ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಮಖಂಡಿಯಲ್ಲಿ ಬೀಡು ಬಿಟ್ಟ ಸಿದ್ದರಾಮಯ್ಯ, ರಂಗೇರಿದ ಉಪಚುನಾವಣೆ ಕಣ

|
Google Oneindia Kannada News

ಜಮಖಂಡಿ, ಅಕ್ಟೋಬರ್ 16: ಉಪಚುನಾವಣೆಯ ಸಮಗ್ರ ಉಸ್ತುವಾರಿ ವಹಿಸಿರುವ ಸಿದ್ದರಾಮಯ್ಯ ಅವರು ಜಮಖಂಡಿ ಕ್ಷೇತ್ರದ ಮೇಲೆ ವಿಶೇಷ ಆಸ್ಥೆ ತೋರುತ್ತಿದ್ದಾರೆ.

ಹೌದು, ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಕ್ಕೆ ಗೆಲ್ಲುವ ಸಮಾನ ಅವಕಾಶ ಇರುವ ಜಮಖಂಡಿ ಕ್ಷೇತ್ರ. ಈ ಉಪಚುನಾವಣೆಯಲ್ಲಿ ಅತಿ ಪ್ರತಿಷ್ಠಿತ ಕ್ಷೇತ್ರವಾಗಿದೆ. ಹಾಗಾಗಿ ಇಲ್ಲಿ ಗೆದ್ದು ತಮ್ಮ ಪಾರಮ್ಯ ಸಾರಬೇಕೆಂದು ಸಿದ್ದರಾಮಯ್ಯ ಅವರು ಜಮಖಂಡಿ ಕ್ಷೇತ್ರಕ್ಕೆ ವಿಶೇಷ ಗಮನ ನೀಡುತ್ತಿದ್ದಾರೆ.

ಮೈಸೂರು ದಸರಾ - ವಿಶೇಷ ಪುರವಣಿ

ಉಪಚುನಾವಣೆ ದಿನಾಂಕ ಪ್ರಕಟವಾದಾಗಿನಿಂದಲೂ ಕ್ಷೇತ್ರದ ಕಾಂಗ್ರೆಸ್ ಮುಖಂಡರೊಂದಿಗೆ ಸತತ ಸಂಪರ್ಕದಲ್ಲಿರುವ ಸಿದ್ದರಾಮಯ್ಯ ಕ್ಷೇತ್ರದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಉಪ ಚುನಾವಣೆ 2018 : ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?ಉಪ ಚುನಾವಣೆ 2018 : ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?

ನಿನ್ನೆ ರಾತ್ರಿ ಜಮಖಂಡಿ ಕ್ಷೇತ್ರಕ್ಕೆ ಬಂದಿಳಿದಿರುವ ಸಿದ್ದರಾಮಯ್ಯ ಅವರು, ಕೈ ಅಭ್ಯರ್ಥಿ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಎದ್ದಿರುವ ಬಂಡಾಯ ಶಮನ ಮಾಡಲು ಯತ್ನಿಸುತ್ತಿದ್ದಾರೆ.

ಸುಶೀಲ್‌ ಕುಮಾರ್‌ ಬಂಡಾಯ

ಸುಶೀಲ್‌ ಕುಮಾರ್‌ ಬಂಡಾಯ

ದಿವಂಗತ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ್‌ ನ್ಯಾಮಗೌಡ ಅವರಿಗೆ ಕೈ ಟಿಕೆಟ್‌ ನೀಡಲಾಗಿದೆ. ಆದರೆ ಇದರಿಂದ ಅಸಮಾಧಾನಗೊಂಡಿರುವ ಸುಶೀಲ್‌ ಕುಮಾರ್ ಬಂಡಾಯವೆದಿದ್ದಾರೆ. ಇದು ಕಾಂಗ್ರೆಸ್‌ಗೆ ತಲೆನೋವಾಗಿದೆ.

ಬಂಡಾಯ ಶಮನ ಮಾಡಲು ಸಿದ್ದು ಎಂಟ್ರಿ

ಬಂಡಾಯ ಶಮನ ಮಾಡಲು ಸಿದ್ದು ಎಂಟ್ರಿ

ಬಂಡಾಯ ಶಮನ ಮಾಡಲು ಸ್ವತಃ ಸಿದ್ದರಾಮಯ್ಯ ಅವರೇ ಜಮಖಂಡಿಗೆ ಆಗಮಿಸಿದ್ದು, ಇಂದು ಸುಶೀಲ್‌ ಕುಮಾರ್‌ ಜೊತೆ ಮಾತನಾಡಲಿದ್ದಾರೆ. ಅಲ್ಲದೆ ಇನ್ನೂ ಕೆಲವು ದಿನ ಕ್ಷೇತ್ರದಲ್ಲೇ ಇದ್ದು ಪ್ರಚಾರ ಕಾರ್ಯದಲ್ಲೂ ಭಾಗವಹಿಸಲಿದ್ದಾರೆ.

ಜಮಖಂಡಿ ಭಿನ್ನಮತ: ಸಿದ್ದರಾಮಯ್ಯ, ಯಡಿಯೂರಪ್ಪ ಇಬ್ಬರಿಗೂ ಸಂಕಟಜಮಖಂಡಿ ಭಿನ್ನಮತ: ಸಿದ್ದರಾಮಯ್ಯ, ಯಡಿಯೂರಪ್ಪ ಇಬ್ಬರಿಗೂ ಸಂಕಟ

ಬಾದಾಮಿಯ ನೆರೆಯ ಕ್ಷೇತ್ರ

ಬಾದಾಮಿಯ ನೆರೆಯ ಕ್ಷೇತ್ರ

ಸಿದ್ದರಾಮಯ್ಯ ಅವರು ಶಾಸಕರಾಗಿರುವ ಬಾದಾಮಿ ಕ್ಷೇತ್ರದ ನೆರೆಯ ಕ್ಷೇತ್ರ ಜಮಖಂಡಿ ಆಗಿದ್ದು ಹಾಗಾಗಿ ಅಲ್ಲಿ ಕಾಂಗ್ರೆಸ್‌ ಅನ್ನು ಗೆಲ್ಲಿಸುವುದು ಸಿದ್ದರಾಮಯ್ಯ ಅವರಿಗೆ ಅವಶ್ಯಕವಾಗಿದೆ. ಈಗಾಗಲೇ ಆನಂದ್‌ ನ್ಯಾಮಗೌಡ ಅವರು ನಾಮಪತ್ರ ಸಲ್ಲಿಸಿದ್ದಾರೆ. ಪ್ರಚಾರ ಕಾರ್ಯದಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

ಬಿಜೆಪಿಯಲ್ಲೂ ಬಂಡಾಯ

ಬಿಜೆಪಿಯಲ್ಲೂ ಬಂಡಾಯ

ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಂತೆ ಬಿಜೆಪಿಗೂ ಬಂಡಾಯದ ಬಿಸಿ ಸೋಕಿದೆ. ಇದೇ ವರ್ಷಾರಂಭದಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ವಿರುದ್ಧ ಸೋತಿದ್ದ ಶ್ರೀಕಾಂತ ಕುಲಕರ್ಣಿ ಅವರಿಗೆ ಮತ್ತೆ ಟಿಕೆಟ್‌ ನೀಡಿದೆ ಬಿಜೆಪಿ. ಇದು ಬಿಜೆಪಿಯ ಇತರ ಮುಖಂಡರಿಗೆ ಅಸಮಾಧಾನ ಮೂಡಿಸಿದೆ. ಸಂಗಮೇಶ್ ನಿರಾಣಿ, ಸಿಂಧೂರ ಅವರುಗಳು ಈಗಾಗಲೇ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಯಡಿಯೂರಪ್ಪ ಅವರು ಬಂಡಾಯ ಸರಿ ಮ

ಜಮಖಂಡಿಯಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಸಿದ್ದರಾಮಯ್ಯ ತಂತ್ರಜಮಖಂಡಿಯಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಸಿದ್ದರಾಮಯ್ಯ ತಂತ್ರ

English summary
Congress leader Siddaramaiah is in Jamakhandi he will be staying there for some more days and will campaign for Congress candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X