ರೆಡ್ಡಿ ಸಹೋದರರು ನನ್ನ ಮೇಲೆ ಗೂಂಡಾಗಳನ್ನು ಬಿಟ್ಟಿದ್ದರು: ಸಿದ್ದರಾಮಯ್ಯ
Recommended Video

ಬೆಂಗಳೂರು, ಅಕ್ಟೋಬರ್ 23: ಬಳ್ಳಾರಿಯಲ್ಲಿ ಲೋಕಸಭೆ ಉಪಚುನಾವಣೆ ಪ್ರಚಾರದಲ್ಲಿರುವ ಸಿದ್ದರಾಮಯ್ಯ ಪ್ರಚಾರ ಸಮಯದಲ್ಲಿ ಸ್ವಾರಸ್ಯಕರವಾದ ಹಳೆಯ ಘಟನೆ ಒಂದನ್ನು ನೆನಪಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ವಿರೋಧಪಕ್ಷದಲ್ಲಿದ್ದಾಗ ಬಳ್ಳಾರಿಗೆ ಪಾದಯಾತ್ರೆ ಬಂದ ಘಟನೆಯನ್ನು ರಾಜಕೀಯದ ಬಗ್ಗೆ ಆಸಕ್ತಿ ಉಳ್ಳ ಯಾರೂ ಸಹ ಮರೆಯುವಂತಿಲ್ಲ ಅದೇ ಸಂದರ್ಭದ ಘಟನೆ ಒಂದನ್ನು ಇಂದು ಪ್ರಚಾರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರಾಗಿದ್ದಾಗ ಒಮ್ಮೆ ಸಂಡೂರಿಗೆ ಬಂದಾಗ ನನ್ನ ಮೇಲೆ ಗೂಂಡಾಗಳನ್ನು ಜನಾರ್ಧನ ರೆಡ್ಡಿ ಗುಂಪು ತಮ್ಮ ರೌಡಿಗಳನ್ನು ನಮ್ಮ ಮೇಲೆ ಛೂ ಬಿಟ್ಟಿದ್ದರು, ಹೆದರಿಕೆಗೆ ಪೊಲೀಸರು ಸಹ ನಮ್ಮೊಂದಿಗೆ ಬಂದಿರಲಿಲ್ಲ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

ಸಂಡೂರಿನ ಜನ ಜೀವ ಭಯದಲ್ಲಿದ್ದರು
ಅಂದು ನಾನು ಬಳ್ಳಾರಿಗೆ ಬಂದಾಗ ಸಮಾವೇಶ ಮಾಡಲು ಸಹ ಜಾಗ ಕೊಡಲು ಸಿದ್ದವಿರಲಿಲ್ಲ, ಸಂಡೂರಿನ ಜನ ಜೀವಭಯದಲ್ಲಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರೆಡ್ಡಿ ಮತ್ತು ಶ್ರೀರಾಮುಲು ಜನರನ್ನು ಹೆದರಿಸಿ ರಾಜಕೀಯ ಮಾಡಿದ್ದಾರೆ ಎಂದು ಅವರು ಹೇಳಿದರು.

ರಾಮುಲುಗೆ 371ಜೆ ಎಂದರೇನು ಗೊತ್ತಿಲ್ಲ
ಶ್ರೀರಾಮುಲು 371ಜೆ ಎಂದರೆ ಏನು ಎಂಬುದು ಗೊತ್ತಿಲ್ಲ. ಆದರೆ ಅವರಿಗೆ ಅಪರಾಧ ಕಾಯ್ದೆಗಳ ಮಾತ್ರ ಚೆನ್ನಾಗಿ ಅರಿವಿದೆ ಎಂದು ಸಿದ್ದರಾಮಯ್ಯ ಅವರು ರಾಮುಲು ಕಾಲೆಳೆದರು. ಟ್ವಿಟ್ಟರ್ ಖಾತೆಯಲ್ಲಿ ಸಹ ಅವರು ಇದನ್ನು ಪ್ರಕಟಿಸಿದ್ದಾರೆ.

ನನ್ನನ್ನು ಬೈದರೆ ಕುರುಬ ಸಮುದಾಯವನ್ನು ಬೈದಂತಾ?
ಶ್ರೀರಾಮುಲುಗೆ ಬೈದರೆ ನಾಯಕ ಸಮುದಾಯಕ್ಕೆ ಬೈದರು ಎನ್ನುತ್ತಾರೆ ಹಾಗಾದರೆ ನನ್ನ ಟೀಕಿಸಿದರೆ ಕುರುಬ ಸಮುದಾಯವನ್ನು ಟೀಕಿಸಿದಂತೆ ಆಗುತ್ತದೆಯೇ ಎಂದ ಸಿದ್ದರಾಮಯ್ಯ, ವ್ಯಕ್ತಿಯೊಬ್ಬನನ್ನು ಸಮುದಾಯಕ್ಕೆ ಹೋಲಿಸುವುದು ತರವಲ್ಲ ಎಂದರು. ಅಷ್ಟೆ ಅಲ್ಲದೆ ನಾಯಕ ಸಮುದಾಯಕ್ಕೆ ರಾಮುಲು ಕೊಡುಗೆ ಏನು ಎಂದು ಅವರು ಪ್ರಶ್ನೆ ಮಾಡಿದರು.

ಡಿ.ಕೆ.ಶಿವಕುಮಾರ್ vs ಶ್ರೀರಾಮುಲು
ಬಳ್ಳಾರಿ ಲೋಕಸಭೆ ಉಪಚುನಾವಣೆ ಕಣ ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೆಸ್‌ನಿಂದ ವಿಎಸ್ ಉಗ್ರಪ್ಪ ಚುನಾವಣೆಗೆ ನಿಂತಿದ್ದರೆ. ಬಿಜೆಪಿಯಿಂದ ಶ್ರೀರಾಮುಲು ಅವರ ಸಹೋದರಿ ಶಾಂತಾ ಅವರು ಚುನಾವಣೆಗೆ ನಿಂತಿದ್ದಾರೆ. ಬಳ್ಳಾರಿ ಉಪಚುನಾವಣೆ ಡಿ.ಕೆ.ಶಿವಕುಮಾರ್ ಮತ್ತು ಶ್ರೀರಾಮುಲು ನಡುವಿನ ಸ್ಪರ್ಧೆ ಎಂಬಂತೆ ಭಾರಿ ಕುತೂಹಲ ಕೆರಳಿಸಿದೆ.
-
By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ? -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು?












Click it and Unblock the Notifications