ಜಮಖಂಡಿಯಲ್ಲಿ ಕಾಂಗ್ರೆಸ್‌ಗೆ ಜಯಭೇರಿ: ಅಪ್ಪನನ್ನು ಮೀರಿಸಿದ ಮಗ
ಜಮಖಂಡಿ, ನವೆಂಬರ್ 06: ಜಮಖಂಡಿ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ ಅವರು ಭರ್ಜರಿಯಾಗಿ ಜಯಗಳಿಸಿದ್ದಾರೆ. ಆ ಮೂಲಕ ಅವರ ತಂದೆ ಸಿದ್ದು ನ್ಯಾಮಗೌಡ ಅವರನ್ನು ಅವರು ಮೀರಿಸಿದ್ದಾರೆ.
ಹೌದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಿದ್ದು ನ್ಯಾಮಗೌಡ ಅವರು ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಅವರನ್ನು ಕೇವಲ 2795 ಮತಗಳ ಅಂತರದಿಂದ ಸೋಲಿಸಿದ್ದರು. ಆ ನಂತರ ಅವರು ಅಪಘಾತವೊಂದರಲ್ಲಿ ಅಕಾಲಿಕ ಮೃತ್ಯಗೆ ಈಡಾದರು ಹಾಗಾಗಿಯೇ ಈ ಉಪಚುನಾವಣೆ ನಡೆದಿತ್ತು.
ಚುನಾವಣೆಯಲ್ಲಿ ಅಪ್ಪನನ್ನು ಮೀರಿಸಿರುವ ಆನಂದ್ ನ್ಯಾಮಗೌಡ 39,484 ಮತಗಳ ಭಾರಿ ಅಂತರದಿಂದ ಸೋಲಿಣಿಸಿದ್ದಾರೆ. ತಂದೆ ಸಿದ್ದು ನ್ಯಾಮಗೌಡಗೆ ಬಹಳಾ ಪೈಪೋಟಿ ನೀಡಿದ್ದ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಮಗನ ಮುಂದೆ ಸುಲಭವಾಗಿ ಮಂಡಿ ಊರಿದ್ದಾರೆ.

ಕೆಲಸ ಮಾಡಿದ ಅನುಕಂಪದ ಅಲೆ
ಎರಡೂ ಪಕ್ಷಗಳು ಅನುಕಂಪದ ಅಲೆಯನ್ನೇ ಮುಖ್ಯವಾಗಿಸಿಕೊಂಡು ಕಣಕ್ಕೆ ಇಳಿದಿದ್ದವು. ಕಾಂಗ್ರೆಸ್‌ಗೆ ಸಿದ್ದು ನ್ಯಾಮಗೌಡ ಅವರ ಅಕಾಲಿಕ ಸಾವಾದರೆ. ಕುಲಕರ್ಣಿ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಅನುಕಂಪ. ಆದರೆ ಕೊನೆಗೆ ಆನಂದ್ ನ್ಯಾಮಗೌಡ ಅವರ ಕಡೆಗೆ ಕ್ಷೇತ್ರದ ಮತದಾರರು ಕರುಣೆ ತೋರಿದ್ದಾರೆ. ಯುವ ನಾಯಕನ ಕಾರ್ಡ್ ಕೂಡ ಇಲ್ಲಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ.

ಕೊನೆ ಚುನಾವಣೆ ಎಂದಿದ್ದ ಕುಲಕರ್ಣಿ
ಆನಂದ್ ನ್ಯಾಮಗೌಡ ಅನುಕಂಪದ ಕಾರ್ಡ್ ಮುಂದೆ ಮಾಡುತ್ತಾರೆಂದು ತಿಳಿದಿದ್ದ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಅವರು ತಾವು ಸಹ ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿಕೊಂಡಿದ್ದರು. ಆದರೆ ಚುನಾವಣೆಯಲ್ಲಿ ಸೋಲು ಅನುಭವಿಸುವ ಮೂಲಕ ಅವರ ರಾಜಕೀಯ ಜೀವನ ಬಹುತೇಕ ಅಂತ್ಯವಾಗಿದೆ.

ಅವಕಾಶ ಕೈಚೆಲ್ಲಿಕೊಂಡ ಬಿಜೆಪಿ
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಎದುರು ಬಿಜೆಪಿಯ ಬಂಡಾಯ ಅಭ್ಯರ್ಥಿ ಸಂಗಮೇಶ ನಿರಾಣಿ ಸ್ಪರ್ಧಿಸಿದ್ದರು. 24,461 ಮತಗಳನ್ನು ಪಡೆದಿದ್ದ ಅವರು ಬಿಜೆಪಿ ಗೆಲುವಿಗೆ ಅಡ್ಡಗಾಲು ಹಾಕಿದ್ದರು. ಆದರೆ ಈ ಬಾರಿ ಯಡಿಯೂರಪ್ಪ ಅವರು ಸಂಧಾನದ ಮೂಲಕ ಸಂಗಮೇಶ ನಿರಾಣಿ ಅವರು ಬಿಜೆಪಿಗೆ ಕೆಲಸ ಮಾಡುವಂತೆ ಮಾಡಿದ್ದರೂ ಆದರೂ ಸಹ ಬಿಜೆಪಿ ಇಲ್ಲಿ ಸೋಲನ್ನಪ್ಪಿರುವುದು ಸೋಜಿಗ.

ಆನಂದ್‌ಗೆ ಸಿದ್ದರಾಮಯ್ಯ-ಪರಮೇಶ್ವರ್ ಬಲ
ಆನಂದ್ ನ್ಯಾಮಗೌಡಗೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರ ಬಲ ಬಹುವಾಗಿ ಇತ್ತು. ಡಿಸಿಎಂ ಪರಮೇಶ್ವರ್ ಅವರು ಕ್ಷೇತ್ರದ ಉಸ್ತುವಾರಿ ವಹಿಸಿದ್ದರೆ ಸಿದ್ದರಾಮಯ್ಯ ಅವರು ಸ್ಟಾರ್ ಪ್ರಚಾರಕರಾಗಿದ್ದರು. ಸಿದ್ದರಾಮಯ್ಯ ಅವರು ಶಾಸಕರಾಗಿರುವ ಬಾದಾಮಿ ಕ್ಷೇತ್ರದ ನೆರೆಯ ಕ್ಷೇತ್ರ ಜಮಖಂಡಿ ಆಗಿದ್ದ ಕಾರಣ ಸಿದ್ದರಾಮಯ್ಯ ಅವರು ಜಮಖಂಡಿ ಮೇಲೆ ಹೆಚ್ಚಿನ ಆಸ್ಥೆ ತೋರಿ ಪ್ರಚಾರ ಮಾಡಿದ್ದರು. ಅವರ ಶ್ರಮ ವ್ಯರ್ಥವಾಗಿಲ್ಲ.

ಯಾರಿಗೆ ಎಷ್ಟು ಮತ?
ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ ಅವರು ಒಟ್ಟು 97,017 ಮತಗಳನ್ನು ಪಡೆದಿದ್ದರೆ ಶ್ರೀಕಾಂತ್ ಕುಲಕರ್ಣಿ ಅವರು 57,537 ಮತಗಳನ್ನು ಗಳಿಸಿಕೊಂಡಿದ್ದಾರೆ. ಆನಂದ್ ನ್ಯಾಮಗೌಡ ಅವರು ಒಟ್ಟು 39,484 ಮತಗಳ ಅಂತರದಿಂದ ಗೆದ್ದಿದ್ದಾರೆ. ಮೊದಲ ಬಾರಿಗೆ ಚುನಾವಣೆಗೆ ನಿಂತಿದ್ದ ಆನಂದ್ ಜಾಕ್‌ಪಾಟ್ ಹೊಡೆದಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications