ಬಳ್ಳಾರಿ: ಪೊಲೀಸ್ ಕ್ವಾರ್ಟ್ರರ್ಸ್‌ನಲ್ಲಿ ಅನೈತಿಕ ಸಂಬಂಧದ ರಂಪಾಟ
ಬಳ್ಳಾರಿ, ಜುಲೈ, 20: ಬಳ್ಳಾರಿಯ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್ ಒಬ್ಬರ ಪತ್ನಿ ನಡುವಣ ಅನೈತಿಕ ಸಂಬಂಧ ಬೀದಿ ರಂಪಾಟವಾಗಿದ್ದು, ಇಬ್ಬರ ಬಂಧನಕ್ಕೆ ಕಾರಣವಾಗಿದೆ.
ಬಳ್ಳಾರಿಯ ಡಿಎಆರ್ ಕ್ವಾರ್ಟರ್ಸ್‌ನಲ್ಲಿರುವ ವೈರ್‌ಲೆಸ್ ವಿಭಾಗದ ಪಿಎಸ್‌ಐ ಕಿರಣ್ ಸಾಮ್ರಾಟ್ ಮತ್ತು ಕಾನ್‌ಸ್ಟೆಬಲ್ ಪತ್ನಿಯೊಬ್ಬರ ಮಧ್ಯೆ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಕಿರಣ್ ಮತ್ತು ಕಾನ್‌ಸ್ಟೆಬಲ್ ಪತ್ನಿ ನಡುವೆ ಗಲಾಟೆ ನಡೆದಿದೆ. ಕಿರಣ್ ಪತ್ನಿ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಅವರ ಕ್ವಾರ್ಟರ್ಸ್‌ಗೆ ಹೋಗಿದ್ದ ಕಾನ್‌ಸ್ಟೆಬಲ್ ಪತ್ನಿ ಅಲ್ಲಿ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿದ್ದಾರೆ.

ಇದರಿಂದ ಇಬ್ಬರ ನಡುವಣ ಅನೈತಿಕ ಸಂಬಂಧ ಮತ್ತು ಜಗಳ ಬಯಲಾಗಿದೆ. ಕೂಡಲೇ ಅಲ್ಲಿನ ಅಧಿಕಾರಿಗಳು ಗಾಂಧಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ತಮ್ಮನ್ನು ಬಂಧಿಸಲು ಬಂದ ಪೊಲೀಸರೊಂದಿಗೆ ಮಹಿಳೆ ಜಗಳವಾಡಿದ್ದಾರೆ.
'ನನ್ನ ಇಷ್ಟ. ಏನು ಬೇಕಾದರೂ ಮಾಡುತ್ತೇನೆ. ನೀವೆಲ್ಲ ಏಕೆ ಬರುತ್ತೀರಿ ಎಂದು ರಂಪಾಟ ನಡೆಸಿದ್ದಾರೆ. ಈ ವೇಳೆ ಅವರು ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ.
ಸರ್ಕಾರಿ ವಸ್ತುಗಳಿಗೆ ಹಾನಿ ಮಾಡಿದ ಆರೋಪದಲ್ಲಿ ಇಬ್ಬರನ್ನೂ ಬಂಧಿಸಲಾಗಿದ್ದು, ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.
ಪಿಎಸ್‌ಐ ಕಿರಣ ಸಾಮ್ರಾಟ್ ಅವರನ್ನು ಅಮಾನತುಗೊಳಿಸಲಾಗಿದ್ದು, ಡಿಎಸ್‌ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.
ಮಹಿಳೆ ಮತ್ತು ಕಾನ್‌ಸ್ಟೆಬಲ್‌ಗೆ ಐದು ವರ್ಷದ ಹಿಂದೆ ಮದುವೆಯಾಗಿದ್ದು ಒಂದು ಮಗು ಇದೆ. ಕಿರಣ್ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರಿಗೂ ಒಂದು ಮಗು ಇದೆ. ಕಿರಣ್ ಮದುವೆಗೂ ಹಿಂದಿನಿಂದಲೂ ಇಬ್ಬರ ನಡುವೆ ಸಂಬಂಧ ಇತ್ತು ಎಂದು ಆರೋಪಿಸಲಾಗಿದೆ.












Click it and Unblock the Notifications