ರಾಹುಲ್ ಮಾನವೀಯತೆಯ ಸಾಕಾರಮೂರ್ತಿ ಎಂದ ಸಿಧುಗೆ ಮಂಗಳಾರತಿ

Recommended Video

      ರಾಹುಲ್ ಗಾಂಧಿಯನ್ನ ನವಜೋತ್ ಸಿಂಗ್ ಸಿಧ್ದು ಹೊಗಳಿದ್ದಕ್ಕೆ ಟ್ವಿಟ್ಟಿಗರು ಗರಂ | Oneindia Kannada

      ನವದೆಹಲಿ, ಡಿಸೆಂಬರ್ 11 : "ರಾಹುಲ್ ಭಾಯ್ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಮಾನವೀಯತೆಯ ಸಾಕಾರಮೂರ್ತಿ ಅವರು. ಯಾವ ಕೈ ಭಾರತದ ಭವಿಷ್ಯವನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಹೋಗುತ್ತಾರೆ ಆ ಕೈ ಬಲವಾಗಿವೆ. ಇನ್ನು ಬಿಜೆಪಿಯದ್ದು, ಬಿದ್ದರೂ ಮೀಸೆ ಮಣ್ಣಾಗುವುದಿಲ್ಲ!"

      ಹೀಗೆಂದು ವೀಕೆಂಡ್ ವಿತ್ ಕಪಿಲ್ ಶೋನಲ್ಲಿ ಶಾಯರಿ ಹೊಡೆಯುತ್ತ, ಕ್ರಿಕೆಟ್ ಮೈದಾನದ ಕಾಮೆಂಟರಿ ಬಾಕ್ಸ್ ನಲ್ಲಿ ಕುಳಿತು ಡೈಲಾಗ್ ಹೊಡೆಯುತ್ತ ನಗೆಯ ಅಲೆ ಎಬ್ಬಿಸುತ್ತಿದ್ದ, ಮಾಜಿ ಕ್ರಿಕೆಟಿಗ, ಮಾಜಿ ಕಾಮೆಡಿಯನ್ ನವಜ್ಯೋತ್ ಸಿಂಗ್ ಸಿಧು ಅವರು ರಾಹುಲ್ ಅವರನ್ನು ಹಾಡಿ ಹೊಗಳಿದ್ದಾರೆ.

      ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ನೊಗ ಹೊತ್ತು ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ, ಐದು ರಾಜ್ಯಗಳ ಚುನಾವಣೆಯಲ್ಲಿ ಛತ್ತೀಸ್ ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಮುನ್ನಡೆ ಸಾಧಿಸಿರುವ ಸಂದರ್ಭದಲ್ಲಿ, ರಾಹುಲ್ ಅವರ ನಾಯಕತ್ವ ಕುರುತಿ ಸಿಧು ಆಡಿರುವ ಮಾತುಗಳಿವು.

      ತಮ್ಮ ರಂಗ್ ರಂಗೀನ್ ಮಾತುಗಾರಿಕೆಯಿಂದಲೇ ಮೆಚ್ಚುಗೆ ಗಳಿಸುತ್ತಿದ್ದ 'ಸಿಕ್ಸರ್' ಸಿಧು, ಇತ್ತೀಚಿನ ದಿನಗಳಲ್ಲಿ ತಮ್ಮ ಮಾತುಗಾರಿಕೆಯಿಂದಲೇ ಸಾಕಷ್ಟು ವಿವಾದಕ್ಕೂ ಈಡಾಗಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅಲ್ಲಿಗೆ ಹೋಗಿದ್ದಕ್ಕೆ ಅವರ ಮೇಲೆ ಟೀಕೆಯ ಸುರಿಮಳೆಯೂ ಆಗಿತ್ತು.

      ಸಿಧು ಭಾಷೆಯಲ್ಲೇ ಟ್ವಿಟ್ಟಿಗರ ತಿರುಗೇಟು

      ಸಿಧು ಭಾಷೆಯಲ್ಲೇ ಟ್ವಿಟ್ಟಿಗರ ತಿರುಗೇಟು

      ಈಗ ಟ್ವಿಟ್ಟಿಗರು ಅವರದೇ ಭಾಷೆಯಲ್ಲಿ ಸಿಧುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸರ್ದಾರ್ಜೀ ಹೀಗೆ ಬೊಗಳುತ್ತಿರಿ. ಕಾಂಗ್ರೆಸ್ಸಿನ ಮಾನ ಮರ್ಯಾದೆ ಹರಾಜಾಗುತ್ತಿರುತ್ತದೆ. ಕಾಂಗ್ರೆಸ್ (ರಾಹುಲ್ ಗಾಂಧಿ) ಪಾಕಿಸ್ತಾನಕ್ಕೆ, ಹಫೀಜ್ ಸಯೀದ್ ಅವನಿಗೆ, ನಕ್ಸಲರಿಗೆ, ಮಾವೋಗಳಿಗೆ, ರೋಹಿಂಗ್ಯಾಗಳಿಗೆ ಸಾಥ್ ನೀಡುತ್ತ ಸಾಗುತ್ತಾರೆ, ಹಿಂದೂಸ್ತಾನಿಗಳಿಗಲ್ಲ. ಹೀಗೆ ಆಗಲು ಎಂದೂ ಬಿಡುವುದಿಲ್ಲ ಎಂದು ರಾಜೇಶ್ ಶುಕ್ಲಾ ಎಂಬುವವರು ಸಿಧುಗೆ ಮಂಗಳಾರತಿ ಮಾಡಿದ್ದಾರೆ.

      ಸಿಧು ಮೇಲೆ ವ್ಯಂಗ್ಯದ ಟೀಕಾಸ್ತ್ರ

      ಸಿಧು ಮೇಲೆ ವ್ಯಂಗ್ಯದ ಟೀಕಾಸ್ತ್ರ

      ನವಜ್ಯೋತ್ ಸಿಂಗ್ ಸಿಧು ಅವರ ಹೊಸ ಹೆಸರು ಪಾಕಿಸ್ತಾನ್ ಕಾ ಕುತ್ತಾ ಎಂದು ಒಬ್ಬರೆಂದಿದ್ದರೆ, ನನ್ನ ಗಂಟಲು ಸರಿಯಾಯಿತು ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ಹೀಗೇ ಹೇಳ್ತಾ ಇರ್ತೀರಾ ಇವಿಎಂ ಬಗ್ಗೆಯೂ ಏನಾದರೂ ಹೇಳ್ತೀರಾ ಎಂದು ಸಿಧು ಅವರನ್ನು ಒಬ್ಬರು ಕೆಣಕಿದ್ದರೆ, ಇವಿಎಂ ಸರಿಯಾಗಿದ್ದರೆ ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ 150ಕ್ಕಿಂತ ಹೆಚ್ಚು ಸ್ಥಾನಗಳು ಬರುತ್ತಿದ್ದವು ಎಂದು ಮಗದೊಬ್ಬರು ವ್ಯಂಗ್ಯದ ಟೀಕಾಸ್ತ್ರ ಎಸೆದಿದ್ದಾರೆ.

      ಸರ್ದಾರನ ಮಗನಂತೆ ಕಾಣಿಸುತ್ತಿಲ್ಲ

      ಸರ್ದಾರನ ಮಗನಂತೆ ಕಾಣಿಸುತ್ತಿಲ್ಲ

      ಸಿಧು ಅವರೇ, ನೀವು ನಿಮ್ಮ ಡಿಎನ್ಎ ಚೆಕ್ ಮಾಡಿಸಿಕೊಳ್ಳಿ. ನೀವು ಯಾವ ರೀತಿಯಿಂದಲೂ ಸರ್ದಾರನ ಮಗನಂತೆ ಕಾಣಿಸುತ್ತಿಲ್ಲ ಎಂದು ಕಾಮಿಡಿ ಕಿಂಗ್ ಮೇಲೆ ಕೆಂಡ ಕಾರಿದ್ದಾರೆ. ಇವರು ಸರದಾರರ ಹೆಸರಿಗೇ ಕಳಂಕ, ಸೂಪರ್ ಗಿರಗಿಟ್ ಈಗ ಸೂಪರ್ ಚಮಚಾ ಆಗಿದ್ದಾರೆ. ಸರ್ದಾರರೇ, ಸಾಕು ಸುಮ್ಮನಾಗಿ ಇನ್ನೂ ಎಷ್ಟು ಕೆಳಗೆ ಬೀಳುತ್ತೀರಿ ಎಂದು ನೈತಿಕತೆಯ ಪಾಠವನ್ನೂ ಟ್ವಿಟ್ಟಿಗರು ಮಾಡಿದ್ದಾರೆ.

      ಕಪಿಲ್ ಶರ್ಮಾ, ಸಿಧುವನ್ನು ಜಡ್ಜ್ ಮಾಡಬೇಡಿ

      ಕಪಿಲ್ ಶರ್ಮಾ, ಸಿಧುವನ್ನು ಜಡ್ಜ್ ಮಾಡಬೇಡಿ

      ನೀವು ಎಷ್ಟೇ ಚಮಚಾಗಿರಿ ಮಾಡಿರಿ ಮುಂದಿನ ಬಾರಿಯೂ ನೀವೆಂದೂ ಮುಖ್ಯಮಂತ್ರಿ ಆಗಲ್ಲ. ಏಕೆಂದರೆ, ಅಮರಿಂದರ್ ಸಿಂಗ್ ಸೈನಿಕರಾಗಿದ್ದಾರೆ ಮತ್ತು ನಿಜವಾದ ದೇಶಭಕ್ತರಾಗಿದ್ದಾರೆ. ಸೈನಿಕ ಮೊದಲು ದೇಶಕ್ಕಾಗಿ ಕೈ ಎತ್ತುತ್ತಾನೆಯೇ ಹೊರತು ಯಾವುದೇ ಪಕ್ಷಕ್ಕಲ್ಲ. ಕಪಿಲ್ ಶರ್ಮಾ ಅವರೇ, ನೀವು ಸಿದ್ಧುವನ್ನು ಮತ್ತೆ ಜಡ್ಜ್ ಸ್ಥಾನದಲ್ಲಿ ಕೂಡಿಸಿದರೆ ಶೋನೇ ಸರ್ವನಾಶವಾಗುತ್ತದೆ. ಏಕೆಂದರೆ, ಇವನು ಒಬ್ಬ ದೇಶದ್ರೋಹಿ ಎಂದು ಆಕ್ರೋಶದ ಸುರಿಮಳೆಯನ್ನೇ ಬಂಟಿ ದೀಕ್ಷಿತ್ ಎಂಬುವವರು ಸುರಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+