ರಾಮನವಮಿ ತಡೆ ನೀಡುವ ಗೂಂಡಾ ಸರ್ಕಾರ ರಾಜ್ಯದಲ್ಲಿದೆ : ಮುತಾಲಿಕ್
ಬಾಗಲಕೋಟೆ, ಮಾರ್ಚ್ 25: 'ರಾಜ್ಯದಲ್ಲಿ ಹನುಮ ಜಯಂತಿ, ಶ್ರೀರಾಮನವಮಿ ಜಯಂತಿ ಸೇರಿದಂತೆ ದೇಶಭಕ್ತಿ ಕಾರ್ಯಕ್ರಮ ಆಚರಿಸುವುದನ್ನು ತಡೆಯುತ್ತಿದ್ದೀರಿ' ಇದೇನು ಹಿಟ್ಲರ್ ಶಾಹಿ ಆಡಳಿತಾನಾ, ಗೂಂಡಾಗಿರಿ ಆಡಳಿತನಾ ಎಂದು ಶ್ರೀರಾಮಸೇನಾ ಮುಖಂಡ ಪ್ರಮೋದ ಮುತಾಲಿಕ್ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ನಗರದ ವಿದ್ಯಾಗಿರಿಯ 17ನೇ ಕ್ರಾಸ್ ದಲ್ಲಿ ಇಂದು ಡೆಮಾಕ್ರಾಟಿಕ್ ಯೂಥ್ ವಿದ್ಯಾರ್ಥಿ ಘಟಕದಿಂದ ಬಲಿದಾನ ದಿವಸ ಎಂಬ ದೇಶಭಕ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಅಲ್ಲಿ ಆಮಂತ್ರಣ ಬಂದ ಹಿನ್ನಲೆಯಲ್ಲಿ ಭಾಗವಹಿಸಲು ಹೋದರೆ, ಪೊಲೀಸ್ ನವರು ಇಲ್ಲಿಗೆ ಮುತಾಲಿಕ್ ಅವರನ್ನು ಕರೆತರಬೇಡಿ ಎಂದು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿರುವುದನ್ನ ನೋಡಿದರೆ ಇದು ರಾಜ್ಯದಲ್ಲಿ ಗೂಂಡಾಗಿರಿ ಆಡಳಿತ ನಡೆಸಿದಂತಾಗುತ್ತದೆ ಇದು ಖಂಡನೀಯ ಎಂದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವಿದ್ಯಾಗಿರಿಯಲ್ಲಿ ಮಸೀದಿ, ಚರ್ಚ್ ಇಲ್ಲ ಅಲ್ಲಿ ವಿವಾದಾತ್ಮಕ ಭಾಷಣ ಮಾಡಲ್ಲ ಆದರೂ ಪೊಲೀಸ್ ಇಲಾಖೆ ವಿಚಿತ್ರವಾಗಿ ವರ್ತನೆ ಮಾಡುತ್ತಿದೆ. ಕಾರ್ಯಕ್ರಮ ದಲ್ಲಿ ಭಾಗವಹಿಸುವೆ ನನ್ನನ್ನು ತಡೆಯಲಿ ತಾಕತ್ ಇದ್ದರೆ ಎಂದರು.
ಇದೇ ರೀತಿ ಮುಂದುವರೆದರೆ ರಾಜ್ಯ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಿರುಗುಬಾಣವಾಗಲಿದೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತೇರದಾಳ ಮತ್ತು ಶೃಂಗೇರಿಯಿಂದ ಸ್ಪರ್ಧೆ ಮಾಡಲು ಒತ್ತಡವಿದೆ. ಈ ಬಗ್ಗೆ ಮಾರ್ಚ್ 26ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.












Click it and Unblock the Notifications