Bagalkot Election: ಸತತ 5ನೇ ಬಾರಿಗೆ ಗೆಲುವು ಸಾಧಿಸಿದ ಬಿಜೆಪಿ: ಗಜಕೇಸರಿ ಯೋಗಕ್ಕೆ ಸೋಲು
ಬಾಗಲಕೋಟೆ, ಜೂನ್ 04: ಬಾಗಲಕೋಟೆ ಲೋಕಸಭಾ ಚುಣಾವಣೆಯಲ್ಲಿ 2024 ಫಲಿತಾಂಶ ಬಹುತೇಕ ಅಂತಿಮವಾಗಿದ್ದು, ಬಿಜೆಪಿಗೆ ಇಲ್ಲಿ ಭರ್ಜರಿ ಗೆಲುವಾಗಿದೆ. ತಮಗೆ ಗಜಕೇಸರಿ ಯೋಗ ಇದೆ, ನಾನು ಪ್ರಧಾನಿ ಆದರೂ ಆಗಬಹುದು ಎಂದಿದ್ದ ಕಾಂಗ್ರೆಸ್‌ನ ಗಜಕೇಸರಿ ಯೋಗ ಇರುವ ಅಭ್ಯರ್ಥಿಗೆ ಸೋಲಾಗಿದೆ.
2004ರಿಂದಲೂ ಗದ್ದಿಗೌಡರ ಕುಟುಂ ಬಾಗಲಕೋಟೆಯಲ್ಲಿ ಸತತವಾಗಿ ಹ್ಯಾಟ್ರಿಕ್ ಬಾರಿಸಿಕೊಂಡು ಬಂದಿದೆ. ಈ ಬಾರಿಯು ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಅವರು ತಮ್ಮ ವಿಕ್ಟರಿಯನ್ನು ಮುಂದುವರಿಸಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಹಿಡಿತ ತಪ್ಪಿಲ್ಲ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಎಸ್ ಪಾಟೀಲ್ ಅವರಿಗೆ 4.95 ಲಕ್ಷ ಮತಗಳು ಬಂದಿವೆ. ಇವರ ವಿರುದ್ಧ ಗೆಲುವಿನ ನಗೆ ಬೀರಿರುವ ಪಿಸಿ ಗದ್ದಿಗೌಡರ್ ಅವರಿಗೆ 5.61 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ.

ಬಿಜೆಪಿ ಹಾಲಿ ಸಂಸದ ಪಿಸಿ ಗದ್ದಿಗೌಡರ್ ಅವರು ಬಾಗಲಕೋಟೆಯಲ್ಲಿ 2004ರಿಂದಲೂ ಸತತವಾಗಿ ಗೆಲವು ಸಾಧಿಸಿಕೊಂಡು ಬಂದಿದ್ದಾರೆ. ಅವರು ಬಾಗಲಕೋಟೆಯಲ್ಲಿ ಬಿಜೆಪಿ ಹಿಡಿತ ಸಾಧಿಸುವಲ್ಲಿ ಪ್ರಮುಖ ಕಾರಣಿಕತೃರಾಗಿದ್ದಾರೆ.
ಗಜಕೇಸರಿಗೆ ಯೋಗದ ಅಭ್ಯರ್ಥಿಗೆ ಸೋಲು
ಸಂಯುಕ್ತ ಪಾಟೀಲ್ ಅವರಿಗೆ ಟಿಕೆಟ್ ನೀಡುವ ಮೊದಲು ಕಾಂಗ್ರೆಸ್‌ನಿಂದ ವೀಣಾ ಕಾಶಪ್ಪನವರ್ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಬಿಟ್ಟು ಸಂಯುಕ್ತಾಗೆ ನೀಡದ್ದೆ ಮುಳುವಾಯಿತಾ ಎಂಬ ಅನುಮಾನ ಕಾಡುತ್ತಿದೆ.
ಅಲ್ಲದೇ ಸಂಯುಕ್ತಾ ಪಾಟೀಲ್ ಅವರು ತಮಗೆ ಗಜಕೇಸರಿ ಯೋಗ ಇದ್ದು, ತಾವು ಪ್ರಧಾನಿ ಬೇಕಾದರೂ ಆಗಬಹುದು ಎಂದು ಮಾಧ್ಯಮಗಳ ಎದುರು ಹೇಳಿಕೆ ಕೊಟ್ಟಿದ್ದರು. ಇದು ಬಿಜೆಪಿ ನಾಯಕರಿಂದ ತೀವ್ರ ಟೀಕೆಗೆ, ಅಪಹಾಸ್ಯಕ್ಕೆ ಗುರಿಯಾಗಿತ್ತು. ಅಂತೂ ಇಂತೂ ಕ್ಷೇತ್ರದಲ್ಲಿ ಕಮಲ ಮತ್ತೆ ಅರಳಿದೆ, ಆಡಳಿತ ಪಕ್ಷ ಕಾಂಗ್ರೆಸ್‌ಗೆ ಆಘಾತ ಆಗಿದೆ.












Click it and Unblock the Notifications