ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗಿ ರಾಜ್ಯಕ್ಕೆ ಪ್ರಥಮ
ಬಳ್ಳಾರಿ, ಏಪ್ರಿಲ್ 16: ಪಂಕ್ಚರ್ ಅಂಗಡಿಯಲ್ಲಿ ಅಪ್ಪನಿಗೆ ಹೆಗಲಾಗಿ ದುಡಿಯುತ್ತಿದ್ದ ಹುಡುಗಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಬಳ್ಳಾರಿಯ ಕೊಟ್ಟೂರಿನಲ್ಲಿ ದೇವೇಂದ್ರಪ್ಪ ಅವರ ಸೈಕಲ್ ಶಾಪ್‌ನಲ್ಲಿ ಪಂಕ್ಚರ್ ಹಾಕುತ್ತಿದ್ದ ಕುಸುಮ ಉಜ್ಜಿನಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಅತ್ಯುತ್ತಮ ದರ್ಜೆ ಗಳಿಸಿದ್ದಾರೆ. ಆ ಮೂಲಕ ದೇವೇಂದ್ರಪ್ಪ-ಜಯಮ್ಮ ದಂಪತಿಗಳಿಗೆ ಹೆಮ್ಮೆ ತಂದಿದ್ದಾರೆ.
ಕೊಟ್ಟೂರಿನ ಖ್ಯಾತ ಇಂದು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕುಸುಮ ಪ್ರತಿದಿನ ಕಾಲೇಜಿಗೆ ಹೋಗಿ ಬಂದು ಅಪ್ಪನ ಜೊತೆಗೆ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು, ಇನ್ನಿತರೆ ಕೆಲಸಗಳನ್ನು ಮಾಡುತ್ತಿದ್ದರು, ಅದರ ನಡುವೆಯೇ ಓದು ಸಾಗಿತ್ತು.

ಕುಸುಮ ಅವರದ್ದು ಐವರು ಅಕ್ಕ-ತಂಗಿಯರ ದೊಡ್ಡ ಮತ್ತು ಕಡಿಮೆ ಆದಾಯ ಕುಟುಂಬ. ಆದರೆ ಅವರ ಓದಿಗೆ ಎಂದೂ ಬಡತನ ಅಡ್ಡಿಯಾಗಲಿಲ್ಲ.
'ಇಂತಹಾ ನಿಗದಿತ ಸಮಯದಲ್ಲೇ ಓದುತ್ತಿದ್ದೆ ಎಂದೇನೂ ಇಲ್ಲ, ಬಿಡುವಾದಾಗೆಲ್ಲಾ ಇಷ್ಟವಾದ ವಿಷಯಗಳನ್ನು ಓದುತ್ತಿದ್ದೆ. ಉಳಿದ ಸಮಯದಲ್ಲಿ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ, ಗುರುಗಳ ಮಾರ್ಗದರ್ಶನ ಮತ್ತು ಪೋಷಕರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ' ಎಂದು ಕುಸುಮ ಹೇಳುತ್ತಾರೆ.
ಕಲಾ ವಿಭಾಗದಲ್ಲಿ 600 ಕ್ಕೆ ಬರೋಬ್ಬರಿ 594 ಅಂಕಗಳನ್ನು ಪಡೆದು ಪ್ರಥಮ rank ಪಡೆದಿದ್ದಾರೆ ಕುಸುಮ ಉಜ್ಜಿನಿ. ಇವರು ಪಿಯುಸಿ ಕಲಿತ ಇಂದು ಕಾಲೇಜಿನ ಒಟ್ಟು 9 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 rank ಪಟ್ಟಿಯಲ್ಲಿದ್ದಾರೆ. ಕಳೆದ ಕೆಲ ವರ್ಷದಿಂದಲೂ ಕಲಾ ವಿಭಾಗದಲ್ಲಿ ಇಂದು ಕಾಲೇಜಿನ ವಿದ್ಯಾರ್ಥಿಗಳೇ ರಾಜ್ಯಕ್ಕೆ ಟಾಪ್.












Click it and Unblock the Notifications