ರಾಜ್ಯದ ಹಲವೆಡೆ ಮಳೆ ಅರ್ಭಟ, ಬಳ್ಳಾರಿಯಲ್ಲಿ 200 ಕುರಿಗಳು ಸಾವು

ಬಳ್ಳಾರಿ, ಜೂನ್ 07 : ಇನ್ನು ಮುಂಗಾರು ಕರ್ನಾಟಕವನ್ನು ಪ್ರವೇಶ ಮಾಡಿಲ್ಲ, ಆಗಲೇ ರಾಜ್ಯದ ವಿವಿದೆಡೆ ವರುಣನ ಅರ್ಭಟ ಜೋರಾಗಿದೆ.

ಇನ್ನೆ ರಾತ್ರಿ (ಮಂಗಳವಾರ) ಬಳ್ಳಾರಿ, ಬಾಗಲಕೋಟೆ, ಕಲಬುರಗಿ, ಕೊಪ್ಪಳ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿದಿದ್ದು, ಕೆಲ ಕಡೆ ಸಾಕಷ್ಟು ಅನಾಹುತ ಸಂಭವಿಸಿದೆ.

ಗುಡುಗು ಸಿಡಿಲು ಸಹಿತ ಸುಮಾರು 3 ಗಂಟೆಗಳ ಕಾಲ ಸುರಿದ ಮಳೆಗೆ ಬಳ್ಳಾರಿ ಹೊರವಲಯದ ಭತ್ರಿ ಬಳಿಯ ಜಮೀನಿನಲ್ಲಿದ್ದ ಸುಮಾರು 200 ಕುರಿಗಳು ಸಾವನ್ನಪ್ಪಿವೆ.[ಬಾಗಲಕೋಟೆ: ಮಳೆ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋದ ಕಾರು]

Heavy rain, 200 sheeps dead In bellary

ಗಂಗಾಧರ, ಮಲ್ಲಯ್ಯ ಹಾಗೂ ನಾರಾಯಣ ಎನ್ನುವವರಿಗೆ ಸೇರಿದ 200ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಈ ವಿಷಯ ತಿಳಿಯುತ್ತಿದಂತೆಯೇ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ವೆಂಕಟರಮಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಕುರಿ ಯಜಮಾನರಿಗೆ ಸ್ವಾಂತನ ಹೇಳಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಇನ್ನು ಮಳೆಯ ರಭಸಕ್ಕೆ ಬಾಲಗಕೋಟೆ ಜಿಲ್ಲೆಯಲ್ಲಿ ಕಾರುವೊಂದು ಹಳ್ಳಕ್ಕೆ ಕೊಚ್ಚಿ ಹೋಗಿ ನಾಲ್ಕು ಜನರು ಸಾವನ್ನಪ್ಪಿರುವುದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+