• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಕೊರೊನಾ ವೈರಸ್ ಬೋಗಸ್"; ಕಲ್ಯಾಣ ಮಠ ಸ್ವಾಮೀಜಿ ಚಾಲೆಂಜ್

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಆಗಸ್ಟ್ 29: "ಸರ್ಕಾರಕ್ಕೆ, ವೈದ್ಯರಿಗೆ ನಾ ಓಪನ್ ಚಾಲೆಂಜ್ ಹಾಕುವೆ. ಕೊರೊನಾ ಬೋಗಸ್ ರೋಗ. ನೂರು ಜನ ಕೊರೊನಾ ಸೋಂಕಿತರ ಜೊತೆ ಸಮಯ ಕಳೆದು ಬರುವೆ, ನನಗೆ ಕೊರೊನಾ ಹೇಗೆ ಬರುತ್ತೆ ನೋಡೋಣ" ಎಂದು ಬಳ್ಳಾರಿಯ ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ ಸವಾಲು ಹಾಕಿದ್ದಾರೆ.

‌ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೊನಾ ಒಂದು ಸುಳ್ಳಿನ ರೋಗ. ಈ ಸೋಂಕಿನಿಂದ ಯಾರೂ ಸತ್ತಿಲ್ಲ. ಸತ್ತವರು ಬೇರೆ ಬೇರೆ ಕಾಯಿಲೆಯಿಂದ ಬಳ್ಳಲುತ್ತಿದ್ದವರು. ಯಾರೂ ಕೊರೊನಾ ಸೋಂಕಿನಿಂದ ಸತ್ತಿಲ್ಲ. ಇನ್ನು ಮುಂದೆ ಯಾರೂ ಮಾಸ್ಕ್ ಹಾಕಬೇಡಿ, ಬಿಸಿ ನೀರು ಕುಡಿದರೆ ಹೋಗುವ ರೋಗಕ್ಕೆ ವಿನಾಕಾರಣ ವೈಭವೀಕರಣ ಮಾಡಲಾಗುತ್ತಿದೆ" ಎಂದು ಆರೋಪಿಸಿದರು.

ದಾವಣಗೆರೆ; ಬಿಜೆಪಿ ಶಾಸಕರಿಗೆ ಎಚ್ಚರಿಕೆ ಕೊಟ್ಟ ಕನಕಶ್ರೀ

"ನಾನು ಈ ಸಮಾಜಕ್ಕೆ ಹೆದರಿ ಮಾಸ್ಕ್ ಹಾಕಿರುವೆ. ಯಾರು ಸಹ ಇನ್ನು ಮುಂದೆ ಮಾಸ್ಕ್ ಹಾಕುವುದು ಬೇಡ. ಈ ಸೋಂಕಿಗೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ನಾನು ಸೋಂಕು ಇರುವ ಬೇರೆ ಬೇರೆ ಕಡೆಗಳಲ್ಲಿ ಪ್ರವಾಸ ಮಾಡಿರುವೆ. ಬೆಂಗಳೂರು ಮಹಾರಾಷ್ಟ್ರಕ್ಕೆ ಹೋಗಿ ಬಂದಿರುವೆ. ನನಗೆ ಏನು ಆಗಿಲ್ಲ. ಜನರು ಕೊರೊನಾ ಸೋಂಕಿಗೆ ಹೆದರುವ ಅವಶ್ಯಕತೆ ಇಲ್ಲವೇ ಇಲ್ಲ" ಎಂದಿದ್ದಾರೆ.

English summary
"coronavirus is bogus. i can challenge to government and doctors" said ballari kalyana math kalyana swamiji today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X