ಬಳ್ಳಾರಿ-ಹೊಸಪೇಟೆ 4 ಪಥದ ರಸ್ತೆಗೆ ಕೇಂದ್ರದ ಒಪ್ಪಿಗೆ
ಬಳ್ಳಾರಿ, ಏಪ್ರಿಲ್ 07 : ಬಳ್ಳಾರಿ ಭಾಗದ ಜನರಿಗೆ ಕೇಂದ್ರ ಸರ್ಕಾರ ಯುಗಾದಿ ಕೊಡುಗೆ ನೀಡಿದೆ. ಬಳ್ಳಾರಿ-ಹೊಸಪೇಟೆ ನಡುವೆ 4 ಪಥದ ರಸ್ತೆ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಸುಮಾರು 1,621 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ 4 ಪಥದ ರಸ್ತೆ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಹೊಸಪೇಟೆ-ಬಳ್ಳಾರಿ ಮೂಲಕ ಆಂಧ್ರಪ್ರದೇಶ ಗಡಿಯ ತನಕ ಸಾಗುವ ರಾಷ್ಟ್ರೀಯ ಹೆದ್ದಾರಿ 63ರ ಈ ರಸ್ತೆಯನ್ನು 4 ಪಥವಾಗಿ ಪರಿವರ್ತಿಸಲಾಗುತ್ತದೆ. [ಬೆಂಗಳೂರು ನಗರಕ್ಕೊಂದು 10 ಪಥದ ರಸ್ತೆ]

ಸುಮಾರು 95.37 ಕಿ.ಮೀ ಉದ್ದದ ಈ ರಸ್ತೆ ನಿರ್ಮಾಣ ಯೋಜನೆಗೆ, 1621.96 ಕೋಟಿ ರೂ.ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಭೂಸ್ವಾಧೀನ, ಪುನರ್‌ವಸತಿ, ಪ್ರಾಥಮಿಕ ಕಾಮಗಾರಿ, ಪರಿಹಾರ ಎಲ್ಲವೂ ಸೇರಿ ಇಷ್ಟು ವೆಚ್ಚವಾಗಲಿದೆ. [ರಾಜ್ಯದ ರಸ್ತೆ ಯೋಜನೆಗಳಿಗೆ ನೆರವು ಕೇಳಿದ ಸಿದ್ದರಾಮಯ್ಯ]
CCEA has given its approval for development of four laning of Hospet-Bellary-Karnataka/Andhra Pradesh Border section of NH– 63 in Karnataka.
— PMO India (@PMOIndia) April 6, 2016
ರಾಷ್ಟ್ರೀಯ ಹೆದ್ದಾರಿ 63ರ ಈ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದನ್ನು ತಪ್ಪಿಸಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲು ಈ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. [ರಾಷ್ಟ್ರೀಯ ಹೆದ್ದಾರಿಯಾಗಲಿರುವ 14 ರಾಜ್ಯ ಹೆದ್ದಾರಿಗಳ ಪಟ್ಟಿ]
And also in reducing time & cost of travel for traffic plying on the Hospet-Bellary-Karnataka/Andhra Pradesh Border sector of NH-63.
— PMO India (@PMOIndia) April 6, 2016












Click it and Unblock the Notifications