ಧಾರ್ಮಿಕ ಟೋಪಿ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗೆ ಥಳಿತ: 7 ಮಂದಿ ವಿರುದ್ಧ FIR
ಬಾಗಲಕೋಟೆ, ಮೇ 30: ಧಾರ್ಮಿಕ ಟೋಪಿ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗೆ ಬಂದ ವಿದ್ಯಾರ್ಥಿಯನ್ನು ಥಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತೇರದಾಳ ಪೊಲೀಸ್ ಠಾಣೆಯ ಪಿಎಸ್ಐ ರಾಜು ಬೀಳಗಿ, ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಗಣಿ ಪಿ, ಹೆಚ್. ಮಲ್ಲಿಕಾರ್ಜುನ ಕೆಂಚಣ್ಣವರ, ಎಸ್ ಬಿ ಕಲಾಟೆ, ಎಸ್.ಸಿ. ಮದನಮಟ್ಟಿ, ಸನ್ನತ್ತಿ ಹಾಗೂ ಕಾಲೇಜ್ ಪ್ರಿನ್ಸಿಪಾಲ್ ಅಣ್ಣಪ್ಪಯ್ಯ ಪೂಜಾರಿ ಸೇರಿ ಏಳು ಜನರ ವಿರುದ್ಧ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದೆ.
ಬನಹಟ್ಟಿಯ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ಫೆಬ್ರವರಿ 18ರಂದು ತೇರದಾಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಘಟನೆ ನಡೆದಿದೆ.
ಘಟನೆ ಖಂಡಿಸಿ ವಿದ್ಯಾರ್ಥಿ ನವೀದ್ ಥರಥರಿ ನ್ಯಾಯಾಲಯದ ಮೊರೆ ಹೋಗಿದ್ದ. ಫೆಬ್ರವರಿ 18ರಂದು ವಿದ್ಯಾರ್ಥಿ ನವೀದ್ ಥರಥರಿ ಕಾಲೇಜಿಗೆ ಟೋಪಿ ಧರಿಸಿ ಬಂದಿದ್ದ. ಆ ಸಂದರ್ಭದಲ್ಲಿ ರಾಜ್ಯಾದಂತ್ಯ ಹಿಜಾಬ್ ವಿವಾದ ವಿವಾದ ಎದ್ದಿತ್ತು. ಮುಸ್ಲಿಂ ಟೋಪಿ ಹಾಕಿಕೊಂಡು ವಿದ್ಯಾರ್ಥಿ ಕಾಲೇಜಿಗೆ ಬಂದಿದ್ದು, ಇದಕ್ಕೆ ಕಾಲೇಜ್ ಪ್ರಿನ್ಸಿಪಾಲ್ ತಕರಾರು ಮಾಡಿದ್ದಾರೆ.

ತೇರದಾಳ ಪೊಲೀಸರಿಗೆ ಕರೆ ಮಾಡಿ ವಿದ್ಯಾರ್ಥಿಯನ್ನು ಹೊರ ಹಾಕಿದ್ದರು. ವಿದ್ಯಾರ್ಥಿ ಮೇಲೆ ಪ್ರಿನ್ಸಿಪಾಲ್ ಸೇರಿ 7 ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು. ನಂತರ ಹಲ್ಲೆ ಆಗಿದೆ ಅಂತ ವಿದ್ಯಾರ್ಥಿ ಜಮಖಂಡಿ ಆಸ್ಪತ್ರೆಗೆ ದಾಖಲಾಗಿದ್ದ. ಇದೀಗ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ಆದೇಶದನ್ವಯ ಎಫ್‌ಐಆರ್ ಹಾಕಲಾಗಿದೆ.

ದೇಶದ ವಿವಿಧೆಡೆ ಸದ್ದು ಮಾಡಿದ ಹಿಜಾಬ್ ವಿವಾದ:
ಉಡುಪಿಯಿಂದ ಆರಂಭವಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸಿ ನಂತರ ದೇಶದ ವಿವಿಧೆಡೆ ಸದ್ದು ಮಾಡಿದ ಹಿಜಾಬ್ ವಿವಾದ. ಯಾಕೆಂದರೆ ಇಂದು ಕರ್ನಾಟಕ ಹೈಕೋರ್ಟ್ ಹಿಜಾಬ್ ವಿವಾದ ಸಂಬಂಧ ಮಹತ್ವದ ತೀರ್ಪು ನೀಡಲಿದೆ. ಹೌದು, ಹಲವು ಕಾಲೇಜುಗಳಲ್ಲಿ ಹಿಜಾಬ್ ವಿವಾದ ಬೆಂಕಿಯಂತೆ ಪಸರಿಸಿದ ಬೆನ್ನೆಲ್ಲೇ ರಾಜ್ಯ ಸರ್ಕಾರ ಹಿಜಾಬ್ ಧರಿಸಲು ನಿರ್ಬಂಧ ಹೇರಿತ್ತು. ಈ ಹಿನ್ನೆಲೆ ಕಾಲೇಜುಗಳ ಮುಂಭಾಗ ಪ್ರತಿಭಟನೆ ಹಾಗೂ ಪರ ವಿರೋಧ ಚಟುವಟಿಕೆಗಳಿಗೆ ಇದು ಕಾರಣವಾಗಿತ್ತು. ಈ ನಡುವೆ ತಮ್ಮ ಹಕ್ಕಿಗಾಗಿ ಉಡುಪಿಯ ಮುಸ್ಲಿಂ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಮೊದಲು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಕೆಲ ದಿನ ವಿಚಾರಣೆ ನಡೆಸಿತ್ತಾದರೂ, ಧಾರ್ಮಿಕ ಸೂಕ್ಷ್ಮ ಪ್ರಕರಣವಾದ್ದರಿಂದ ವಿಸ್ತೃತ ಪೀಠ ವಿಚಾರಣೆ ನಡೆಸುವ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟಿತ್ತು.

ತೀವ್ರ ವಿವಾದದ ಸ್ವರೂಪ ಪಡೆದ ಹಿಜಾಬ್
ಜನವರಿ ತಿಂಗಳಲ್ಲಿ ಉಡುಪಿಯಲ್ಲಿ ಹಿಜಾಬ್ ವಿವಾದ ಆರಂಭವಾಯಿತು. ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿ 6 ವಿದ್ಯಾರ್ಥಿಗಳು ಬಂದಿದ್ದರು. ಇದಕ್ಕೆ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಹಿಜಾಬ್ ಧರಿಸದಂತೆ ಸೂಚನೆ ನೀಡಿತ್ತು. ಇದಾದ ಬಳಿಕ ಈ ವಿದ್ಯಾರ್ಥಿಗಳು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದ ಮೂಲಕ ತಮಗೆ ಹಿಜಾಬ್ ಧರಿಸಲು ನಿರ್ಬಂಧ ಇರುವ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೇ ಕಾಲೇಜು ಮುಂಭಾಗ ಈ ಆರು ವಿದ್ಯಾರ್ಥಿಗಳು ಪ್ರತಿಭಟನೆಗೆ ನಡೆಸಿದ್ದರು. ಇದು ತೀವ್ರ ವಿವಾದದ ಸ್ವರೂಪ ಪಡೆದಿತ್ತು.












Click it and Unblock the Notifications