ಅಮಾನತುಗೊಂಡಿರುವ ಎಎಪಿ ಸಂಸದ ಈಗ ಬಿಜೆಪಿ ಪಾಲು
ನವದೆಹಲಿ, ಮಾರ್ಚ್ 29: ಆಮ್ ಆದ್ಮಿ ಪಕ್ಷದ ನಾಲ್ವರು ಸಂಸದ ಪೈಕಿ ಅಮಾನತುಗೊಂಡಿದ್ದ ಪಂಜಾಬಿನ ಸಂಸದರೊಬ್ಬರು, ಈಗ ಭಾರತೀಯ ಜನತಾ ಪಕ್ಷ(ಬಿಜೆಪಿ) ಪಾಲಾಗಿದ್ದಾರೆ. ಎಎಪಿಯಿಂದ ಬಿಜೆಪಿಗೆ ಬಂದ ಹಾಲಿ ಸಂಸದ ಹರೀಂದರ್ ಸಿಂಗ್ ಖಾಲ್ಸಾ ಅವರನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಸ್ವಾಗತಿಸಿದರು.
2014ರ ಲೋಕಸಭೆ ಚುನಾವಣೆಯಲ್ಲಿ ದೇಶದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಮ್ ಅದ್ಮಿಪಕ್ಷಕ್ಕೆ ನಾಲ್ಕು ಕ್ಷೇತ್ರಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಆ ನಾಲ್ಕು ಗೆಲುವು ಪಂಜಾಬ್ ರಾಜ್ಯದಿಂದಲೆ ಬಂದಿದ್ದು ವಿಶೇಷ.

ಪಂಜಾಬಿನಲ್ಲಿ ಎನ್ಡಿಎ ಮಿತ್ರಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ(ಎಸ್ ಎ ಡಿ) ಜತೆಯಿದ್ದ ಹರೀಂದರ್ ಸಿಂಗ್ ಅವರು ಎಎಪಿ ಸೇರಿ, 2014ರಲಿ ಸಂಸತ್ತಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2015ರಲ್ಲಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು.












Click it and Unblock the Notifications