22 ದಿನಗಳಿಂದ ಹಂಪಿಯಲ್ಲಿ ಲಾಕ್ ಆದ ನಟಿ ಜಯಂತಿ
ಬಳ್ಳಾರಿ, ಏಪ್ರಿಲ್ 14: ಕನ್ನಡದ ಖ್ಯಾತ ನಟಿ ಜಯಂತಿ ಹಾಗೂ ಅವರ ಕುಟುಂಬ ಹಂಪಿಯಲ್ಲಿ ಕಳೆದ ೨೨ ದಿನಗಳಿಂದ ಸಿಲುಕಿಕೊಂಡಿದೆ. ಕಳೆದ ಮಾರ್ಚ್ 22 ರಂದು ವಿಶ್ವ ವಿಖ್ಯಾತ ಹಂಪಿಯನ್ನು ನೋಡಲು ನಟಿ ಜಯಂತಿ ಹಾಗು ಅವರು ಕುಟುಂಬ ಬಂದಿತ್ತು.
ಆದರೆ ಕೊರೊನಾ ವೈರಸ್ ಹರಡುವಿಕೆಯ ಭೀತಿ ಹಿನ್ನೆಲೆಯಲ್ಲಿ ಭಾರತವನ್ನು ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಮಾಡಲಾಗಿದೆ. ಹೀಗಾಗಿ ನಟಿ ಜಯಂತಿ ಹಾಗೂ ಅವರ ಕುಟುಂಬ ಬಳ್ಳಾರಿ ಜಿಲ್ಲೆಯ ಹಂಪಿಯ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದೆ.
ಇನ್ನು ಈಗಾಗಲೇ ಹಂಪಿಯ ಖಾಸಗಿ ಹೋಟೆಲ್ ನಲ್ಲಿ ಇರುವ ನಟಿ ಜಯಂತಿ ಅವರು 22 ದಿನಗಳನ್ನು ಹೋಟೆಲ್ ನಲ್ಲಿಯೇ ಕಳೆದಿದ್ದಾರೆ. ಇನ್ನು ಮತ್ತು ಏಪ್ರಿಲ್ 30 ರ ವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿದ ಹಿನ್ನೆಲೆಯಲ್ಲಿ ಮತ್ತೆ 18 ದಿನಗಳ ಕಾಲ ಹೋಟೆಲ್ ನಲ್ಲಿಯೇ ಇರಬೇಕಾದ ಅನಿವಾರ್ಯತೆ ಜಯಂತಿ ಅವರಿಗೆ ಎದುರಾಗಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ನಾಳೆ ಲಾಕ್ ಡೌನ್ ನಿಯಮ ಸಡಿಲಿಕೆ ಆಗಲಿದೆಯಾ ಎಂದು ಜಯಂತಿ ಅವರು ಎದುರು ನೋಡುತ್ತಿದ್ದಾರೆ. ಲಾಕ್ ಡೌನ್ ಮತ್ತಷ್ಟು ಕಠಿಣವಾಗಿ ಜಾರಿಯಾದರೆ ಏಪ್ರಿಲ್ 30 ರ ವರೆಗೂ ಜಯಂತಿ ಅವರು ಹೋಟೆಲ್ ನಲ್ಲಿ ಇರಬೇಕಾದ ಅನಿವಾರ್ಯತೆ ಎರುರಾಗಲಿದೆ.












Click it and Unblock the Notifications