ಬಾಗಲಕೋಟೆಯಲ್ಲಿ ಮೋದಿ : ಕರ್ನಾಟಕದಲ್ಲಿ ಒಂದು ನಾಟಕ ನಡೆಯುತ್ತಿದೆ

ಬಾಗಲಕೋಟೆ, ಏಪ್ರಿಲ್ 18 : 'ದೆಹಲಿಯಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಿ ಇದ್ದರು. ಈಗ ಕರ್ನಾಟಕದಲ್ಲಿ ಅಂತಹ ಮುಖ್ಯಮಂತ್ರಿ ಇದ್ದಾರೆ. ಕರ್ನಾಟಕದಲ್ಲಿ ಒಂದು ನಾಟಕ ನಡೆಯುತ್ತಿದೆ. ಅದರಲ್ಲಿ ಭಾವನೆ ಇದೆ, ದ್ವೇಷವಿದೆ. ಮುಖ್ಯಮಂತ್ರಿಗಳು ಭಾವನೆ ಹೆಚ್ಚಾಗಿ ಅಳುತ್ತಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.

ಬಾಗಲಕೋಟೆಯಲ್ಲಿ ಗುರುವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಿದರು. ಬಾಗಲಕೋಟೆ ಮತ್ತು ವಿಜಯಪುರ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.

Narendra Modi

ಬಾಗಲಕೋಟೆಯಲ್ಲಿ ಏಪ್ರಿಲ್ 23ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ.ಗದ್ದಿಗೌಡರ್ ಕಣದಲ್ಲಿದ್ದಾರೆ. ವಿಜಯಪುರದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅಭ್ಯರ್ಥಿ.

ದಕ್ಷಿಣ ಕರ್ನಾಟಕದಲ್ಲಿ ಇಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಬಾಗಲಕೋಟೆ ಮತ್ತು ಚಿಕ್ಕೋಡಿಯಲ್ಲಿ ಸಮಾವೇಶ ಉದ್ದೇಶಿಸಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣಾ ಪುಟ

Apr 18, 2019, 3:40 pm IST

ನನ್ನ ಜೊತೆಯಲ್ಲಿ ಹೇಳಿ ನಾನು ಚೌಕಿದಾರ್. ನಗರ ನಗರ ಎಲ್ಲವೂ ಚೌಕಿದಾರ್, ಮನೆ ಮನೆಯಲ್ಲಿ ಚೌಕಿದಾರ್, ಊಳುವ ಭುಮಿಯಲ್ಲೂ ಚೌಕಿದಾರ್, ಡಾಕ್ಟರ್ ಇಂಜಿನಿಯರ್ ಕೂಡಾ ಚೌಕಿದಾರ್, ವಿದ್ಯಾರ್ಥಿ ಕೂಡಾ ಚೌಕಿದಾರ್
Apr 18, 2019, 3:38 pm IST

ಕಮಲದ ಮುಂದಿನ ಬಟನ್ ಒತ್ತಿದರೆ ಚೌಕಿದಾರನ ಖಾತೆಗೆ ನಿಮ್ಮ ವೋಟು ಬರುತ್ತದೆ. ಇದರಿಂದ ಕೇಂದ್ರದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ.
Apr 18, 2019, 3:37 pm IST

ಇಳಕಲ್ ಸೀರೆ ತಯಾರು ಮಾಡುವವರಿಗೆ ಪಿಂಚಣಿ ಸಿಗಬೇಕು. ಅದಕ್ಕಾಗಿ ಬಜೆಟ್‌ನಲ್ಲಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ.
Apr 18, 2019, 3:36 pm IST

ಕರ್ನಾಟಕದ ಹಲವಾರು ನೀರಾವರಿ ಯೋಜನೆಗಳ ಮೇಲೆ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಆಲಮಟ್ಟಿ ಡ್ಯಾಂ ಯೋಜನೆಗೆ ನಾವು ಬೆಂಬಲ ನೀಡಿಲು ಸಿದ್ಧರಿದ್ದೇವೆ. ಆದರೆ, ಇಲ್ಲಿನ ಸರ್ಕಾರಕ್ಕೆ ಅದು ಬೇಡವಾಗಿದೆ.
Apr 18, 2019, 3:36 pm IST

ಲೋಕಸಭಾ ಚುನಾವಣೆಯಲ್ಲಿ ನೀವು ನೀಡುವ ಬೆಂಬಲ ಇಲ್ಲಿನ ಸರ್ಕಾರದ ಮೇಲೂ ಉಂಟಾಗಲಿದೆ. ಫಲಾನುಭವಿ ರೈತರ ಲಿಸ್ಟ್‌ ಕಳಿಸಲು ಇಲ್ಲಿನ ಸರ್ಕಾರ ಹಿಂದೇಟು ಹಾಕುತ್ತಿದೆ.
Apr 18, 2019, 3:34 pm IST

ಮೇ 23ರಂದು ಮತ್ತೊಮ್ಮೆ ನಿಮ್ಮ ಬೆಂಬಲದಿಂದ ಮೋದಿ ಸರ್ಕಾರ ಬರುತ್ತದೆ. ನಮ್ಮ ಸಂಕಲ್ಪ ಒಂದೇ ದೇಶವನ್ನು ಭಯೋತ್ಪಾದನೆ ಮತ್ತು ನಕ್ಸಲ್ ಮುಕ್ತವಾಗಿಸುವುದು. ರೈತರ ಆದಾಯವನ್ನು ಹೆಚ್ಚಿಸುವುದು.
Apr 18, 2019, 3:34 pm IST

ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಹೇಳುತ್ತಿದ್ದಾರೆ. ಇಂತಹ ಹೇಳಿಕೆ ನೀಡುವವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ದೇಶಕ್ಕೆ ಇಬ್ಬರು ಪ್ರಧಾನಿಗಳು ಬೇಕೆ?.
Apr 18, 2019, 3:31 pm IST

ನಮ್ಮ ಸೈನಿಕರು ಪಾಕಿಸ್ತಾನ ನಿದ್ದೆ ಮಾಡುತ್ತಿರುವಾಗ ದಾಳಿ ನಡೆಸಿದರು. 5 ಗಂಟೆಗೆ ಎದ್ದು ಪಾಕಿಸ್ತಾನ ಟ್ವೀಟ್ ಮಾಡಿ ದಾಳಿ ನಡೆದಿದೆ ಎಂದು ಹೇಳಿದರು. ಪಾಕಿಸ್ತಾನದಲ್ಲಿ ಜನರು ಸತ್ತರೆ ಇಲ್ಲಿನ ಕೆಲವು ಜನರು ಅಳುತ್ತಾರೆ. ಕೆಲವರಿಗೆ ಬಾಲಕೋಟ್ ಅಥವ ಬಾಗಲಕೋಟ್ ನಡುವಿನ ವ್ಯತ್ಯಾಸ ತಿಳಿದಿಲ್ಲ. ಬಾಗಲಕೋಟೆಯನ್ನೇ ಬಾಲಾಕೋಟ್ ಎಂದರು
Apr 18, 2019, 3:29 pm IST

ಕಾಂಗ್ರೆಸ್ ಮತ್ತು ಜೆಡಿಎಸ್ ವೋಟ್ ಬ್ಯಾಂಕ್ ಬಾಗಲಕೋಟೆಯಲ್ಲಿದೆಯೇ?, ಬಾಲಾಕೋಟ್‌ನಲ್ಲಿದೆಯೇ?. ಅದಕ್ಕೆ ಇಲ್ಲಿನ ಮುಖ್ಯಮಂತ್ರಿ ಬಾಲಾಕೋಟ್ ಏರ್ ಸ್ಟ್ರೈಕ್ ಬಗ್ಗೆ ಮಾತನಾಡುವುದಿಲ್ಲ.
Apr 18, 2019, 3:28 pm IST

ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ನಮ್ಮ ಸಾಧನೆ. ಆದರೆ, ಇದನ್ನು ಕಾಂಗ್ರೆಸ್ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಕಾಂಗ್ರೆಸ್, ಜೆಡಿಎಸ್ ಅಥವ ಮಹಾಘಟಬಂಧನ್ ಅವರು ದೇಶದ ಬಗ್ಗೆ ಆಲೋಚಿಸುವುದಿಲ್ಲ. ತಮ್ಮ ವೋಟ್ ಬ್ಯಾಂಕ್ ಬಗ್ಗೆ ಚಿಂತಿಸುತ್ತಾರೆ.
Apr 18, 2019, 3:27 pm IST

2014ರಲ್ಲಿ ಬಹುಮತದ ಸರ್ಕಾರ ಬಂದಿತು. ನಾವು ಪಾಕಿಸ್ತಾನದ ನೆಲಕ್ಕೆ ಕಾಲಿಟ್ಟು ಭಯೋತ್ಪಾದಕರನ್ನು ಕೊಂದಿದ್ದೇವೆ. ಈಗ ಅವರು ಜಗತ್ತಿನ ಯಾವ ದೇಶಕ್ಕೆ ಹೋದರೂ ಬಚಾವ್ ಬಚಾವ್ ಎಂದು ಹೇಳುತ್ತಿದ್ದಾರೆ.
Apr 18, 2019, 3:22 pm IST

ಆದರೆ ನಮ್ಮ ಸರ್ಕಾರ ಬಡವರಿಗೆ ಉಚಿತವಾಗಿ ಸಿಲಿಂಡರ್ ನೀಡಿತು. ಉಜ್ವಲ್ ಯೋಜನೆಯಡಿ ಬಾಗಲಕೋಟೆ, ವಿಜಯಪುರದಲ್ಲಿ ಸಾವಿರಾರು ಬಡವರಿಗೆ ಅನುಕೂಲವಾಗಿದೆ.
Apr 18, 2019, 3:21 pm IST

ನಿಮ್ಮ ಬೆಂಬಲದಿಂದ ದೆಹಲಿಯಲ್ಲಿ ಚೌಕಿದಾರ್ ಸರ್ಕಾರ ಬಂತು. ಈ ಬಹುಮತದ ಸರ್ಕಾರ, ಪ್ರಾಮಾಣಿಕ ಸರ್ಕಾರ ಹೇಗಿರಬೇಕು ಎಂಬ ಉದಾಹರಣೆ ನಿಮ್ಮ ಮುಂದಿದೆ. 12 ಸಿಲಿಡಂರ್ ಕೊಟ್ಟಿದ್ದು ಸಾಧನೆ ಎಂದು ಕಾಂಗ್ರೆಸ್ ಹೇಳುತ್ತದೆ.
Apr 18, 2019, 3:20 pm IST

ದೆಹಲಿಯಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಿ ಇದ್ದರು. ಈಗ ಕರ್ನಾಟಕದಲ್ಲಿ ಅಂತಹ ಮುಖ್ಯಮಂತ್ರಿ ಇದ್ದಾರೆ. ಎಲ್ಲದರಲ್ಲೂ ಲೂಟಿ ಮಾಡಲು ಕಾಂಗ್ರೆಸ್ ಬಯಸುತ್ತದೆ. ಹೆಲಿಕಾಪ್ಟರ್, ಕಾಮನ್‌ವೆಲ್ತ್‌, ಕಲ್ಲಿದ್ದಲು, 2ಜಿ ಎಲ್ಲದರಲ್ಲೂ ಅವರು ಲೂಟಿ ಮಾಡಿದರು.
Apr 18, 2019, 3:18 pm IST

ಮುಖ್ಯಮಂತ್ರಿ ಅಳುತ್ತಾರೆ. ಈ ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎಂಬುದು ಅವರಿಗೆ ಗೊತ್ತಿಲ್ಲ. ಆದ್ದರಿಂದ, ನಿಮ್ಮ ಹಣದಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ.
Apr 18, 2019, 3:17 pm IST

ಈ ನಾಟಕದಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳು ಹಿಂದೆ ಉಳಿದಿವೆ. ಸಾಲಮನ್ನಾ ಏನಾಯಿತು?. ಕಾಂಗ್ರೆಸ್‌ಗೆ ಇಂತಹ ಸರ್ಕಾರ, ಇಂತಹ ಮುಖ್ಯಮಂತ್ರಿಯೇ ಇಷ್ಟವಾಗುತ್ತಾರೆ. ಇಂತಹ ಪ್ರಧಾನಿಯನ್ನೇ ಅವರು ಬಯಸುತ್ತಿದ್ದಾರೆ.
Apr 18, 2019, 3:16 pm IST

ಕರ್ನಾಟಕದಲ್ಲಿ ಒಂದು ನಾಟಕ ನಡೆಯುತ್ತಿದೆ. ಅದರಲ್ಲಿ ಎಮೋಷನ್ ಇದೆ. ದ್ವೇಷವಿದೆ. ಯಾವುದೇ ಪತ್ರಿಕಾಗೋಷ್ಠಿಯನ್ನು ಕರೆದರೂ ಅದರಲ್ಲಿ ಎಮೋಷನ್ ಹೆಚ್ಚಾಗಿ ಕಣ್ಣೀರು ಬರುತ್ತದೆ. ಇಂತಹ ಸರ್ಕಾರವನ್ನು ನೀವು ಬಯಸಿದ್ದೀರಾ?
Apr 18, 2019, 3:15 pm IST

ಇಂದು ನಾನು ನವ ಭಾರತಕ್ಕಾಗಿ ನಿಮ್ಮ ಬೆಂಬಲ ಕೇಳಲು ಬಂದಿದ್ದಾನೆ. 5 ವರ್ಷಗಳಲ್ಲಿ ಬಹುಮತದ ಸರ್ಕಾರದ ಕೆಲಸ ನೋಡಿದ್ದೀರಿ. ಒಂದು ಸರ್ಕಾರ ಹೇಗಿರಬೇಕು ಎಂದರೆ ದೆಹಲಿಯನ್ನು ನೋಡಿ. ಹೇಗಿರಬಾರದು ಎಂದರೆ ಬೆಂಗಳೂರನ್ನು ನೋಡಿ
Apr 18, 2019, 3:13 pm IST

ಗಡಿಯನ್ನು ದಾಟಿ ಭಯೋತ್ಪಾದಕರಿಗೆ ನಮ್ಮ ಸರ್ಕಾರ ಉತ್ತರ ನೀಡಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ನಿಮ್ಮ ಬೆಂಬಲ.
Apr 18, 2019, 3:13 pm IST

ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಬಡವರಿಗೆ ಹೆಚ್ಚಿನ ಅನುಕೂಲವಾಗಿದೆ. ಬಸವಣ್ಣನವರ ಸಂದೇಶದಂತೆ ಸರ್ಕಾರ ಬಡವರ ಪರವಾಗಿ ಕೆಲಸ ಮಾಡಿದೆ.
Apr 18, 2019, 3:11 pm IST

ಭಾರತ ಐದು ವರ್ಷದಲ್ಲಿ ಏನೇ ಸಾಧನೆ ಮಾಡಿದ್ದರೂ ಅದಕ್ಕೆ ನಿಮ್ಮ ಆರ್ಶೀವಾದ ಕಾರಣ. ನರೇಂದ್ರ ಮೋದಿ ಕೇವಲ ನಿಮ್ಮ ಕೆಲಸವನ್ನು ಮಾಡಿದ್ದಾರೆ.
Apr 18, 2019, 3:10 pm IST

ಇದು ಮಂದಿರ, ಮಸೀದಿಗಳ ಭೂಮಿ. ಇಲ್ಲಿನ ಎಲ್ಲಾ ದೇವರಿಗೆ ನನ್ನ ನಮನಗಳು. ಬಸವಣ್ಣನವರನ್ನು ದೇಶಕ್ಕೆ ನೀಡಿದ ಭೂಮಿ ಇದು. ಬಸವಣ್ಣ ಅನುಭವ ಮಂಟಪದ ಮೂಲಕ ದೇಶಕ್ಕೆ ಹೊಸ ಸಂದೇಶವನ್ನು ನೀಡಿದರು.
Apr 18, 2019, 3:09 pm IST

ವಿಜಯಪುರ ಮತ್ತು ಬಾಗಲಕೋಟೆ ಕ್ಷೇತ್ರಗಳ ಆತ್ಮೀಯ ನಾಗರೀಕ ಬಂಧುಗಳಿಗೆ ನಿಮಗೆಲ್ಲರಿಗೂ ನಿಮ್ಮ ಚೌಕಿದಾರ್ ನರೇಂದ್ರ ಮೋದಿಯ ವಂದನೆಗಳು ಎಂದು ಭಾಷಣ ಆರಂಭಿಸಿದ ಮೋದಿ
Apr 18, 2019, 3:07 pm IST

ಬಿಲ್ಲು, ಬಾಣ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಗಲಕೋಟೆ ಜಿಲ್ಲಾ ಘಟಕದಿಂದ ಸನ್ಮಾನ
Apr 18, 2019, 3:06 pm IST

ಸಮಾವೇಶದ ವೇದಿಕೆಗೆ ಆಗಮಿಸಿದ ಮೋದಿ
Apr 18, 2019, 3:02 pm IST

ಬಾಗಲಕೋಟೆ ಮತ್ತು ಚಿಕ್ಕೋಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ ಸಮಾವೇಶ ಬಾಗಲಕೋಟೆಯಲ್ಲಿ ನಡೆಯುತ್ತಿದೆ.
Apr 18, 2019, 3:01 pm IST

ದಕ್ಷಿಣ ಕರ್ನಾಟಕ ಭಾಗದಲ್ಲಿ ಇಂದು ಮತದಾನ ನಡೆಯುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸುತ್ತಿದ್ದಾರೆ.
Apr 18, 2019, 3:01 pm IST

ಧಾರವಾಡ, ಕಲಬುರಗಿ, ಮೈಸೂರು, ಮಂಗಳೂರು, ಬೆಂಗಳೂರು, ಚಿತ್ರದುರ್ಗದ ಬಳಿಕ ನರೇಂದ್ರ ಮೋದಿ ಅವರು ಬಾಗಲಕೋಟೆಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ.
Apr 18, 2019, 2:59 pm IST

ಪ್ರಧಾನಿ ನರೇಂದ್ರ ಮೋದಿ ಅವರ ವಿಜಯ ಸಂಕಲ್ಪ ಸಮಾವೇಶದ ಮೂಲಕ ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ ಮತ್ತು ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರವಾಗಿ ಪ್ರಚಾರವನ್ನು ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+