ಬಳ್ಳಾರಿಯ ಸದ್ಭಾವನಾ ಪಾದಯಾತ್ರೆಯ ಚಿತ್ರಗಳು
ಬಳ್ಳಾರಿ, ಜೂನ್ 7 : "ಪ್ರತಿಯೊಬ್ಬರೂ ಮತ್ತೊಬ್ಬರ ಬದುಕಿನಲ್ಲಿ ದೀಪ ಬೆಳಗಿಸಿ ಬೆಳಕಾಗಬೇಕು" ಎಂದು ಶಿವಶಾಂತವೀರ ಮಹಾಶರಣರು ಹೇಳಿದ್ದಾರೆ. ಶ್ರೀಧರಗಡ್ಡೆ ಗ್ರಾಮದಲ್ಲಿ ಸೋಮವಾರ ನಡೆದ ದುಶ್ಚಟಗಳ ಭಿಕ್ಷೆ ಹಾಗು ಸದ್ಗುಣಗಳ ದೀಕ್ಷೆಯ ಶರಣ ಸದ್ಭಾವನಾ ಪಾದಯಾತ್ರೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅನೇಕ ಜನರು ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ. ಸಮಸ್ಯೆಗಳನ್ನು ಮರೆಯಲು ಮತ್ತು ಐಷಾರಾಮಿ ಬದುಕಿನತ್ತ ಆಕರ್ಷಿತರಾಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ. ಈ ರೀತಿಯ ದುಶ್ಚಟಗಳು ಅನೇಕರ ಬದುಕು, ಭವಿಷ್ಯಗಳನ್ನು ಕಳೆಯುತ್ತಿದೆ ಎಂದು ಮಹಾಶರಣರು ಆತಂಕ ವ್ಯಕ್ತಪಡಿಸಿದ್ದಾರೆ.
ಜನರು ದಾನ ನೀಡುವುದು ಭವಿಷ್ಯಕ್ಕೆ ಮತ್ತು ಮುಂದಿನ ಪೀಳಿಗೆಗೆ ಪುಣ್ಯದ ನಿಧಿಯನ್ನು ರಚಿಸಿದಂತೆ. ಗಳಿಸಿದ ಭೂಮಿ, ಸಂಗ್ರಹಿಸಿದ ಶ್ರೀಮಂತಿಕೆ ಇವುಗಳ ಮಧ್ಯೆ ಜ್ಞಾನ' ಮಾತ್ರ ಶಾಶ್ವತ. ಆದ್ದರಿಂದ ಜನರು ಜ್ಞಾನ ಸಂಪಾದನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಶರಣರು ಕರೆ ನೀಡಿದ್ದಾರೆ. ಚಿತ್ರಗಳಲ್ಲಿ ನೋಡಿ ಸದ್ಗುಣಗಳ ದೀಕ್ಷೆಯ ಶರಣ ಸದ್ಭಾವನಾ ಪಾದಯಾತ್ರೆ

ಸದ್ಗುಣಗಳ ದೀಕ್ಷೆಯ ಶರಣ ಸದ್ಭಾವನಾ ಪಾದಯಾತ್ರೆ
"ಪ್ರತಿಯೊಬ್ಬರೂ ಮತ್ತೊಬ್ಬರ ಬದುಕಿನಲ್ಲಿ ದೀಪ ಬೆಳಗಿಸಿ ಬೆಳಕಾಗಬೇಕು" ಎಂದು ಶಿವಶಾಂತವೀರ ಮಹಾಶರಣರು ಹೇಳಿದ್ದಾರೆ. ಬಳ್ಳಾರಿಯ ಶ್ರೀಧರಗಡ್ಡೆ ಗ್ರಾಮದಲ್ಲಿ ಸೋಮವಾರ ನಡೆದ ದುಶ್ಚಟಗಳ ಭಿಕ್ಷೆ ಹಾಗು ಸದ್ಗುಣಗಳ ದೀಕ್ಷೆಯ ಶರಣ ಸದ್ಭಾವನಾ ಪಾದಯಾತ್ರೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅನೇಕ ಜನರು ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ. ಸಮಸ್ಯೆಗಳನ್ನು ಮರೆಯಲು ಮತ್ತು ಐಷಾರಾಮಿ ಬದುಕಿನತ್ತ ಆಕರ್ಷಿತರಾಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ ಎಂದು ಶರಣರು ಆತಂಕ ವ್ಯಕ್ತಪಡಿಸಿದರು.

ಜ್ಞಾನ ಸಂಪಾದನೆಗೆ ಆದ್ಯತೆ ನೀಡಿ
ಪ್ರತಿಯೊಬ್ಬರೂ ಜ್ಞಾನ ಸಂಪಾದನೆಗೆ ಆದ್ಯತೆ ನೀಡಬೇಕು. ಕೈಲಾದಷ್ಟು ದಾನ ನೀಡುವ ಮೂಲಕ ಧರ್ಮದ ಆಚರಣೆ, ಧರ್ಮದ ಪಾಲನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಶರಣಕು ಕರೆ ನೀಡಿದರು. ಶ್ರದ್ಧೆ, ಭಕ್ತಿ ಮತ್ತು ಬದ್ಧತೆಯಿಂದ ದುಶ್ಚಟಗಳನ್ನು ತ್ಯಜಿಸುವ ಮೂಲಕ ಎಲ್ಲರೂ ವೈಯಕ್ತಿಕ ಹಾಗು ಸಮಾಜದ ಆರೋಗ್ಯವನ್ನು ಸುಧಾರಿಸಲು ಕೊಡುಗೆ ನೀಡಬೇಕು ಎಂದು ಶರಣರು ಅಭಿಪ್ರಾಯಪಟ್ಟರು.

ಶ್ರೀಗಳಿಗೆ ತುಲಾಭಾರ
ಶ್ರೀಧರಗಡ್ಡೆ ಗ್ರಾಮಸ್ಥರ ಪರವಾಗಿ ಶಿವಶಾಂತವೀರ ಮಹಾಶರಣರಿಗೆ ತುಲಾಭಾರ ನಡೆಸಲಾಯಿತು. ಶರಣರ ಭಕ್ತ ದಿವಂಗತ ಎಸ್.ಬಿ. ಚನ್ನನಗೌಡರ ಪುತ್ರ ಅಶೋಕ ಗೌಡ ಮತ್ತು ಕುಟುಂಬದ ಸದಸ್ಯರು ಈ ತುಲಾಭಾರವನ್ನು ನೆರವೇರಿಸಿದರು.

ಸದ್ಭಾವನಾ ಸಂಚಾರ
ಸೋಮವಾರ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಶ್ರೀಧರಗಡ್ಡೆ ಗ್ರಾಮದ ಒಳಗಡೆ ಸಂಚರಿಸಿದ ಶಿವಶಾಂತವೀರ ಶರಣರು, ಸಿದ್ಧಲಿಂಗ ದೇವರು ಹಾಗು ಭಕ್ತರು ಅನೇಕ ದುಶ್ಚಟಗಳನ್ನು ಜೋಳಿಗೆಗೆ ಪಡೆದರು. ಹೊಂಬಳದ ಬಸವರಾಜ ಬನ್ನಿಕೊಪ್ಪ ಮತ್ತು ಸಂಗಡಿಗರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











Click it and Unblock the Notifications