Bagalkote Lok Sabha Election 2024 results: ಬಿಜೆಪಿ vs ಕಾಂಗ್ರೆಸ್, ಯಾರ ಕೈಗೆ ಬಾಗಲಕೋಟೆ ಅಧಿಕಾರ?
ಬಾಗಲಕೋಟೆ, ಮೇ 28: ಕರ್ನಾಟಕದ ಪ್ರಮುಖ ಜಿಲ್ಲೆಯಾಗಿರುವ ಬಾಗಲಕೋಟೆ ಇದು ಲೋಕಸಭಾ ಕ್ಷೇತ್ರವು ಹೌದು. ಈ ಬಾರಿಯ ಚುನಾವಣೆಯಲ್ಲಿ ಬರೋಬ್ಬರಿ 22 ಮಂದಿ ಅಭ್ಯರ್ಥಿಗಳು ಕಣಕ್ಕಿಳಿಯುವ ಮೂಲಕ ಕ್ಷೇತ್ರ ಭಾರೀ ಸುದ್ದಿಯಾಗಿತ್ತು. ಕಳೆದ ಮೇ 07ರಂದು ನಡೆದ ಮತದಾನದಲ್ಲಿ ಬರೋಬ್ಬರಿ 72.66% ರಷ್ಟು ಮತದಾನ ಆಗಿದೆ. ಜೂನ್ 04ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಗೆಲುವು ಯಾರಿಗೆ ಧಕ್ಕಲಿದೆ ಎಂಬ ವಿಶ್ಲೇಷಣೆ ಇಲ್ಲಿದೆ.
2004 ರಿಂದಲೂ ಬಿಜೆಪಿ ಹಿಡಿತ ಹೊಂದಿರುವ ಬಾಗಲಕೋಟೆ ಕ್ಷೇತ್ರದಲ್ಲಿ ಈ ಭಾರಿ ಅಭ್ಯರ್ಥಿ ಬದಲಾವಣೆ ಮೂಲಕ ಕಾಂಗ್ರೆಸ್ ಅದೃಷ್ಟ ಪರೀಕ್ಷೆ ಇಳಿದಿದೆ. ಜೊತೆಗೆ ಒಂದಷ್ಟು ರಾಜಕೀಯ ತಂತ್ರಗಾರಿಕೆ ಮೂಲಕ ಬಿಜೆಪಿ ಕೋಟೆ ಕೆಡವಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿತ್ತು.

ಬಿಜೆಪಿಯಿಂದ ಪಿ.ಸಿ.ಗದ್ದಿಗೌಡರ್ ಕಣ್ಣಕ್ಕಿಳಿದರೆ, ಅವರ ವಿರುದ್ಧ ತೆರೆಮರೆಯ ಕಸರತ್ತಿನ ಬಳಿಕ ಕಾಂಗ್ರೆಸ್‌ನಿಂದ ಸಂಯುಕ್ತಾ.ಎಸ್. ಪಾಟೀಲ್ ಅವರು ಸ್ಪರ್ಧಿಸಿದರು. ಹಲವು ಸಿದ್ಧತೆ, ತಂತ್ರಗಳ ಮೂಲಕವೇ ಕಾಂಗ್ರೆಸ್ ವರಿಷ್ಠರು ನಿರ್ಧರಿಸಿ ಸಂಯುಕ್ತಾ ಅವರಿಗೆ ಟಿಕೆಟ್ ನೀಡಿದರು.
ಟಿಕೆಟ್ ನಿರ್ಧಾರದಿಂದ 'ಕೈ' ಸುಟ್ಟುಕೊಳ್ಳುತ್ತಾ ಕಾಂಗ್ರೆಸ್?
ಇದು ಕಾಂಗ್ರೆಸ್‌ನ ಒಳಬೇಗುದಿಗೆ ಕಾರಣವಾಯಿತು. ಏಕೆಂದರೆ ಬಾಲಗಕೋಟೆಯಿಂದ ವೀಣಾ ಕಾಶಪ್ಪನವರ್ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು. ಇವರ ಹಿಂದೆಯೋ ಸಾಕಷ್ಟು ಬೆಂಬಲ ಇರುವುದು ಗೊತ್ತೆ ಇದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ವೀಣಾ ಅವರನ್ನು ನಿರ್ಲಕ್ಷ್ಯ ಮಾಡಿ ಕೈ ಸುಟ್ಟುಕೊಳ್ಳಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದವು.
ಇತ್ತ ಬಿಜೆಪಿಯು ಕ್ಷೇತ್ರದಲ್ಲಿ ಬಲ ಮತ್ತು ಹಿಡಿತ ತಪ್ಪದಂತೆ ಪ್ಲಾನ್ ಮಾಡಿಕೊಂಡು ಮತ್ತೊಮ್ಮೆ ಪಿಸಿ ಗದ್ದಿಗೌಡರ ಅನ್ನು ಕಣಕ್ಕಿಸಲಿತು. ಈ ಮೂಲಕ ಗೆಲ್ಲುವ ಕುದುರೆಯನ್ನು ಅಖಾಡಕ್ಕೆ ಇಳಿಸಿರುವ ವಿಶ್ವಾದಲ್ಲಿ ಬಿಜೆಪಿ ಬೀಗಿದೆ. ಆದರೆ ರಾಜಕಾರಣ ಮತ್ತು ಚುನಾವಣೆಯಲ್ಲಿ ಯಾವುದನ್ನು ಮೊದಲೇ ತೀರ್ಮಾನಿಸಲು ಆಗುವುದಿಲ್ಲ.
ಬಿಜೆಪಿಗೆ ಜಾತಿ ಆಧಾರಿತ ಮತಗಳ ಪ್ರಭಾವ?
ವರ್ಷಗಳಿಂದ ಜನರ ಸೇವೆ ಮಾಡುತ್ತಾ ಗುರುತಿಸಿಕೊಂಡಿದ್ದ ವೀಣಾ ಕಾಶಪ್ಪನವರ್ ವಿಜಯಾನಂದ ಕಾಶಪ್ಪನವರ ಪತ್ನಿ. ರಾಜಕೀಯ ವಲಯದಲ್ಲಿ ಈ ದಂಪತಿಗಳು ಗುರುತಿಸಿಕೊಂಡವರು. ವೀಣಾ ಅವರಿಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಅವರ ಬೆಂಬಲಿಗರು ಪ್ರತಿಭಟನೆ ಮಾಡಿದರು.

ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿನ ಬೆಳವಣಿಗೆಗಳು ಬಿಜೆಪಿಗೆ ವರದಾನವಾಗಬಹುದು. ಲಿಂಗಾಯತ ಮತಗಳು ಹೆಚ್ಚಿರುವ ಕಡೆ ಬಿಜೆಪಿ ಪಕ್ಷ ಅಧಿಕಾರ ಹಿಡಿದ ಉದಾಹರಣೆ ಸಾಕಷ್ಟಿವೆ. ಇಲ್ಲಿಯೂ ಅದೇ ರೀತಿಯ ಆಗಬಹುದೆಂದು ವಿಶ್ಲೇಷಿಸಲಾಗುತ್ತಿದೆ. ಇದೆಲ್ಲ ಉತ್ತರ ಸಿಗಲು ಜೂನ್ 04ರವರೆಗೆ ಕಾಯಬೇಕಿದೆ.
ಹಿಂದಿನ ಚುನಾವಣೆಗಳ ಮಾಹಿತಿ
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಅದರಲ್ಲಿ ಐದರಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಮೂರು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದನ್ನೆ ಕಾಂಗ್ರೆಸ್ ಬಂಡವಾಳ ಮಾಡಿಕೊಂಡು ಗೆಲ್ಲಲು ಪ್ಲಾನ್ ಮಾಡಿಕೊಂಡಿದೆ. ಇದಕ್ಕೆ ಬಿಜೆಪಿ ಸಕ್ಷೇತ್ರದಲ್ಲಿ ಅಧಿಕಾರ ಕಳೆದುಕೊಳ್ಳದಂತೆ ಪ್ರತಿ ತಂತ್ರ ರೂಪಿಸಿ ಚುನಾವಣೆ ಎದುರಿಸಿತ್ತು.
ಹ್ಯಾಟ್ರೀಕ್ ಬಾರಿಸ್ತಾರಾ ಪಿಸಿಜಿ?
2014ರಲ್ಲಿ ಬಾಗಲಕೋಟೆಯಲ್ಲಿ ಪಿಸಿ ಗದ್ದಿಗೌಡರ ಕಾಂಗ್ರೆಸ್ ವಿರುದ್ಧ ಒಟ್ಟು 5.7 ಲಕ್ಷ ಮತ ಪಡೆದು ಗೆದ್ದಿದ್ದರು. ನಂತರ 2019ರಲ್ಲಿ ಇದೇ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ ಅವರು ಕಾಂಗ್ರೆಸ್ ವಿರುದ್ಧ ಒಟ್ಟು 6.64 ಮತ ಪಡೆದು ಗೆಲವು ಸಾಧಿಸಿದ್ದರು. ಈ ಬಾರಿಯು ಬಿಜೆಪಿ ಅಭ್ಯರ್ಥಿ ಬಹುಮತಗಳಿಂದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications