ದೆಹಲಿ ಕೊಲೆ ನೆನಪಿಸಿದ ಮುಧೋಳ ಹತ್ಯೆ: ತಂದೆಯನ್ನು 30 ತುಂಡು ಮಾಡಿ ಬೋರ್‌ವೆಲ್‌ಗೆ ಎಸೆದ ಮಗ

ಬಾಗಲಕೋಟೆ, ಡಿ. 13: 20 ವರ್ಷದ ಯುವಕನೋರ್ವ ತನ್ನ ತಂದೆಯನ್ನು ಕೊಲೆಗೈದು ಶವವನ್ನು ಕತ್ತರಿಸಿ ಜಮೀನಿನಲ್ಲಿದ್ದ ಬೋರ್‌ವೆಲ್‌ಗೆ ಎಸೆದಿರುವ ಘಟನೆ ಬಾಗಲಕೋಟೆಯಲ್ಲಿ ವರದಿಯಾಗಿದೆ.

ದೆಹಲಿಯ ಶ್ರದ್ಧಾ ವಾಕರ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆಕೆಯ ಪ್ರೇಮಿಯೇ ಆಕೆಯನ್ನು ಕೊಲೆ ಮಾಡಿ 36 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟು ಪ್ರತಿದಿನ ಕಾಡಿಗೆ ಹೋಗಿ ಎಸೆದಿದ್ದರು. ಹಾಗೆಯೇ ಬಾಗಲಕೋಟೆಯ ಈ ಹತ್ಯೆ ಕೂಡ ಜನರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಏಕೆಂದರೇ ಎರಡರಲ್ಲೂ ಸಾಮ್ಯತೆ ಒಂದೇಯಾಗಿದೆ.

ಹೌದು, ಬಾಗಲಕೋಟೆಯ ಮುಧೋಳ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆಯಲ್ಲಿಯೂ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೂ ಅಸಾಧಾರಣ ಸಾಮ್ಯತೆ ಇದೆ. ಏಕೆಂದರೆ ಮಗನೊಬ್ಬ ತನ್ನ ತಂದೆಯನ್ನೇ ಕೊಲೆ ಮಾಡಿ 30 ತುಂಡುಗಳನಣಾಗಿ ಕತ್ತರಿಸಿದ್ದಾನೆ.

20 Year Old Son killed His Father and Dump The Body In Borewell

ಮೃತರನ್ನು 54 ವರ್ಷದ ಪರಶುರಾಮ ಕುಳಲಿ ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಯನ್ನು 20 ವರ್ಷದ ವಿಠಲ ಕುಳಲಿ ಎಂದು ಗುರುತಿಸಲಾಗಿದೆ.

ಮೃತ ಪರಶುರಾಮ ಕುಳಲಿ ನಿತ್ಯ ಮದ್ಯಪಾನ ಮಾಡಿ ಬಂದು ಮಗನಿಗೆ ಬೈಯುವುದು, ಹೊಡೆಯುವುದು ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ರೋಸಿ ಹೋಗಿದ್ದ ಮಗ ವಿಠ್ಠಲ ಕುಳಲಿ ತಂದೆಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾರೆ.

ಕೊಲೆ ಮಾಡಿದ ನಂತರ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಹೂಳಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮ ಹೊಲಕ್ಕೆ ಕೊಂಡೊಯ್ದಿದ್ದಾರೆ. ಆದರೆ, ಶವ ಹೂತರೆ ಸಿಲುಕಿ ಬೀಳುತ್ತೇನೆ ಎಂದು ತಂದೆಯ ಮೃತದೇಹವನ್ನು 30 ತುಂಡುಗಳನ್ನಾಗಿ ಮಾಡಿ ಬೋರ್​ವೆಲ್​ಗೆ ಹಾಕಿದ್ದಾರೆ.

ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುವಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಶವದ ತುಂಡುಗಳನ್ನು ಎಸೆದಿರುವ ಕೊಳವೆ ಬಾಯಿ ಅಗೆಯುವ ಕಾರ್ಯಾಚರಣೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+