ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಚಿತ್ರ ಬಿಡುಗಡೆಗೆ ತಡೆ ನೀಡಿ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ

|
Google Oneindia Kannada News

ಪಂಜಾಬ್, ಮಾರ್ಚ್ 16: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯನ್ನೊಳಗೊಂಡ ಹಿಂದಿ ಚಿತ್ರ ಏಪ್ರಿಲ್ 12 ರಂದು ತೆರೆ ಕಾಣಲಿದ್ದು, ಅದಕ್ಕೆ ತಡೆ ನೀಡುವಂತೆ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಚುನಾವಣಾ ಆಯೋಗದ ಮೊರೆ ಹೋಗಿದೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದರಿಂದ ಅದು ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಅದು ದೂರಿದೆ.

ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ಏಪ್ರಿಲ್ 12ಕ್ಕೆ ತೆರೆಗೆ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ಏಪ್ರಿಲ್ 12ಕ್ಕೆ ತೆರೆಗೆ

ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಚಿತ್ರ ಬಿಡುಗಡೆಗೆ ತಡೆ ಕೋರುವಂತೆ ಮನವಿ ಮಾಡಲಾಗಿದೆ.

ಒಬ್ಬ ಸಾಮಾನ್ಯ ಆರೆಸ್ಸೆಸ್ ಕಾರ್ಯಕರ್ತರಾಗಿ ನಂತರ ದೇಶದ ಪ್ರಧಾನಿಯಾಗುವಲ್ಲಿನವರೆಗೆ ಮೋದಿ ತುಳಿದ ಹಾದಿಯ ಅವಲೋಕನ ಈ ಚಿತ್ರದಲ್ಲಿದೆ.

ಮೋದಿ ಪಾತ್ರದಲ್ಲಿ ವಿವೇಕ್ ಒಬೇರಾಯ್

ಮೋದಿ ಪಾತ್ರದಲ್ಲಿ ವಿವೇಕ್ ಒಬೇರಾಯ್

ಈ ಚಿತ್ರದಲ್ಲಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರು ನಟಿಸಿದ್ದು, ಒಮಂಗ್ ಕುಮಾರ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಒಮಂಗ್ ಅವರ ಮೇರಿಕೋಮ್ ಮತ್ತು ರಸಬ್ಜಿತ್ ಚಿತ್ರಗಳು ಸಾಕಷ್ಟು ಸುದ್ದಿ ಮಾಡಿದ್ದವು.

ಪಿಎಂ ಮೋದಿ ಬಯೋಪಿಕ್ ನಲ್ಲಿ ವಿವೇಕ್ ಒಬೇರಾಯ್, ಇಲ್ಲಿದೆ ಮೊದಲ ಪೋಸ್ಟರ್ಪಿಎಂ ಮೋದಿ ಬಯೋಪಿಕ್ ನಲ್ಲಿ ವಿವೇಕ್ ಒಬೇರಾಯ್, ಇಲ್ಲಿದೆ ಮೊದಲ ಪೋಸ್ಟರ್

ಚಿತ್ರೀಕರಣ ಆರಂಭವಾಗಿ ಒಂದು ವರ್ಷ

ಚಿತ್ರೀಕರಣ ಆರಂಭವಾಗಿ ಒಂದು ವರ್ಷ

ಈ ಚಿತ್ರದ ಚಿತ್ರೀಕರಣ ಆರಂಭವಾಗಿ ಅದಾಗಲೇ ಒಂದು ವರ್ಷ ಕಳೆದಿದೆ. 2018 ರ ಜನವರಿಯಲ್ಲೇ ಚಿತ್ರೀಕರಣ ಆರಂಭಿಸಲಾಗಿತ್ತು. ಸಿನಿಮಾದ ಹೆಚ್ಚಿನ ಪಾಲನ್ನು ಗುಜರಾತ್, ಮುಂಬೈ ಮತ್ತು ಉತ್ತರಾಖಂಡ್ ನಲ್ಲಿ ಚಿತ್ರೀಕರಿಸಲಾಗಿದೆ.

ಜೀವನಾವಲೋಕನ

ಜೀವನಾವಲೋಕನ

ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ದಿನದಿಂದ ಆರಂಭಿಸಿ, ಅವರು ಪ್ರಧಾನಿ ಹುದ್ದೆಗೆ ಏರುವವರೆಗಿನ ಏಳುಬೀಳುಗಳ ಅವಲೋಕನ ಈ ಚಿತ್ರದಲ್ಲಿದೆ. ವಿವೇಕ್ ಒಬೇರಾಯ್ ಜೊತೆಗೆ ದರ್ಶನ್ ಕುಮಾರ್, ಬೊಮನ್ ಇರಾನಿ, ಮನೋಜ್ ಜೋಶಿ, ಪ್ರಶಾಂತ್ ನಾರಾಯಣನ್, ಝರೀನಾ ವಹಾಬ್ ಮತ್ತು ಬರ್ಖಾ ಬಿಷ್ತ್ ಸೇನ್ ಗುಪ್ತಾ ಮತ್ತಿತರರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಏಪ್ರಿಲ್ 11 ರಿಂದ ಚುನಾವಣೆ

ಏಪ್ರಿಲ್ 11 ರಿಂದ ಚುನಾವಣೆ

ಲೋಕಸಭೆಗೆ ಏಪ್ರಿಲ್ 11 ರಂದು ಚುನಾವನೆ ನಡೆಯಲಿದ್ದು, ಮಾರ್ಚ್ 10 ರಿಂಡಲೇ ನೀತಿ ಸಂಹಿತ ಜಾರಿಯಲ್ಲಿದೆ. ಈ ಚಿತ್ರ ಬಿಡುಗಡೆಯಾದರೆ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಅದನ್ನು ತಡೆಹಿಡಿಯಬೇಕು ಎಂದು ಮನವಿ ಮಾಡಲಾಗಿದೆ. ಏಪ್ರಿಲ್ 11 ರಿಂದ ಏಳು ಹಂತಗಳಲ್ಲಿ ನಡೆಯುವ ಚುನಾವಣೆಯ ಫಲಿತಾಂಶ ಮೇ 23 ರಂದು ಬಿಡುಗಡೆಯಾಗಲಿದೆ.

English summary
The National Students' Union of India – Goa, the Congress party's student wing, on Friday urged Election Commission to ban the release of Narendra Modi Biopic, alleging that the movie was “propaganda by the BJP to influence” voters during the Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X