Bailhongal Elections : ಬಿಜೆಪಿ ನಾಯಕರು ಸಂಘರ್ಷ ಬಿಟ್ಟರೆ ಸಿಗಲಿದೆ ವಿಜಯ
ಬೆಂಗಳೂರು, ಮಾರ್ಚ್ 25: ಕರ್ನಾಟಕ ರಾಜ್ಯದ ದೊಡ್ಡ ಜಿಲ್ಲೆಯ ಬೆಳಗಾವಿ ವ್ಯಾಪ್ತಿಯ ಬೈಲಹೊಂಗಲ ತಾಲ್ಲೂಕು ಕೇಂದ್ರವು ಆಗಿದೆ. ಒಟ್ಟು 126 ಕಂದಾಯ ಗ್ರಾಮಗಳು ಹೊಂದಿರುವ ಬೈಲಹೊಂಗಲದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿದೆ.
ಈ ತಾಲ್ಲೂಕು ಹಲವು ಯಾತ್ರ ಸ್ಥಳಗಳನ್ನು ಹೊಂದಿದೆ. ಸೋಗಲ್ ಸೋಮೇಶ್ವರ ದೇವಸ್ಥಾನ, ಬೃಹತ್ ಮಸೀದಿಗಳು ಇವೆ. ಮುಖ್ಯವಾಗಿ ಸ್ವಾತಂತ್ರಯಕ್ಕಾಗಿ ದೇಶದ ಪರ ಬ್ರಿಟಿಷರ ವಿರುದ್ಧ ಹೋರಾಡಿತ ಕಿತ್ತೂರು ರಾಣಿ ಚನ್ನಮ್ಮ, ಅವರ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಹೋರಾಟಗಾರರು ಬದುಕಿದ್ದ ಐತಿಹಾಸಿಕ ನೆಲವು ಇದಾಗಿದೆ.

ಇಲ್ಲಿನ ಬಹುತೇಕ ಕೃಷಿ, ಸಣ್ಣ ಪುಟ್ಟ ಉದ್ಯಮಗಳನ್ನು ಹೊಂದಿದ್ದಾರೆ. ಹೆಚ್ಚಿನ ಕೃಷಿ ಭೂಮಿಯ ನೀರಾವರಿಗೆ ಮಲಪ್ರಭಾ ನದಿಯೇ ಆಸರೆ. ಕಿತ್ತೂರು, ಸವದತ್ತಿ, ಬೈಲಹೊಂಗಲ ಮತ್ತು ರಾಮದುರ್ಗ ತಾಲೂಕುಗಳನ್ನು ಒಳಗೊಂಡಂತೆ ದೊಡ್ಡ ಬೆಳಗಾವಿ ಜಿಲ್ಲೆಯ ಆಡಳಿತವನ್ನು ಸುಲಭಗೊಳಿಸಲು ಬೈಲಹೊಂಗಲವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಬೇಕೆಂಬ ಪ್ರಸ್ತಾವನೆಯು ಇದ್ದು, ಈ ಬಗ್ಗೆ ಯಾವ ನಿರ್ಣಯವು ಹೊರ ಬಂದಿಲ್ಲ.
ಕಾಂಗ್ರೆಸ್‌ನ ಹಾಲಿ ಶಾಸಕ ಮಹಾಂತೇಶ್ ಕೌಜಲಗಿ 47 ಸಾವಿರ ಮಗಳಿಂದ ಪಕ್ಷೇತರ ಅಭ್ಯರ್ಥಿ ವಿರುದ್ಧ ಗೆದ್ದರು. ಈ ಮೊದಲು ಬಿಜೆಪಿಯಲ್ಲಿ ಪಕ್ಷೇತರ ಅಭ್ಯರ್ಥಿ ಜಗದೀಶ್ ಮೆಟಗುಡ್ಡ ಅವರು 41ಸಾವಿರ ಮತ ಪಡೆದು ಸೋತರು. ಈ ಹಿಂದಿನ ಅಂಕಿಅಂಶಗಳನ್ನು ಗಮನಿಸಿದರೆ ಕಾಂಗ್ರೆಸ್ ಅನೇಕ ವಿಧಾನಸಭಾ ಚುನಾವಣೆಗಳ ಬಳಿಕ ಬೈಲಹೊಂಗಲದಲ್ಲಿ ವಿಜಯ ಸಾಧಿಸಿದೆ.

ಕಾಂಗ್ರೆಸ್ 1983 ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಗೆದ್ದಿತ್ತು. ಅಂದು ಬಾಳೆಕುಂದರಗಿ ರಾಮಲಿಂಗಪ್ಪ ಚನ್ನಬಸಪ್ಪ ಅವರು ಚುನಾಯಿತರಾಗಿದ್ದರು. ಆದಾದ ಬಳಿಕ ಒಮ್ಮೆಯು ಕೈ ಮುಖಂಡರು ಇಲ್ಲಿ ಸಫಲರಾಗಿರಲಿಲ್ಲ.
ಬಿಜೆಪಿ ಒಳಜಗಳ ಕಾಂಗ್ರೆಸ್‌ಗೆ ಲಾಭ
ಈ ಹಿಂದೆ ಬಿಜೆಪಿ ಭದ್ರಕೋಟೆಯಾಗಿದ್ದ ಬೈಲಹೊಂಗವು ಕಮಲ ನಾಯಕರ ಇಬ್ಬರ ತಿಕ್ಕಾಟದ ಲಾಭ ಕಾಂಗ್ರೆಸ್ ಪಡೆದು 2018ರಲ್ಲಿ ಅಧಿಕ್ಕಾರಕ್ಕೆ ಬಂತು. ಈ ಬಾರಿಯೂ ಹಾಗೇ ಆದರೆ ಮತ್ತೆ ಕಾಂಗ್ರೆಸ್ ಗೆಲುವಿನ ನಗೆ ಬೀರುವುದು ಪಕ್ಕಾ ಎನ್ನಲಾಗಿದೆ.
ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ಜಗದೀಶ ಮೆಟ್ಟಗುಡ್ಡ ಮತ್ತು ವಿಶ್ವನಾಥ್ ಪಾಟೀಲ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇತ್ತ ಈ ಬಾರಿಯು ಟಿಕೆಟ್ ಬಯಸಿದ್ದ ಮಹಾಂತೇಶ್ ಕೌಜಲಗಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಟಿಕೆಟ್ ಸಿಗದ ಹಿನ್ನೆಲೆಯ ಮೆಟಗುಡ್ಡ ಅವರು ಬಂಡಾಯ ಸಾರಿದ್ದರು. ಇದು ಕಾಂಗ್ರೆಸ್‌ಗೆ ಗೆಲುವಿನ ಹಾದಿ ಸಲೀಸಾಗಿತ್ತು.

ಗೆಲುವಿಗೆ ಬಿಜೆಪಿ ರಣತಂತ್ರ
ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಜನತಾ ಪಾರ್ಟಿ ಸ್ಥಾಪಿಸಿದ್ದಾಗ 2013ರಲ್ಲಿ ಬೈಲಹೊಂಗಲ ವಶವಾಗಿತ್ತು. 1985ರಿಂದಲೂ ಶಿವಾನಂದ ಕೌಜಲಗಿ ಅವರದ್ದೇ ಆಳ್ವಿಕೆ ಇದೆ. ಪಕ್ಷ ಬದಲಿಸಿದರೂ, ಗೆಲುವು ಮಾತ್ರ ಅಭ್ಯರ್ಥಿಯನ್ನು ಬದಲಿಸಿಲ್ಲ. ಈ ಕೆಲ್ಲ ಕಾರಣದಿಂದ ಬಿಜೆಪಿ ಈ ಸಲ ಗೆಲವಿನ ರಣತಂತ್ರ ಹೆಣೆಯುತ್ತಿದೆ.
ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯವಿದೆ. ಇದನ್ನು ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಪ್ರಧಾನಮಂತ್ರಿಗಳಿಂದ ಬೆಳಗಾವಿ ಭಾಗದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಜನರಿಗೆ ಹಲವು ಆಶ್ವಾಸನೆಗಳನ್ನು ನೀಡಿತ್ತು. ಇವೆಲ್ಲವು ಚುನಾವಣೆ ಫಲಿತಾಂಶಕ್ಕಾಗಿ ಮಾಡುತ್ತಿರುವ ಕಸರತ್ತು ಆಗಿದೆ. ಲಿಂಗಾಯತ ಸಮುದಾಯಗಳು ಇಲ್ಲಿ ನಿರ್ಣಾಯಕ ಎನ್ನಲಾಗಿದೆ.
Bailhongal Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಮಹಾಂತೇಶ್ ಕೌಜಲಗಿ | 74040 | ಜಗದೀಶ ಮೆಟಗುಡ್ಡ | 59,785 |
| 2013 | ಡಾ.ವಿಶ್ವನಾಥ ಪಾಟೀಲ್ | 40709 | ಜಗದೀಶ ಮೆಟಗುಡ್ಡ | 37088 |
| 2008 | ಜಗದೀಶ ಮೆಟಗುಡ್ಡ | 48988 | ಮಹಾಂತೇಶ್ ಕೌಜಲಗಿ | 39748 |
ಬೈಲಹೊಂಗಲ ಮತದಾರರು
ಒಟ್ಟು ಮತದಾರರು- 1,87,599
ಪುರಷರು- 94,351
ಮಹಿಳೆಯರು - 93,248












Click it and Unblock the Notifications