ಯಡಿಯೂರಪ್ಪ ಇದ್ದಲ್ಲಿಗೆ ಚಪ್ಪಲಿ ತಂದುಕೊಟ್ಟ ಆನಂದ್‌ಸಿಂಗ್

ಹೊಸಪೇಟೆ,ನವೆಂಬರ್ 25: ಮುಖ್ಯಮಂತ್ರಿ ಯಡಿಯೂರಪ್ಪ ಅವರಿದ್ದಲ್ಲಿಗೆ ಬಿಜೆಪಿ ಹೊಸಪೇಟೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಚಪ್ಪಲಿ ತಂದುಕೊಟ್ಟಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಪರ ಪ್ರಚಾರ ಮಾಡಲು ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪ ತೆರಳಿದ್ದರು. ಹಾಗೆಯೇ ಬಂಡಾಯ ಅಭ್ಯರ್ಥಿ ಭರಮಲಿಂಗನಗೌಡ ಅವರ ಮನವೊಲಿಸಲು ತೆರಳಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಹೊರಡುವ ವೇಳೆಗೆ ಆನಂದ್ ಸಿಂಗ್ ಚಪ್ಪಲಿಯನ್ನು ಅವರಿದ್ದಲ್ಲಿಗೆ ತಂದುಕೊಟ್ಟಿದ್ದಾರೆ.

ಬಳಿಕ ಮಾತನಾಡಿದ ಯಡಿಯೂರಪ್ಪ, ಆನಂದ್ ಸಿಂಗ್ ಈಗಾಗಲೇ ಗೆದ್ದಿದ್ದಾರೆ, ಇನ್ನು ಗೆಲುವಿನ ಅಂತರ ಎಷ್ಟು ಎಂದು ನೋಡಬೇಕಷ್ಟೆ ಎಂದು ಹೇಳಿದರು.

Anand Singh Who Brought Slippers To Yediyurappas Place

ಯಾರ್ಯಾರೋ ತಿರುಕನ ಕನಸು ಕಾಣತ್ತಿದ್ದಾರೆ ಅವರ ಬಗ್ಗೆ ನಾನು ಮಾತನಾಡುವುದಿಲ್ಲ, ಕೆಲವು ಜೆಡಿಎಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಒಟ್ಟು 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಹೊರಬೀಳಲಿದೆ.

ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆಯನ್ನು ರಚಿಸಲು ಈಗಾಗಲೇ ದಿನಾಂಕ ಘೋಷಣೆಯಾಗಿದೆ ಎಂದು ಆನಂದ್ ಸಿಂಗ್ ಹೇಳಿದ್ದರು. ಜನವರಿ 11 ರಂದು ಪ್ರತ್ಯೇಕ ವಿಜಯನಗರ ಜಿಲ್ಲೆಯ ನಾಮಕರಣವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+