Baindur Elections: ಬಿಜೆಪಿಗೆ ಸವಾಲಾದ ಹಾಲಿ ಶಾಸಕರ ವಿರುದ್ಧದ ಅಪಸ್ವರ: ಬೈಂದೂರಿನ ಅಧಿಕಾರ ಯಾರ ಪಾಲು?
ಉಡುಪಿ, ಮಾರ್ಚ್ 24: ಬೈಂದೂರು ಉಡುಪಿ ಜಿಲ್ಲೆಯ ಒಂದು ನಗರ ಮತ್ತು ತಾಲೂಕು ಕೇಂದ್ರ. ಕರಾವಳಿ, ನಡು ಬಯಲು ಹೊಂದಿರುವ ವಿಧಾನಸಭಾ ಕ್ಷೇತ್ರ. ಹಚ್ಚ ಹಸಿರಿನ ಕಾಡು, ಪ್ರಕೃತಿ ಸೌಂದರ್ಯವನ್ನೇ ಹೊದ್ದಿರುವ ಈ ಕ್ಷೇತ್ರ ನೋಡುಗರ ಕಣ್ಮನ ತಣಿಸುವ ಸುಂದರ ಪ್ರವಾಸಿ ತಾಣ.
ಕೊಲ್ಲೂರು ಮುಕಾಂಬಿಕಾ ದೇವಸ್ಥಾನ, ಯಳಜಿತದ ಗುಲ್ನಡಿ ಫಾಲ್ಸ್, ಶಿರೂರಿನ ಅಬ್ಬಿ ಪಾಲ್ಸ್, ಒತ್ತಿನೆಣೆ, ಕಮಲ ಶಿಲೆ ಹೀಗೆ ಹತ್ತು ಹಲವು ಪ್ರವಾಸೋದ್ಯಮ ಸ್ಥಳಗಳು ಬೈಂದೂರಿನ ಅಂದ ಹೆಚ್ಚಿಸಿದ್ದರೆ, ಮರವಂತೆ ಕಡಲತೀರ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಸುಂದರ ತಾಣ, ಸಮುದ್ರ ಹಾಗೂ ನದಿಯನ್ನು ಇಬ್ಬಾಗಿಸಿದ ರಾಷ್ಟ್ರೀಯ ಹೆದ್ದಾರಿಯ ಸೊಬಗು ನೋಡಲು ದೇಶದ ಮೂಲೆ ಮೂಲೆಯಿಂದ ಜನರು ಆಗಮಿಸುತ್ತಾರೆ.

ಇಲ್ಲಿನ ಜನರು ಜೀವನಕ್ಕಾಗಿ ವ್ಯವಸಾಯ ಹಾಗೂ ಮೀನುಗಾರಿಕೆಯನ್ನು ಅವಲಂಬಿಸಿದ್ದು, ಇತ್ತೀಚಿಗೆ ಗೋಡಂಬಿ ಫ್ಯಾಕ್ಟರಿ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ. ಅಲ್ಲದೇ ಕ್ಷೇತ್ರದಲ್ಲಿ ಕೈಗಾರಿಕೋದ್ಯಮ ಅಭಿವೃದ್ಧಿಯತ್ತ ಸಾಗುತ್ತಿದೆ.
ಬೈಂದೂರು ಉಡುಪಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. 2018ರ ತನಕ ಕುಂದಾಪುರ ತಾಲೂಕಿನಲ್ಲಿದ್ದ ಈ ಕ್ಷೇತ್ರ ಸ್ವತಂತ್ರ ತಾಲೂಕು ಘೋಷಣೆಯಾಗಿ ನಾಲ್ಕು ವರ್ಷಗಳಾಗಿದೆ. ಹೀಗಾಗಿ ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಉಡುಪಿಯ ಏಕೈಕ ವಿಧಾನಸಭಾ ಕ್ಷೇತ್ರವಾಗಿದೆ.

ಬೈಂದೂರು ರಾಜಕೀಯದಲ್ಲಿ ಕೆ. ಗೋಪಾಲ ಪೂಜಾರಿ ಅಧ್ಯಾಯ
1998ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಕೆ. ಗೋಪಾಲ ಪೂಜಾರಿ ಎಜಿಪಿ ಪಕ್ಷದಿಂದ ಕಣಕ್ಕಿಳಿದು ಜಯಗಳಿಸಿದರು. ಬೈದೂರು ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಅಧ್ಯಾಯ ಆರಂಭಿಸಿದ್ದ ಕೆ. ಗೋಪಾಲ ಪೂಜಾರಿ 1999 ಮತ್ತು 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ಹ್ಯಾಟ್ರಿಕ್ ಗೆಲುವಿನಲ್ಲಿದ್ದ ಕೆ. ಗೋಪಾಲ ಪೂಜಾರಿಗೆ 2008 ಬಿಜೆಪಿ ಸೋಲಿನ ರುಚಿ ತೋರಿಸಿತ್ತು. ಬಿಜೆಪಿ ಅಭ್ಯರ್ಥಿ ಕೆ. ಲಕ್ಷ್ಮೀನಾರಾಯಣ ವಿರುದ್ಧ ಕೆ. ಗೋಪಾಲ ಪೂಜಾರಿ ಸೋಲು ಕಂಡರು.
ಸತತ ಐದು ವರ್ಷ ಬಿಜೆಪಿ ಅಧಿಕಾರದಲ್ಲಿದ್ದ ಬೈಂದೂರು 2013ರ ಚುನಾವಣೆಯಲ್ಲಿ ಗೋಪಾಲ ಪೂಜಾರಿ 82,277 ಮತಗಳನ್ನು ಪಡೆದು ಬಿಜೆಪಿಯ ಸುಕುಮಾರ ಶೆಟ್ಟಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು. 30ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದ ಸುಕುಮಾರ ಶೆಟ್ಟಿ ಮುಂದಿನ ಚುನಾವಣೆಗೆ ದಿನ ಒಂದರಿಂದಲೇ ಸಿದ್ಧತೆ ನಡೆದಿದ್ದು, ಕಾಂಗ್ರೆಸ್ ಸೋಲಿಸಲೇ ಬೇಕು ಎನ್ನುವ ಪಟ್ಟಿಗೆ ಬಿದ್ದಿದ್ದರು. ಕೊನೆಗೆ 2018ರ ಚುನಾವಣೆಯಲ್ಲಿ ಸುಕುಮಾರ ಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಅವರನ್ನು ಸೋಲಿಸಿ ತಮ್ಮ ಸೋಲಿನ ಕಹಿಯನ್ನು ಮರೆತರು.

ಹಾಲಿ ಶಾಸಕರ ವಿರುದ್ಧ ಕಾರ್ಯಕರ್ತರ ಅಪಸ್ವರ
ಸದ್ಯ ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿಯವರು ಕ್ಷೇತ್ರಕ್ಕೆ ಸಾಕಷ್ಟು ಅನುಧಾನ ತಂದಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳು ಆಗಿದೆ. ಆದರೆ ಕ್ಷೇತ್ರದಲ್ಲಿ ಹಾಲಿ ಶಾಸಕರನ್ನು ಬದಲಾವಣೆ ಮಾಡಬೇಕು ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿದೆ. ಶಾಸಕರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅವರಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪಗಳು ಜೋರಾಗಿದ್ದು, ಈ ಬಾರಿ ಅಭ್ಯರ್ಥಿಯನ್ನು ಬದಲಿಸಿ ಹೊಸ ಮುಖಕ್ಕೆ ಅವಕಾಶ ಕೊಡುವಂತೆ ಬಹುತೇಕ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೈಂದೂರು ಕ್ಷೇತ್ರದ ಕಾಂಗ್ರೆಸ್-ಬಿಜೆಪಿ ಆಕಾಂಕ್ಷಿಗಳು
ಆರ್‌ಎಸ್‌ಎಸ್ ಮೂಲದಿಂದ ಬಂದಿರುವ ದಕ್ಷಿಣ ಕನ್ನಡ , ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಸಂಘಟನೆಯ ಕೆಲಸ ಮಾಡಿರುವ ಗುರುರಾಜ್ ಗಂಟಿಹೊಳೆ, ಹಾಗೂ 12ಕ್ಕೂ ಅಧಿಕ ಮನೆಗಳನ್ನು ಬಡವರಿಗೆ ನಿರ್ಮಿಸಿಕೊಟ್ಟಿರುವ, ಕೊರೊನಾ ಸಮಯದಲ್ಲಿ ನೂರಾರು ಜನರಿಗೆ ಸಹಾಯವಾಗಿರುವ ಗೋವಿಂದ ಬಾಬು ಪೂಜಾರಿ ಅವರಿಗೆ ಬೈಂದೂರು ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಕೂಡ ಇದೆ. ಇನ್ನು ವಿಎಸ್ ಆಚಾರ್ ಅವರ ಕಾಲದಿಂದ ಬಿಜೆಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬು ಹೆಗ್ಡೆ ತಗ್ಗರ್ಸೆ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇನ್ನು ಉಡುಪಿಯ ಎಲ್ಲಾ ಕ್ಷೇತ್ರಕ್ಕಿಂತ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಉತ್ತಮವಾಗಿದೆ. ಅಲ್ಲದೇ ನಾಲ್ಕು ಬಾರಿ ಶಾಸಕರಾಗಿ ಕಳೆದ ಬಾರಿ ಸೋಲು ಕಂಡಿದ್ದ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಬಗ್ಗೆ ಜನರಿಗೆ ಅನುಕಂಪವಿದ್ದು, ಈ ಬಾರಿ ಟಿಕೆಟ್ ನೀಡಿದರೆ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಜೆಡಿಎಸ್‌ನಿಂದ ಮನ್ಸೂರ್ ಇಬ್ರಾಹಿಂ ಮರವಂತೆ ಕಣಕ್ಕಿಳಿಯಲಿದ್ದಾರೆ.
ಬೈಂದೂರು ಕ್ಷೇತ್ರದ ಮತದಾರರ ವಿವರ
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,29,550 ಒಟ್ಟು ಮತದಾರರಿದ್ದು, 1,12,126 ಪುರುಷ ಮತದಾರರು, 1,17,421 ಮಹಿಳೆ ಮತದಾರರಿದ್ದಾರೆ.
ಜಾತಿ-ಮತಗಳು
ಬಿಲ್ಲವ-54,000
ಬಂಟ್ಸ್-40,000
ಮೊಗವೀರ-35,000
ಮುಸ್ಲಿಂ -20,000
ರಾಮಕ್ಷತ್ರಿಯ-16,000
ದೇವಾಡಿಗ-18,000
ಗಾಣಿಗ-13 000
ಪರಿಶಿಷ್ಟ ಜಾತಿ-14,000
ಬ್ರಾಹ್ಮಣ-10,000
Baindur Karnataka Elections
| 2018 | ಬಿ ಸುಕುಮಾರ್ ಶೆಟ್ಟಿ ಬಿಜೆಪಿ | 96,029 | ಕೆ ಗೋಪಾಲ ಪೂಜಾರಿ ಕಾಂಗ್ರೆಸ್ | 71,636 |
| 2013 | ಕೆ ಗೋಪಾಲ ಪೂಜಾರಿ ಕಾಂಗ್ರೆಸ್ | 82,277 | ಬಿ ಎಂ ಸುಕುಮಾರ್ ಶೆಟ್ಟಿ ಬಿಜೆಪಿ | 51,128 |
| 2008 | ಕೆ ಲಕ್ಷ್ಮಿನಾರಾಯಣ ಬಿಜೆಪಿ | 62,196 | ಕೆ ಗೋಪಾಲ ಪೂಜಾರಿ ಕಾಂಗ್ರೆಸ್ | 54,226 |
2018 ಬೈಂದೂರು ವಿಧಾನಸಭಾ ಚುನಾವಣಾ ಫಲಿತಾಂಶ
2018 ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸುಕುಮಾರ್ ಶೆಟ್ಟಿ ಕಣಕ್ಕಳಿದಿದ್ದು, 96,029 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನಿಂದ ಗೋಪಾಲ ಪೂಜಾರಿ 71,636 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ತೆಕ್ಕೆಯಲ್ಲಿರುವ ಬೈಂದೂರು ಕ್ಷೇತ್ರದಲ್ಲಿ ಕಮಲ ಅರಳಿಸುವ ಸಂದರ್ಭದಲ್ಲಿ 24,393 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications