ಕ್ಯಾಪ್ಟನ್ ಅಮರೇಂದರ್ ಸಿಂಗ್‌ಗೆ ಸಿಧು ನೀಡಿದ ಉತ್ತರವೇನು?
ಅಮೃತಸರ, ಮೇ 31: ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ಹಾಗೂ ಸಚಿವ ನವ್‌ಜೋತ್ ಸಿಂಗ್ ಸಿಧು ನಡುವೆ ಭಿನ್ನಮತ ತಾರಕಕ್ಕೇರಿದೆ.
ಸಿಧು ಪ್ರಮುಖ ಖಾತೆಯನ್ನು ಹಿಂಪಡೆಯಲು ಕ್ಯಾಪ್ಟನ್ ನಿರ್ಧರಿಸಿರುವ ಬೆನ್ನಲ್ಲೇ ಸಿಧು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಗರಾಭಿವೃದ್ಧಿ ಇಲಾಖೆಯನ್ನು ಸಿಧು ಸಮರ್ಥವಾಗಿ ನಿವಹಿಸುತ್ತಿಲ್ಲ ಇದು ಚುನಾವಣೆ ಮೇಲೆ ಪ್ರಭಾವ ಬೀರಿದೆ ಎಂದು ಕ್ಯಾಪ್ಟನ್ ಹೇಳಿದ್ದರು.
ಈ ಸಂಬಂಧ ಈಗ ಸಿಧು ಪ್ರತಿಕ್ರಿಯಿಸಿದ್ದು ಪಂಜಾಬ್ ಸರ್ಕಾರದಲ್ಲಿ 50 ಕ್ಕೂ ಅಧಿಕ ಸಚಿವಾಲಯಗಳಿವೆ ಆದರೆ ನನ್ನ ಇಲಾಖೆಯನ್ನು ಮಾತ್ರ ಟೀಕಿಸುವುದೇಕೆ? ನಾನು ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ, ಹಾಗೆಂದ ಮಾತ್ರಕ್ಕೆ ನಾನು ಅದೇ ತಪ್ಪನ್ನು ಮತ್ತೆ ಮಾಡುತ್ತೇನೆ ಎಂದು ಅರ್ಥವಲ್ಲ.

ನಾನು ಹಿಂದೆಯೂ ಏನು ಹೇಳಿಲ್ಲ, ಈಗಲೂ ಏನು ಹೇಳುವುದಿಲ್ಲ, ನಿರ್ಧಾರ ಅಮರೇಂದರ್ ಸಿಂಗ್ ಅವರಿಗೆ ಬಿಟ್ಟಿದ್ದು, ಅವರು ಹೇಳಿದ್ದನ್ನು ನಾನು ಪಾಲಿಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications