ಹುನಗುಂದದಲ್ಲಿ ನವಜಾತ ಶಿಶುವನ್ನು ಕಿತ್ತು ತಿಂದ ಬೀದಿ ನಾಯಿಗಳು
ಬಾಗಲಕೋಟೆ, ನವೆಂಬರ್ 27: ಬೀದಿಯಲ್ಲಿ ಎಸೆದ ನವಜಾತ ಶಿಶುವನ್ನು ಬೀದಿ ನಾಯಿಗಳು ಕಿತ್ತು ತಿಂದ ಘಟನೆ ತಾಲೂಕಿನ ಹುನಗುಂದ ಗ್ರಾಮದಲ್ಲಿ ನಡೆದಿದೆ.
ನಾಲ್ಕು ದಿನದ ಹಿಂದೆ ಜನಿಸಿದ್ದ ಈ ಶಿಶುವನ್ನು ಅಪರಿಚಿತರು ಹುನಗುಂದ ಗ್ರಾಮದಲ್ಲಿ ಎಸೆದು ಹೋಗಿದ್ದರು. ಇದನ್ನು ಯಾರೂ ಗಮನಿಸಿರಲಿಲ್ಲ. ಆದರೆ ಇದೇ ಹೊತ್ತಿಗೆ ನಾಯಿಯೊಂದು ಶಿಶುವಿನ ಮೇಲೆ ದಾಳಿ ನಡೆಸಿ ಶಿಶುವಿನ ಕೈ ಕಾಲು ದೇಹವನ್ನು ಚೆಲ್ಲಾಪಿಲ್ಲಿಯಾಗಿ ಮಾಡಿದೆ.
ಇದು ಇಂದು ಮಂಗಳವಾರ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

ಕಳೆದ ಎರಡು ವಾರಗಳ ಹಿಂದಷ್ಟೇ ನವಜಾತ ಹೆಣ್ಣು ಮಗುವೊಂದು ತುರುವೇಕೆರೆ ತಾಲೂಕಿನ ದೊಡ್ಡಮಲ್ಲಿಗೆರೆ ಪಾಳ್ಯದ ಹೊರವಲಯದ ಮುಳ್ಳಿನ ಪೊದೆಯಲ್ಲಿ ಪತ್ತೆಯಾಗಿತ್ತು.
ದೊಡ್ಡಮಲ್ಲಿಗೆರೆ ಪಾಳ್ಯದ ಶಿವಶಂಕರಯ್ಯ ಎಂಬುವರು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಪಕ್ಕದ ಪೊದೆಯಿಂದ ಮಗುವೊಂದು ಅಳುವ ಶಬ್ದ ಕೇಳಿಸಿದೆ. ಶಬ್ದ ಬಂದ ದಿಕ್ಕಿನತ್ತ ತೆರಳಿದಾಗ ಪೊದೆಯಲ್ಲಿ ಚೀಲವೊಂದರಲ್ಲಿ ಮಗುವಿನ ಆಕ್ರಂದನ ಜೋರಾಗಿ ಕೇಳಿಸಿದೆ.
ಚೀಲ ತೆಗೆದಾಗ ನವಜಾತ ಹೆಣ್ಣು ಶಿಶು ಇರುವುದು ಗೊತ್ತಾಗಿದೆ. ಮಕ್ಕಳೆ ಇಲ್ಲದೆ ಶಿವಶಂಕರಯ್ಯ ದಂಪತಿ ಸಮೀಪದ ಮಾಯಸಂದ್ರ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶುವಿಗೆ ಆರೈಕೆ ಮಾಡಿಸಿದ್ದರು.












Click it and Unblock the Notifications