ಅಮೃತಸರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸನ್ನಿ ಡಿಯೋಲ್?
ಅಮೃತ್ ಸರ್, ಏಪ್ರಿಲ್ 21: ಸ್ಟಾರ್ ನಟ ಧರ್ಮೇಂದ್ರ ಅವರ ಪುತ್ರ, ನಟ ಸನ್ನಿ ಡಿಯೋಲ್ ಅವರು ಅಮೃತಸರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ಕಂಡು ಬಂದಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಸನ್ನಿ ಡಿಯೋಲ್ ಭೇಟಿಯಾದ ಬಳಿಕ ಹೀಗೊಂದು ಸುದ್ದಿ ಹಬ್ಬಿದೆ. ಅಮಿತ್ ಷಾ ಅವರ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ್ದ ಸನ್ನಿ, ವಿಮಾನ ನಿಲ್ದಾಣದ ಲಾಂಜ್ ನಲ್ಲಿ ಶುಕ್ರವಾರದಂದು 5 ನಿಮಿಷಗಳ ಕಾಲ ಭೇಟಿಯಾಗಿದ್ದು ನಿಜ, ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದೇನಷ್ಟೇ ಎಂದಿದ್ದರು.
ಪಂಜಾಬಿನಲ್ಲಿ ಶಿರೋಮಣಿ ಅಕಾಲಿ ದಳದ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಒಟ್ಟು 13 ಲೋಕಾಸಭಾ ಸ್ಥಾನಗಳ ಪೈಕಿ ಅಮೃತಸರ್, ಗುರ್ ದಾಸ್ಪುರ್, ಹೋಶಿಯಾರ್ ಪುರ್ 3 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಅಮೃತಸರ ಕ್ಷೇತ್ರಕ್ಕೆ ನಟಿ ಪೂನಂ ದಿಲ್ಲೋನ್ ಹಾಗೂ ರಾಜಿಂದರ್ ಸಿಂಗ್ ಹೆಸರು ಕೂಡ ಕೇಳಿ ಬಂದಿದೆ.

ಸನ್ನಿ ಡಿಯೋಲ್ ಸ್ಪರ್ಧೆ ಕುರಿತು ಈಗಾಗಲೇ ಗಂಭೀರ ಚಿಂತನೆ ನಡೆದಿದ್ದರೂ, ಇನ್ನು ಯಾವುದೇ ಹೆಸರು ಖಚಿತವಾಗಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.
ಸನ್ನಿ ಡಿಯೋಲ್ ಅವರ ಚಿಕ್ಕಮ್ಮ(ಮಲ ತಾಯಿ) ಹಾಲಿ ಸಂಸದೆ ಹೇಮಾಮಾಲಿನಿ ಅವರು ಮಥುರಾದಿಂದ ಸ್ಪರ್ಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications