನಂದ್ ಸಿಂಗ್ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಬಡವರಿಗೆ ಒಂದೇ ಒಂದು ಸಣ್ಣ ಮನೆಯನ್ನೂ ಕಟ್ಟಿಕೊಡಲಿಲ್ಲ. ಬದಲಿಗೆ ತಾವೇ ಒಂದು ದೊಡ್ಡ ಅರಮನೆ ಕಟ್ಟಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

      ರೆಡ್ಡಿ ಬ್ರದರ್ಸ್ ಈಗ ಥಂಡಾ ಥಂಡಾ ಕೂಲ್ ಕೂಲ್!

      ರೆಡ್ಡಿ ಬ್ರದರ್ಸ್ ಈಗ ಥಂಡಾ ಥಂಡಾ ಕೂಲ್ ಕೂಲ್!

      ಈ ಹಿಂದೆ ನಾನು ಬಳ್ಳಾರಿಗೆ ಪಾದಯಾತ್ರೆ ಮಾಡುತ್ತಿದ್ದಾಗ ಅಂದಿನ ಸಚಿವ ಜನಾರ್ದನ ರೆಡ್ಡಿ ತಡೆಯಲು ಯತ್ನಿಸಿದರು. ಆದರೆ, ನನ್ನನ್ನು ಮುಟ್ಟಲು ಆಗಲಿಲ್ಲ. ಬಳ್ಳಾರಿಯಲ್ಲಿ ಈಗ ಮೊದಲಿನಂತೆ ರೆಡ್ಡಿ ಬ್ರದರ್ಸ್ ಹವಾ ಇಲ್ಲ. ಅವರೆಲ್ಲ ಥಂಡಾ ಹೊಡೆದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+