ನಾನೇನು ದಿನೇಶ್ ಗುಂಡೂರಾವ್ ನಾಲಿಗೇನಾ, ಅವ್ರನ್ನೇ ಕೇಳಿ ಎಂದ ಸಿದ್ದರಾಮಯ್ಯ
ಬಾದಾಮಿ, ಡಿಸೆಂಬರ್ 19: ನಾನೇನು ದಿನೇಶ್ ಗುಂಡೂರಾವ್ ನಾಲಿಗೇನಾ, ಅವರನ್ನೇ ಕೇಳಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿಯೇ ಉತ್ತರಿಸಿದ್ದಾರೆ.
ಬುಧವಾರ ಬೆಳಗ್ಗೆ ಸಿದ್ದರಾಮಯ್ಯ ಬಾದಾಮಿಗೆ ತೆರಳಿದ್ದರು, ಎಸ್‌ಆರ್ ಪಾಟೀಲ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಸಚಿವ ಸಂಪುಟದಲ್ಲಿ ಹಳಬರನ್ನು ಕೈಬಿಟ್ಟು ಹೊಸಬರನ್ನು ಸೇರ್ಪಡೆ ಮಾಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ ಈ ರೀತಿ ಉತ್ತರ ನೀಡಿದ್ದಾರೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡುವುದಾಗಿ ತಿಳಿಸಿದ್ದರು.

ಇದೇ ವಿಚಾರದ ಬಗ್ಗೆ ಸಿದ್ದರಾಮಯ್ಯ ಅವರ ಬಳಿ ಪ್ರಶ್ನೆ ಕೇಳಿದಾಗ, ನಾನೇನು ದಿನೇಶ್ ಗುಂಡೂರಾವ್ ನಾಲಿಗೇನಾ, ಅವರ ಹತ್ತಿರವೇ ಕೇಳಿಕೊಳ್ಳಿ ಎಂದು ಖಾರವಾಗಿ ನುಡಿದಿದ್ದಾರೆ.
ಡಿಸೆಂಬರ್ 22ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ, ಈ ಕುರಿತು ನಾಯಕರು ಡಿ.20 ರಂದು ದೆಹಲಿಗೆ ತೆರಳಲಿದ್ದಾರೆ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರೆ ಸ್ಪಷ್ಟಪಡಿಸಿದ್ದರು.












Click it and Unblock the Notifications