ರೇವತಿ ನಕ್ಷತ್ರ ಮೀನ ರಾಶಿಯಲ್ಲಿ ಜ್ಯೋತಿಷ್ಯ ಉಪನ್ಯಾಸ
ಬಳ್ಳಾರಿ, ಡಿಸೆಂಬರ್ 12 : ಮನ್ಮಥನಾಮ ಸಂವತ್ಸರ, ಮಾರ್ಗಶಿರ ಮಾಸ, ಡಿಸೆಂಬರ್ 20 ಶುದ್ಧ ದಶಮಿಯ ಭಾನುವಾರದಂದು, ರೇವತಿ ನಕ್ಷತ್ರ ಮೀನ ರಾಶಿಯಲ್ಲಿ ಸಂಜೆ 4 ಗಂಟೆಗೆ ಪ್ರಪ್ರಥಮ ಜ್ಯೋತಿಷ್ಯ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜ್ಯೋತಿಷ್ಯ ಕಾರ್ಯಕ್ರಮಗಳು ಜನರಲ್ಲಿ ಮೌಢ್ಯ ಬಿತ್ತುತ್ತಿದ್ದು, ದೂರದರ್ಶನದ ವಿವಿಧ ಚಾನಲ್ಲುಗಳಲ್ಲಿ ಪ್ರತಿದಿನ ಪ್ರಸಾರವಾಗುವ ಜ್ಯೋತಿಷ್ಯ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರಬೇಕೆಂಬ ಚರ್ಚೆ ಆರಂಭವಾಗಿರುವುದರಿಂದ, ಜನರಲ್ಲಿ ಜ್ಯೋತಿಷ್ಯದ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಹಮ್ಮಿಕೊಳ್ಳಲಾಗುತ್ತಿದೆ.
ಬಳ್ಳಾರಿಯ ಶ್ರೀ ಅನುರಾಧ ಆಸ್ಟ್ರೋ ರಿಸರ್ಚ್ ಫೌಂಡೇಷನ್ ನಗರದ ರಾಘವ ಕಲಾ ಮಂದಿರದಲ್ಲಿ ಡಿಸೆಂಬರ್ 20ರ ಭಾನುವಾರ ಸಂಜೆ 4 ಗಂಟೆಗೆ ಏರ್ಪಡಿಸಲಾಗಿರುವ ಉಪನ್ಯಾಸವನ್ನು ನಿವೃತ್ತ ನ್ಯಾಯಾಧೀಶ ಕೆ. ಶ್ರೀಧರರಾವ್ ಮತ್ತು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಅವರು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. [ಕಣ್ಣು ಕಾಣದ ಅಜ್ಜಿ ಹೇಳಿದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ]
ಜ್ಯೋತಿಷ್ಯರತ್ನ, ದೈವಜ್ಞರತ್ನ ಡಾ. ರಾಧಾಕೃಷ್ಣಸ್ವಾಮಿ ಮತ್ತು ವಿಮ್ಸ್ ನ ಪ್ರಾಂಶುಪಾಲ ಡಾ. ವಿದ್ಯಾಧರ ಕಿನ್ಹಾಳ್ ಅವರು ಮುಖ್ಯ ಅತಿಥಿಗಳಾಗಿದ್ದು, ಸಂಸ್ಥೆಯ ಡಾ. ವೆಂಕಟರಮಣ ಪದ್ಮನಾಭಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರಿನ ಡಾ. ಪ್ರಭಾಕರ ಕಶ್ಯಪ್ ಅವರು 'ಜ್ಯೋತಿಷ್ಯ ಮೂಢನಂಬಿಕೆ ಅಲ್ಲ, ವಿಜ್ಞಾನ' ವಿಷಯ ಕುರಿತು, ಹೈದರಾಬಾದ್‌ನ ಡಾ. ಎನ್.ವಿ.ಆರ್.ಎ. ರಾಜ ಅವರು 'ಜ್ಯೋತಿಷ್ಯದ ಮಹತ್ವ ಮತ್ತು ಉಪಯೋಗ' ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. [ಜ್ಯೋತಿಷ್ಯ ಕಾರ್ಯಕ್ರಮ ನಿರ್ಬಂಧ : ಜಯಚಂದ್ರ ಹೇಳುವುದೇನು?]
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9449136586, 9449842321, 8197033585, 9886759470, 9886522158, 9611774708 ಮತ್ತು 9036312666ಗೆ ಸಂಪರ್ಕಿಸಬಹುದು.













Click it and Unblock the Notifications