ಬಳ್ಳಾರಿಯಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಸುಟ್ಟು ಭಸ್ಮವಾದ ಕಟ್ಟಿಗೆ ಅಡ್ಡೆ: ಲಕ್ಷಾಂತ ರೂಪಾಯಿ ನಷ್ಟ
ಬಳ್ಳಾರಿ, ಏಪ್ರಿಲ್, 10: ಬಳ್ಳಾರಿಯ ಮೆಹಬೂಬ್ ನಗರದ ಹರಿಶ್ಚಂದ್ರ ಘಾಟ್ ಬಳಿಯ ಕಟ್ಟಿಗೆ ಸ್ಟಾಕ್ ಯಾಡ್‌ರ್ಗೆ ಬೆಂಕಿ ಬಿದ್ದಿದ್ದು, ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ಘಟನೆಯು ಭಾನುವಾರ ರಾತ್ರಿ ನಡೆದಿದ್ದು, ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸುಟ್ಟು ಭಸ್ಮವಾದ ಕಟ್ಟಿಗೆ ಯಾರ್ಡ್
ಸುಟ್ಟು ಭಸ್ಮವಾದ ಕಟ್ಟಿಗೆ ಯಾರ್ಡ್ ಮುಸ್ತಾಕ್ ಎಂಬುವವರಿಗೆ ಸೇರಿದ್ದಾಗಿದೆ. ಗೃಹ ಹಾಗೂ ಕಟ್ಟಡಗಳಿಗೆ ಕಿಟಕಿ, ಬಾಗಿಲು ಹಾಗೂ ಗೃಹಪಯೋಗಿ ವಸ್ತುಗಳನ್ನು ತಯಾರಿಸಲು ಬೇಕಾಗುವ ವಿವಿಧ ಮರಗಳ ಕಟ್ಟಿಗೆ ಕೊರೆಸಿ ಇಲ್ಲಿ ಸಂಗ್ರಹ ಮಾಡಲಾಗಿತ್ತು. ಮುಸ್ತಾಕ್ ಅವರು ಹೇಳುವ ಪ್ರಕಾರ ಇಲ್ಲಿ ಅಂದಾಜು 20 ಲಕ್ಷ ರೂಪಾಯಿಗಳ ಕಟ್ಟಿಗೆ ಸಂಗ್ರಹ ಮಾಡಲಾಗಿತ್ತು. ಆದರೆ ಅಗ್ನಿ ಅವಘಡಕ್ಕೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ.

ಯಾರೋ ದುಷ್ಕರ್ಮಿಗಳು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ಕಟ್ಟಿಗೆ ಸಂಗ್ರಹಕ್ಕೆ ಬೆಂಕಿ ಇಟ್ಟಿರಬಹುದು ಎಂದು ಅನುಮಾನಿಸಲಾಗಿದೆ. ಅಗ್ನಿ ಅವಘಡದ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಒಟ್ಟಿನಲ್ಲಿ ಲಕ್ಷಾಂತರ ರೂಪಾಯಿಗಳ ಮೌಲ್ಯದ ಕಟ್ಟಿಗೆ ಭಸ್ಮವಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಕಿ ಹಚ್ಚುವ ಮೂಲಕ ಆಕ್ರೋಶ
ಇನ್ನು ರಾಮನವಮಿಯಂದು ಧ್ವಜವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಕಳೆದ ರಾತ್ರಿ ಎರಡು ಗುಂಪುಗಳ ನಡುವೆ ಮತ್ತೆ ಘರ್ಷಣೆ ನಡೆದಿದ್ದು ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗಲಭೆ ನಿಯಂತ್ರಣಕ್ಕೆ ತರಲು ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಕಳೆದ ರಾತ್ರಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಜೊತೆಗೆ ಶಾಸ್ತ್ರಿನಗರದಲ್ಲಿ ಎರಡು ಅಂಗಡಿಗಳು ಮತ್ತು ಆಟೋ ರಿಕ್ಷಾಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ಹೊರಹಾಕಲಾಗಿದೆ. ಈ ವೇಳೆ ಉದ್ವಿಗ್ನಗೊಂಡ ವಾತಾವರಣದಿಂದ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಬೇಕಾಯಿತು
ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ನಗರ ಪೊಲೀಸ್ ಮುಖ್ಯಸ್ಥ ಪ್ರಭಾತ್ ಕುಮಾರ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಸ್ಥಳದಲ್ಲಿ ಜಮಾಯಿಸಿದವರನ್ನು ಮನೆಗೆ ಕಳುಹಿಸಲಾಗಿದೆ. ಇಡೀ ಪ್ರದೇಶದಲ್ಲಿ ಫೋರ್ಸ್ ಅನ್ನು ನಿಯೋಜಿಸಲಾಗಿದೆ. ಆರ್ಎಎಫ್ (ಕ್ಷಿಪ್ರ ಕಾರ್ಯಾಚರಣೆ ಪಡೆ) ತಂಡವನ್ನೂ ಸ್ಥಳದಲ್ಲಿ ನಿಯೋಜಿಸಲಾಗಿದೆ" ಎಂದು ಪ್ರಭಾತ್ ಕುಮಾರ್ ಅವರು ಹೇಳಿದರು.
ಗಲಭೆ ನಿಗ್ರಹ ಪೊಲೀಸರು ಇಂದು ಬೆಳಗ್ಗೆ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ಬಳಿಕ ಕೆಲವರನ್ನು ಬಂಧಿಸಲಾಗಿದೆ ಎಂದು ಪೂರ್ವ ಸಿಂಗ್‌ಭೂಮ್‌ನ ಉಪ ಆಯುಕ್ತ ವಿಜಯ ಜಾಧವ್ ತಿಳಿಸಿದ್ದಾರೆ. "ನಾವು ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದೇವೆ. ಶಾಂತಿ ಸಮಿತಿ ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಂವಹನವನ್ನು ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದೇವೆ" ಎಂದು ಅವರು ಹೇಳಿದರು.
ಕೆಲವು ಸಮಾಜ ವಿರೋಧಿ ಶಕ್ತಿಗಳು ಶಾಂತಿ ಕದಡಲು ಯತ್ನಿಸುತ್ತಿದ್ದು, ಅದಕ್ಕೆ ಕಿವಿಗೊಡದಂತೆ ಶಾಂತತೆಯಿಂದ ವರ್ತಿಸಿ ಎಂದು ಪೊಲೀಸರು ನಾಗರಿಕರಿಂದ ಸಹಕಾರ ಕೋರಿದರು. "ನಾವು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಪೊಲೀಸ್ ಪಡೆ, ಕ್ವಿಕ್ ರೆಸ್ಪಾನ್ಸ್ ಟೀಮ್, ಮ್ಯಾಜಿಸ್ಟ್ರೇಟ್, ರ್ಯಾಪಿಡ್ ಆಕ್ಷನ್ ಫೋರ್ಸ್ ಸಿಬ್ಬಂದಿ ಮತ್ತು ಇತರ ಗಲಭೆ ವಿರೋಧಿ ಶಶಸ್ತ್ರಗಳನ್ನು ನಿಯೋಜಿಸಿದ್ದೇವೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವದಂತಿಗಳನ್ನು ನಂಬಬೇಡಿ ಎಂದು ಜಾಧವ್ ಜನರಿಗೆ ಮನವಿ ಮಾಡಿದ್ದಾರೆ. "ಜನರು ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ವಿನಂತಿಸಲಾಗಿದೆ. ಅವರು ಯಾವುದೇ ಪ್ರಚೋದನಕಾರಿ ಅಥವಾ ಅಹಿತಕರ ಸಂದೇಶಗಳನ್ನು ಸ್ವೀಕರಿಸಿದರೆ, ದಯವಿಟ್ಟು ಪೊಲೀಸರಿಗೆ ವರದಿ ಮಾಡಿ" ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.












Click it and Unblock the Notifications