ಉಗ್ರರ ವಿರುದ್ದ ಸಹಿಸಂಗ್ರಹ ಬೋರ್ಡಿನಲ್ಲಿ ವಿಕೃತಿ ಮೆರೆದ 'ಅಲ್ತಾಫ್'

ಬಾಗಲಕೋಟೆ, ಫೆ 16: ಪುಲ್ವಾಮಾ ಘಟನೆಯನ್ನು ವಿರೋಧಿಸಿ ದೇಶದೆಲ್ಲಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಬಾಗಲಕೋಟೆಯಲ್ಲಿ ಕಿಡಿಗೇಡಿಯೊಬ್ಬ ವಿಕೃತಿ ಮೆರೆದಿದ್ದಾನೆ.

ನಗರದ ವಲ್ಲಭಭಾಯಿ ವೃತ್ತದಲ್ಲಿ ಉಗ್ರರ ವಿರುದ್ದ ಸಹಿಸಂಗ್ರಹಿಸಲು ದೊಡ್ಡ ನಾಮಫಲಕವನ್ನು ಹಾಕಲಾಗಿತ್ತು. ನೂರಾರು ಜನರು ಸಣ್ಣದಾಗಿ ಸಹಿಹಾಕುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಆದರೆ, ಕಿಡಿಗೇಡಿಯೊಬ್ಬ 'ಅಲ್ತಾಫ್'ಎಂದು ದೊಡ್ಡದಾಗಿ ದಪ್ಪಕ್ಷರದಲ್ಲಿ ಬರೆದಿದ್ದಾನೆ.

ಇದು ಸ್ಥಳೀಯರ ಮತ್ತು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ. ಭಾರತೀಯ ಸೇನಾಪಡೆಯನ್ನು ಅವಮಾನಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿವೆ.

Pulwama attack: Miscreant written his name in big in name board at Bagalkot

ಸ್ಥಳಕ್ಕೆ ಆಗಮಿಸಿದ ಪೊಲೀಸರು, ನಾಮಫಲಕವನ್ನು ಪರಿಶೀಲಿಸಿದ್ದಾರೆ. ಹಿಂದೂ ಸಂಘಟನೆಗಳಿಂದ ಅಹವಾಲು ಸ್ವೀಕರಿಸಿದ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಶುಕ್ರವಾರ (ಫೆ 15) ಸಂಜೆ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸುವ ಮತ್ತು ಸಹಿಸಂಗ್ರಹ ಕಾರ್ಯಕ್ರಮವನ್ನು ಸ್ಥಳೀಯ ಸಂಘಟನೆಯೊಂದು ಆಯೋಜಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+