ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವಾಸ ಮತ ಗೆದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ ಮೇ 25 : ಕಾಂಗ್ರೆಸ್‌-ಜೆಡಿಎಸ್ ಸಮ್ಮಿಶ್ರ ಸರ್ಕಾರ ವಿಧಾನಸಭೆಯಲ್ಲಿ ಇಂದು‌ ಬಹುಮತ‌ ಸಾಬೀತು ಪಡಿಸುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ನಗರ ಕಾಂಗ್ರೆಸ್ ಘಟಕದಿಂದ‌ ವಿಜಯೋತ್ಸವ ಆಚರಿಸಲಾಯಿತು.

ನಗರದ ಬಸವೇಶ್ವರ ವೃತ್ತದಲ್ಲಿ ಇಂದು ಶುಕ್ರವಾರ ಜಮಾಯಿಸಿದ ಕಾರ್ಯಕರ್ತರು ಸಮ್ಮಿಶ್ರ ಸರ್ಕಾರ ವಿಶ್ವಾಸಮತ ತೋರಿಸಿದ ನಂತರ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.

ವಿಶ್ವಾಸ ಮತ ಗೆದ್ದ ಕುಮಾರಸ್ವಾಮಿ, ಸದ್ಯಕ್ಕೆ ಸಿಎಂ ಕುರ್ಚಿ ಭದ್ರವಿಶ್ವಾಸ ಮತ ಗೆದ್ದ ಕುಮಾರಸ್ವಾಮಿ, ಸದ್ಯಕ್ಕೆ ಸಿಎಂ ಕುರ್ಚಿ ಭದ್ರ

ನಾಗರಾಜ ಹದ್ಲಿ, ಹಣಮಂತ ರಾಕುಂಪಿ, ನಾರಾಯಣ ದೇಸಾಯಿ, ಆರ್‌.ಎ.ಪಟ್ಟಣದ, ಗಣಪತ ಸಾಧಾನಿ, ಸಂಜು ವಾಡಕರ, ಚನ್ನವೀರ ಅಂಗಡಿ‌ ಮತ್ತಿತರರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

Congress-JDS won floor test today in Karnataka legislative assembly

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಗೆದ್ದಿದ್ದಾರೆ. ಈ ಮೂಲಕ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಭವಿಷ್ಯ ಸದ್ಯಕ್ಕೆ ನಿರಾತಂಕವಾಗಿದೆ.

Congress-JDS won floor test today in Karnataka legislative assembly

ಸ್ಪೀಕರ್ ರಮೇಶ್ ಕುಮಾರ ವಿಶ್ವಾಸ ಮತ ಪ್ರಸ್ತಾಪವನ್ನು ಮತಕ್ಕೆ ಹಾಕಿದರು. ಈ ಸಂದರ್ಭದಲ್ಲಿ ಪ್ರಸ್ತಾಪದ ಪರ ಇರುವವರು ಹೌದು ಎಂದು ಹೇಳಲು ಕೇಳಿಕೊಂಡರು. ಎಲ್ಲರೂ ಹೌದು ಎಂದರು. ಇಲ್ಲ ಎಂದೂ ಯಾರೂ ಹೇಳದೇ ಇದ್ದ ಕಾರಣ ಪ್ರಸ್ತಾಪವು ಹೌದು ಎನ್ನುವವರ ಪರವಾಗಿದೆ ಎಂದರು. ಮತ್ತು ಪ್ರಸ್ತಾಪ ಅಂಗೀಕರಿಸಲ್ಪಟ್ಟಿದೆ ಎಂದು ಘೋಷಿಸಿದರು.

English summary
karnataka election result 2018: Chief minister HD Kumaraswamy today won floor test in Karnataka legislative assembly. Bagalkot Congress activists celebrated this victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X