Ballari utsav: ಗಾಯಕಿ ಮಂಗ್ಲಿ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ ಕಿಡಿಗೇಡಿಗಳು
ಬಳ್ಳಾರಿ, ಜನವರಿ, 22: ಗಾಯಕಿ ಮಂಗ್ಲಿ ಬಳ್ಳಾರಿ ಉತ್ಸವಕ್ಕೆ ಬಂದಿದ್ದು, ಈ ವೇಳೆ ಮಂಗ್ಲಿ ಕಾರಿನ ಗ್ಲಾಸ್ ಅನ್ನು ಕೆಲ ಕಿಡಿಗೇಡಿಗಳು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ.
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡು ಹೇಳುವ ಮೂಲಕ ತನ್ನದೇ ಆದ ಚಾಪು ಮೂಡಿಸಿರುವ ಗಾಯಕಿ ಮಂಗ್ಲಿ ಬಳ್ಳಾರಿ ಉತ್ಸವಕ್ಕೂ ಆಗಮಿಸಿದ್ದರು. ಇನ್ನೇನು ಕಾರ್ಯಕ್ರಮ ಮುಗಿಸಿ ಬರುವ ವೇಳೆಗೆ ಕಿಡಿಗೇಡಿಗಳು ಗಾಯಕಿ ಮಂಗ್ಲಿ ಕಾರಿನ ಗ್ಲಾಸನ್ನು ಪುಡಿ ಪುಡಿ ಮಾಡಿದ್ದಾರೆ.
ಮಂಗ್ಲಿ ಕಾರಿನ ಗ್ಲಾಸ್ ಪುಡಿ ಪುಡಿ
ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿನ ವೇದಿಕೆ ಮೇಲೆ ಹಾಡುಗಳನ್ನು ಹೇಳಿ ಹಿಂತಿರುಗುವಾಗ ಮಂಗ್ಲಿ ಅವರನ್ನು ನೋಡಲು ಯುವಕರು ಮುಗಿಬಿದ್ದಿದ್ದರು. ಆಗ ಕೆಲ ಪುಂಡರು ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್‌ಗೆ ನುಗಿದ್ದಾರೆ. ಅಲ್ಲದೇ ಮಂಗ್ಲಿ ಹೋಗುತ್ತಿದ್ದ ಕಾರಿಗೂ ಕಲ್ಲು ಎಸೆದಿದ್ದು, ಕೂಡಲೇ ಪೋಲಿಸರು ಲಘು ಲಾಟಿ ಪ್ರಹಾರ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಬಳ್ಳಾರಿ ಉತ್ಸವಕ್ಕೆ ಆಗಮಿಸಿದ್ದ ಮಂಗ್ಲಿ
ಗಾಯಕಿ ಮಂಗ್ಲಿ ಇದೀಗ ಬಹುಭಾಷೆಯ ಸಿನಿಮಾಗಳಿಗೆ ಹಾಡುತ್ತಾರೆ. ಮಂಗ್ಲಿಗೆ ಅವರದ್ದೇ ಆದ ಅಪಾರ ಅಭಿಮಾನಿಗಳ ಬಳಗವೇ ಇದೆ. ಹಾಗೆಯೇ ಕರ್ನಾಟಕದಲ್ಲೂ ಮಂಗ್ಲಿ ಗಾಯನಕ್ಕೆ ಯುವಪೀಳಿಗೆಯ ಬಹಳಷ್ಟು ಮನಸೋತಿದ್ದಾರೆ. ಇತ್ತೀಚೆಗಷ್ಟೇ ನಡೆದ ಚಿಕ್ಕಬಳ್ಳಾಪುರ ಉತ್ಸವಕ್ಕೂ ಮಂಗ್ಲಿ ಆಗಮಿಸಿ, ತಮ್ಮ ಹಾಡಿನ ಮೂಲಕ ಅಲ್ಲಿದ್ದ ಜನರನ್ನು ರಂಜಿಸಿದ್ದರು. ಇದೀಗ ಬಳ್ಳಾರಿ ಉತ್ಸವದಲ್ಲಿ ಹಾಡಿನ ಮೂಲಕ ಜನರನ್ನು ರಂಜಿಸಲು ಬಂದಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಮಂಗ್ಲಿ ಅವರ ಕಾರಿನ ಗ್ಲಾಸ್ ಅನ್ನು ಕಲ್ಲಿನಿಂದ ಹೊಡೆದ ಪುಡಿ ಪುಡಿ ಮಾಡಿದ್ದಾರೆ.

ಮಂಗ್ಲಿ ಕಾರಿನ ಗ್ಲಾಸ ಅನ್ನು ಪುಂಡರು ಹೊಡೆದು ಹಾಕಿದ ಘಟನೆ ಶನಿವಾರ (ಜನವರಿ 21) ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದಿದೆ. ಇನ್ನು ಬಳ್ಳಾರಿ ಉತ್ಸವದಲ್ಲಿ ಸಾವಿರಾರು ಜನ ಸೇರಿದ್ದು, ಅನುಶ್ರೀ ಮತ್ತು ಅರ್ಜುನ್ ಜನ್ಯ ಸೇರಿದಂತೆ ಹಲವು ಕಲಾವಿದರು ಭಾಗಿಯಾದ್ದರು.












Click it and Unblock the Notifications