ಮಾರ್ಚ್‌ 3ರಿಂದ ಬೆಂಗಳೂರು-ಬಳ್ಳಾರಿ ವಿಮಾನ ಸೇವೆ, ದರಪಟ್ಟಿ

ಬಳ್ಳಾರಿ, ಫೆಬ್ರವರಿ 27: ವಿಜಯನಗರದ ತೋರಣಗಲ್ ವಿಮಾನ ನಿಲ್ದಾಣದಿಂದ ಮತ್ತೆ ವಿಮಾನ ಸೇವೆ ಆರಂಭವಾಗಲಿದೆ. ಜಿಂದಾಲ್ ಕಂಪನಿಗೆ ಸೇರಿರುವ ಈ ವಿಮಾನ ನಿಲ್ದಾಣ ಬಳ್ಳಾರಿ ಮತ್ತು ವಿಜಯನಗರವನ್ನು ವಿವಿಧ ನಗರದ ಜೊತೆ ಬೆಸೆಯುವ ವಿಮಾನ ನಿಲ್ದಾಣವಾಗಿದೆ. ಮಾರ್ಚ್‌ 3ರಿಂದ ಅಲಯನ್ಸ್ ಏರ್ ವಿಮಾನಯಾನ ಸಂಸ್ಥೆ ಎರಡು ನಗರಕ್ಕೆ ವಿಮಾನ ಸಂಚಾರ ಆರಂಭಿಸಲಿದ್ದು, ಬಳ್ಳಾರಿ ಭಾಗದ ಜನರು ವಿಮಾನದ ಮೂಲಕ ಬೆಂಗಳೂರು ನಗರಕ್ಕೆ ತಲುಪಬಹುದು.

ಅಲಯನ್ಸ್ ಏರ್ ವಿದ್ಯಾನಗರ- ಬೆಂಗಳೂರು ಮತ್ತು ಹೈದರಾಬಾದ್-ವಿದ್ಯಾ ನಗರ ನಡುವೆ ವಿಮಾನ ಸೇವೆಯನ್ನು ಆರಂಭಿಸಲಿದೆ. ಎರಡು ನಗರದ ನಡುವೆ ನೇರ ವಿಮಾನ ಸೇವೆ ಮಾರ್ಚ್ 3ರಂದು ಆರಂಭಗೊಳ್ಳಲಿದ್ದು, ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

Jindal Vijaynagar Airport All Set To Connect Bengaluru Again

ವೇಳಾಪಟ್ಟಿ, ದರ: ಹೈದರಾಬಾದ್-ವಿದ್ಯಾ ನಗರ ನಡುವೆ ಮಾರ್ಚ್ 3, 2025ರಿಂದ ವಿಮಾನ ಸೇವೆ ಆರಂಭ. ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ವಿಮಾನಗಳು ಸಂಚಾರವನ್ನು ನಡೆಸಲಿದೆ ಎಂದು ಅಲಯನ್ಸ್ ಏರ್ ಹೇಳಿದೆ.

ಹೈದರಾಬಾದ್-ವಿದ್ಯಾನಗರ ನಡುವಿನ ವಿಮಾನ 9.35ಕ್ಕೆ ಹೊರಡಲಿದ್ದು, 10.55ಕ್ಕೆ ವಿದ್ಯಾನಗರ ತಲುಪಲಿದೆ. ವಿದ್ಯಾನಗರ-ಹೈದರಾಬಾದ್ ನಡುವಿನ ವಿಮಾನ 14.20ಕ್ಕೆ ಹೊರಡಲಿದ್ದು, 15.35ಕ್ಕೆ ಆಗಮಿಸಲಿದೆ ಎಂದು ವೇಳಾಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ. ಈ ಮಾರ್ಗದ ಪ್ರಯಾಣ ದರ 3604 ರೂ.ಗಳಿಂದ ಆರಂಭಗೊಳ್ಳಲಿದೆ.

ವಿದ್ಯಾನಗರ-ಬೆಂಗಳೂರು ನಡುವೆ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ವಿಮಾನಗಳು ಹಾರಾಟವನ್ನು ನಡೆಸಲಿವೆ. ಈ ಮಾರ್ಗದ ಪ್ರಯಾಣ ದರ 3342 ರೂ.ಗಳಿಂದ ಪ್ರಾರಂಭವಾಗಲಿದೆ.

ವಿದ್ಯಾನಗರ-ಬೆಂಗಳೂರು ನಡುವಿನ ವಿಮಾನ 11.20ಕ್ಕೆ ಹೊರಡಲಿದ್ದು, 12.20ಕ್ಕೆ ತಲುಪಲಿದೆ. ಬೆಂಗಳೂರು-ವಿದ್ಯಾನಗರ ನಡುವಿನ ವಿಮಾನ 12.50ಕ್ಕೆ ಹೊರಡಲಿದ್ದು, 13.55ಕ್ಕೆ ತಲುಪಲಿದೆ. ಎರಡೂ ಮಾರ್ಗದ ಟಿಕೆಟ್‌ ಬುಕ್ಕಿಂಗ್‌ಗಾಗಿ ಅಲಯನ್ಸ್ ಏರ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಸುಮಾರು 13 ವರ್ಷಗಳು ಕಳೆದರೂ ಸಹ ಇನ್ನೂ ಶ್ರೀ ಕೃಷ್ಣದೇವರಾಯ ವಿಮಾನ ನಿಲ್ದಾಣ ಕೆಲಸಗಳು ಅಂತಿಮಗೊಳ್ಳುತ್ತಿಲ್ಲ. ಟೆಂಡರ್ ಪಡೆದವರ ವಿಳಂಬದ ಕಾರಣ ಕಾಮಗಾರಿ ವೇಗ ಪಡೆದುಕೊಂಡಿಲ್ಲ.

2024ರಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಬಳ್ಳಾರಿ ವಿಮಾನ ನಿಲ್ದಾಣ ಕಾಮಗಾರಿ ಚುರುಕುಗೊಳಿಸಲು ಯೋಜನೆ ರೂಪಿಸಿತು. ಮೂರು ಹಂತದಲ್ಲಿ ವಿಮಾನ ನಿಲ್ದಾಣದ ಕಾಮಗಾರಿಯನ್ನು ಕೈಗೊಳ್ಳಲು ಮುಂದಾಗಿತ್ತು. ಏರ್‌ಬಸ್ 320 ಮಾದರಿಯ ವಿಮಾನ ಇಳಿಯುವ ಸೌಲಭ್ಯ ಹೊಂದಿರುವಂತೆ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದೆ.

ಬಳ್ಳಾರಿ ಮತ್ತು ವಿಜಯನಗರ ಪ್ರತ್ಯೇಕ ಜಿಲ್ಲೆಯಾಗುವ ಮೊದಲು ಚಾಗನೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಚೆನ್ನೈ ಮೂಲದ 'ಮಾರ್ಗ್‌' ಕಂಪನಿ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಕಾಮಗಾರಿ ಆರಂಭವಾಗದ ಕಾರಣ ಒಪ್ಪಂದವನ್ನು ರದ್ದುಗೊಳಿಸಿತು, ಕಂಪನಿ ನೀಡಿದ್ದ ಭದ್ರತೆಯ 4 ಕೋಟಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು.

2024ರಲ್ಲಿ ಫೇಸ್-1 ರಿಂದ ಫೇಸ್-3 ಎಂದು ಮೂರು ಭಾಗವಾಗಿ ಮಾಡಿ ಕಾಮಗಾರಿಯನ್ನು ಪುನಃ ಆರಂಭಿಸಲಾಗುತ್ತದೆ ಎಂದ ಸರ್ಕಾರ ಹೇಳಿತ್ತು. ಆದರೆ ಕಾಮಗಾರಿ ಎಷ್ಟು ಮುಗಿದಿದೆ?, ಯಾವಾಗ ವಿಮಾನ ನಿಲ್ದಾಣ ಪೂರ್ಣಗೊಳ್ಳಲಿದೆ? ಎಂಬ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರ ಕೊಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+